ಮುಂಬೈ:ಕನ್ನಡದ ‘ರಣವಿಕ್ರಮ’ ಸಿನಿಮಾ ನಟಿ ಅದಾ ಶರ್ಮಾ ಅವರು ಇತ್ತೀಚಿಗೆ ‘ದಿ ಕೇರಳ ಸ್ಟೋರಿ’ ಸಿನಿಮಾ ಮೂಲಕ ಬಿಗ್ ಹಿಟ್ ನೀಡಿದ್ದರು. ಅದಾ ಶರ್ಮಾ ಅವರು ಅನಾರೋಗ್ಯದಿಂದ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಅಯ್ಯೋ…2 ನಿಮಿಷ ಹಿಂದಿಯಲ್ಲಿ ಮಾತನಾಡಿ ಕೆಲಸ ಕಳೆದುಕೊಂಡ ಟೆಕ್ಕಿ!
ಕಮಾಂಡೋ ಚಿತ್ರದ ಪ್ರಮೋಶನ್ ಈವೆಂಟ್ ಕಾರ್ಯಕ್ರಮದಲ್ಲಿ ಆಸ್ವಸ್ಧಗೊಂಡ ಆದಾ ಶರ್ಮಾ ಕುಸಿದಿದ್ದಾರೆ. ಕಾರ್ಯಕ್ರಮದ ನಡುವೆ ಎದ್ದು ವಿಶ್ರಾಂತಿ ಕೊಠಡಿಗೆ ತೆರಳಿದ ಆದಾ ಶರ್ಮಾ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಆದಾ ಶರ್ಮಾರನ್ನು ಆಸ್ಪತ್ರೆ ದಾಖಲಿಸಲಾಗಿದೆ. ತುರ್ತು ನಿಘಾ ಘಟಕದಲ್ಲಿ ಅದಾ ಶರ್ಮಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ:ಚೆಂದ ಕಾಣ್ಬೇಕು ಅಂತಾ..ಪ್ಲಾಸ್ಟಿಕ್ ಸರ್ಜರಿಗಾಗಿ ಮನೆ ಮಾರಿದ ಮಹಿಳೆ; ಮುಂದೇನಾಯ್ತು?…..
ಆದಾ ಶರ್ಮಾ ಅತಿಸಾರ ಹಾಗೂ ವಾಂತಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಹಾರದಲ್ಲಿ ಏರುಪೇರಾಗಿರುವ ಸಾಧ್ಯತೆ ಇದೆ. ದೇಹದಲ್ಲಿ ನೀರಿನ ಅಂಶವೂ ಕಡಿಮೆಯಾಗಿರುವ ಕಾರಣ ಅದಾ ಶರ್ಮಾ ಬಳಲಿದ್ದಾರೆ. ಒತ್ತಡ, ಬಿಡುವಿಲ್ಲದ ಶೂಟಿಂಗ್ ಹಾಗೂ ಕಾರ್ಯಕ್ರಮ, ಜತೆಗೆ ಫುಡ್ ಅಲರ್ಜಿ ಆದಾ ಶರ್ಮಾ ಆರೋಗ್ಯವನ್ನು ಏರುಪೇರು ಮಾಡಿದೆ. ಸದ್ಯ ಅದಾ ಶರ್ಮಾ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಇದನ್ನೂ ಓದಿ:ನಿಮಗಿದು ಗೊತ್ತಾ? ಚಿನ್ನಾಭರಣದಿಂದ ಸೌಂದರ್ಯವಷ್ಟೇ ಅಲ್ಲ ಆರೋಗ್ಯಕ್ಕೂ ಪ್ರಯೋಜನಗಳಿವೆ..
‘ದಿ ಕೇರಳ ಸ್ಟೋರಿ’ ಸಿನಿಮಾದ ರೂಪದಲ್ಲಿ ಅದೃಷ್ಟ ಒಲಿದು ಬಂತು. ಈ ಚಿತ್ರದ ನಂತರ ಅದಾ ಶರ್ಮಾ ಅವರ ಮನೆ ಬಾಗಿಲಿಗೆ ಸಾಲು ಸಾಲು ಅವಕಾಶಗಳು ಬರುತ್ತಿವೆ. ಸದ್ಯ ‘ಕಮಾಂಡೋ’ ಸರಣಿ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಅದಾ ಇದರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
VIDEO | ನೋಡುಗರ ಗುಂಡಿಗೆಯೂ ಗಟ್ಟಿಯಿರಬೇಕು! ಹೆಬ್ಬೆರಳಷ್ಟು ದಪ್ಪದ ಹಗ್ಗದ ಮೇಲೆ ನೂರಾರು ಅಡಿ ಎತ್ತರದಲ್ಲಿ ನಡೆದ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × three =
Remember me
