ಲಡಾಕ್​:ದೇಶದಲ್ಲಿ ಕರೊನಾ ವೈರಸ್​ ಪೀಡಿತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಲಡಾಕ್​ನಲ್ಲಿ ಹಲವರಲ್ಲಿ ಸೋಂಕು ಇರಬಹುದು ಎಂದು ಶಂಕಿಸಲಾಗಿದ್ದು ಅಲ್ಲಿನ ಸರ್ಕಾರ ಸೋಂಕು ತಡೆಗೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಇದುವರೆಗೆ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದ್ದು, ಇಂದು ಕಾಲೇಜುಗಳಿಗೂ ಸಹ ರಜೆ ಘೋಷಣೆ ಮಾಡಲಾಗಿದೆ.
ಲಡಾಕ್​ನಲ್ಲಿ ಕರೊನಾ ವೈರಸ್​ಗೆ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು ಇಂದು ಕಾಲೇಜುಗಳಿಗೂ ಸಹ ರಜೆ ಘೋಷಣೆ ಮಾಡಲಾಗಿದೆ. ಮಾರ್ಚ್​ 31ರವರೆಗೆ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡುರುವುದಾಗಿ ಲಡಾಕ್​ನ ಉನ್ನತ ಶಿಕ್ಷಣ ಕಾರ್ಯದರ್ಶಿ ರಿಗ್ಜಿಯಾನ್​ ಸಂಪೀಲ್​ ಆದೇಶ ಹೊರಡಿಸಿದ್ದಾರೆ.
ಇರಾನ್​ನಿಂದ ಲಡಾಕ್​ಗೆ ಬಂದಿಳಿದಿದ್ದ 76 ವರ್ಷ ವೃದ್ಧ ಮೃತನಾಗಿದ್ದು ಆತನಲ್ಲಿ ಸೋಂಕಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ವೈದ್ಯಕೀಯ ತಪಾಸಣೆಯಲ್ಲಿ ಆತನಲ್ಲಿ ಸೋಂಕಿರುವುದು ಧೃಡವಾಗಿಲ್ಲ. ಒಟ್ಟು 27 ಜನರ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 11 ಜನರ ವರದಿ ಬಂದಿದೆ. ಆ ಪೈಕಿ ಇಬ್ಬರಲ್ಲಿ ಸೋಂಕಿರುವುದು ಧೃಡವಾಗಿದೆ ಎಂದು ಅವರು ರಿಗ್ಜಿಯಾನ್​ ಸಂಪೀಲ್​ ತಿಳಿಸಿದ್ದಾರೆ.(ಏಜೆನ್ಸೀಸ್​)
ಟೆಕ್ಕಿಗಳೇ ಹುಷಾರ್​!: ಬೆಂಗಳೂರಿನ ಎರಡು ಟಾಪ್​ ಟೆಕ್​ ಕಂಪನಿಗಳಲ್ಲೇ ಕರೊನಾ ಕಾಣಿಸಿಕೊಂಡಿದ್ದು

ಶಂಕಿತ ಕರೊನಾ ವೈರಸ್​ ಸೋಂಕಿನಿಂದ ಮೃತಪಟ್ಟ ವೃದ್ಧನ ಶವವನ್ನು ಅವ್ಯವಸ್ಥಿತವಾಗಿ ಇಟ್ಟಿದ್ದ ಕಲಬುರಗಿ ಆಸ್ಪತ್ರೆ ವಿರುದ್ಧ ಜನರ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − sixteen =
Remember me
