ನವದೆಹಲಿ:ಫ್ಯಾಷನ್​​ ಎಂದಾಕ್ಷಣ ಬಣ್ಣ ಬಣ್ಣದ ಬಟ್ಟೆ ಧರಿಸುವ ಮಹಿಳೆಯರೇ ನೆನಪಾಗುತ್ತಾರೆ. ಫ್ಯಾಷನ್​ ಹೆಸರಿನಲ್ಲಿ ಇಂದಾಗುತ್ತಿರುವ ಬೆಳವಣಿಗೆಗಳು ಒಂದೆರಡಲ್ಲ. ಟಿವಿಗಳಲ್ಲಿ ಇದಕ್ಕೆಂದೇ ಪ್ರತ್ಯೇಕ ಹಲವು ಚಾನೆಲ್​​ಗಳೆ ಇವೆ. ಇವುಗಳನ್ನು ನೋಡುವವರ ಸಂಖ್ಯೆಯೂ ಅಧಿಕವಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಯುವಕನೋರ್ವ ಫ್ಯಾಷನ್​ ಲೋಕವನ್ನೇ ಅಣಕಿಸುವಂತಹ ವಿಡಿಯೋ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿರುವುದಲ್ಲದೇ, ನೆಟ್ಟಿಗರನ್ನೂ ಸಹ ನಗೆ ತರಿಸಿದೆ.
ಒಂದಷ್ಟು ಯುವತಿಯರು ಚಿತ್ರ ವಿಚಿತ್ರವಾದ ಬಟ್ಟೆ ಧರಿಸಿ ರ‍್ಯಾಂಪ್ ಮೇಲೆ ನಡೆದುಕೊಂಡು ಬರುತ್ತಿದ್ದರೆ, ಅದನ್ನು ನೋಡುವ ಒಂದಷ್ಟು ಜನರು ಅಲ್ಲೇ ಕುಳಿತಿರುತ್ತಾರೆ. ಇವಿಷ್ಟೂ ಕಣ್ಣ ಮುಂದೆ ಬಂದು ಹೋಗುತ್ತವೆ. ಸದ್ಯ ಈ ಯುವಕ ಮಾಡಿರುವ ನಕಲನ್ನು ನೋಡಿದವರಿಗೆ ನಗು ಬರುವುದಂತೂ ಸತ್ಯ.
Most fashion shows these days…pic.twitter.com/aUFD003STQ
— Dr. Ajayita (@DoctorAjayita)June 29, 2022

ಆದರೆ ಇದೇ ರೀತಿಯ ಫ್ಯಾಷನ್​ ಮಾಡಿರುವ ಯುವಕನ ವಿಡಿಯೋ ಈಗ ಭಾರೀ ವೈರಲ್​ ಆಗುತ್ತಿದೆ. ಮಾಡೆಲ್​​ಗಳು ಯಾವ ರೀತಿ ಬಟ್ಟೆ ಧರಿಸಿ, ನಂತರ ಹೇಗೆ ನಡೆಯುತ್ತಾರೆ ಎಂಬುದನ್ನು ಯುವಕನೋರ್ವ ಮಾಡಿರುವ ವಿಡಿಯೋ ಹಾಸ್ಯಾಸ್ಪದವಾಗಿದ್ದು, ಇದನ್ನು ನೋಡಿದವರು ನಗದೇ ಸುಮ್ಮನೆ ಇರಲು ಸಾಧ್ಯವೇ ಇಲ್ಲ.
ಈ ವಿಡಿಯೋವನ್ನು ಟ್ವಿಟ್ಟರ್​ ಬಳಕೆದಾರರೊಬ್ಬರು ಶೇರ್​ ಮಾಡಿಕೊಂಡಿದ್ದು, ಈವರೆಗೂ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಯಾವ ಮಾಡೆಲ್​ ಕಮ್ಮಿ ಇಲ್ಲ ಎಂಬುವಂತೆ ನಕಲು ಮಾಡಿರುವ ಈ ಯುವಕನ ಪ್ರತಿಭೆಗೂ ಮೆಚ್ಚುಗೆ ವ್ಯಕ್ತವಾಗಿದೆ.(ಏಜೆನ್ಸೀಸ್​)
ಕನ್ಹಯ್ಯಲಾಲ್​​ ಕುಟುಂಬಸ್ಥರಿಗೆ 51ಲಕ್ಷ ರೂ.ಧನಸಹಾಯ: ಸಿಎಂ ಅಶೋಕ್​ ಗೆಹ್ಲೋಟ್​ ಅವರಿಂದ ಚೆಕ್​ ವಿತರಣೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × three =
Remember me
