ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಭಾರತದ ಚೊಚ್ಚಲ ಪ್ರವಾಸಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ಅಮೆರಿಕದ ಹ್ಯೂಸ್ಟನ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಗಾಗಿ ಆಯೋಜಿಸಲಾಗಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಂತೆ ಟ್ರಂಪ್​ಗೂ ಕೂಡ ಭಾರತದಲ್ಲಿ ‘ಕೆಮ್ ಚೋ ಟ್ರಂಪ್’ (ಹೇಗಿದ್ದೀರಿ ಟ್ರಂಪ್) ಎಂಬ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಆದರೆ ಕಾರ್ಯಕ್ರಮದ ಸ್ಥಳದ ಕುರಿತು ಭಾರತ ಮತ್ತು ಅಮೆರಿಕ ಅಧಿಕಾರಿಗಳು ಒಮ್ಮತಕ್ಕೆ ಬರದಿರುವ ಹಿನ್ನೆಲೆಯಲ್ಲಿ ಟ್ರಂಪ್ ಭೇಟಿ ವಿಳಂಬವಾಗುವ ಸಾಧ್ಯತೆಗಳಿವೆ.
ಗುಜರಾತ್​ನ ಅಹಮದಾಬಾದ್​ನಲ್ಲಿ ಕೆಮ್ ಚೋ ಟ್ರಂಪ್ ಕಾರ್ಯಕ್ರಮ ಆಯೋಜಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈಗಾಗಲೇ ಕೆಲಸಗಳನ್ನೂ ಪ್ರಾರಂಭಿಸಿದೆ. ಟ್ರಂಪ್ ಫೆ. 24 ರಿಂದ 26ರವರಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾರ್ಯಕ್ರಮವನ್ನು ಅಹಮದಾಬಾದ್ ಬದಲು ದೆಹಲಿ ಅಥವಾ ಎನ್​ಸಿಆರ್ ಪ್ರದೇಶದಲ್ಲಿ ಆಯೋಜಿಸುವಂತೆ ಅಮೆರಿಕದ ಅಧಿಕಾರಿಗಳು ಕೋರಿದ್ದು, ಟ್ರಂಪ್ ಅಹಮದಾಬಾದ್​ಗೆ ಪ್ರಯಾಣಿಸಲು ಉತ್ಸುಕರಾಗಿಲ್ಲ ಎಂದಿದ್ದಾರೆ. ಆದರೆ ಮೋದಿ ತಮ್ಮ ತವರು ರಾಜ್ಯದಲ್ಲಿ ಟ್ರಂಪ್ ಆತಿಥ್ಯ ವಹಿಸಲು ನಿರ್ಧರಿಸಿರುವುದರಿಂದ ಟ್ರಂಪ್ ಆಗಮನದ ದಿನಾಂಕ ಗೊತ್ತುಪಡಿಸುವುದರಲ್ಲಿ ಅಧಿಕಾರಿಗಳಿಗೆ ಸಂಕಷ್ಟ ಎದುರಾಗುತ್ತಿದೆ.
ಅಹಮದಾಬಾದ್ ಉತ್ತಮ ಆಯ್ಕೆ:ದೆಹಲಿ ಮತ್ತು ಎನ್​ಸಿಆರ್ ಪ್ರದೇಶದಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲು ಬೇಕಾದ ಸೂಕ್ತ ಸ್ಟೇಡಿಯಂಗಳು ಮತ್ತು ವ್ಯವಸ್ಥೆಗಳು ಕಡಿಮೆ ಇವೆ. ಹೌಡಿ ಮೋದಿ ರೀತಿ 50 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸೇರುವ ಕಾರ್ಯಕ್ರಮಕ್ಕೆ ಅಹಮದಾಬಾದ್ ಸೂಕ್ತ ಆಯ್ಕೆ ಎಂದು ಸರ್ಕಾರ ಅಮೆರಿಕ ಅಧಿಕಾರಿಗಳಿಗೆ ತಿಳಿಸಿದೆ. ಸಿಎಎ , ಎನ್​ಆರ್​ಸಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಂದ ಇರಿಸುಮುರಿಸು ಎದುರಾಗಬಾರದು ಎಂಬುದೂ ಸರ್ಕಾರದ ಚಿಂತನೆ. ದೆಹಲಿ ಟ್ರಾಫಿಕ್ ಜಾಮ್ ಕಾರ್ಯಕ್ರಮಕ್ಕೆ ಅಡಚಣೆ ಆಗಬಹುದು ಎಂದು ಅಂದಾಜಿಸಲಾಗಿದೆ.
ಮೊಟೇರಾದಲ್ಲಿ ಕಾರ್ಯಕ್ರಮ?
ಅಹಮದಾಬಾದ್​ನಲ್ಲಿ ಸಿದ್ಧಗೊಳ್ಳುತ್ತಿರುವ ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೇರಾದಲ್ಲಿ ಟ್ರಂಪ್​ರ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆದಿದೆ. ಸ್ಟೇಡಿಯಂನ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ಟ್ರಂಪ್ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅಲ್ಲಿನ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ. ಮೊಟೇರಾ ಸ್ಟೇಡಿಯಂನಲ್ಲಿ 1,10,000 ಪ್ರೇಕ್ಷಕರ ಆಸನ ವ್ಯವಸ್ಥೆ ಇದೆ. ಈ ಹಿಂದೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ಜಪಾನ್ ಪ್ರಧಾನಿ ಶಿಂಜೋ ಅಬೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಅಹಮದಾಬಾದ್​ಗೆ ಭೇಟಿ ನೀಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + ten =
Remember me
