| ಪವಿತ್ರಾ ಕುಂದಾಪುರ ಬೆಂಗಳೂರು
ಸಮಾಜದ ದುರ್ಬಲ ವರ್ಗದ ಜನರಿಗೆ ಅನ್ಯಾಯವಾದಾಗ ಅವರ ನೆರವಿಗೆ ಧಾವಿಸುವವರು ಯಾರೂ ಇರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಉಚಿತ ಕಾನೂನು ನೆರವು ನೀಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯದಲ್ಲಿ ರಾಜ್ಯ ಕಾನೂನು ಪ್ರಾಧಿಕಾರ ನಿರತವಾಗಿದೆ.
1995ರ ನ.9 ರಂದು ಪ್ರಾಧಿಕಾರ ತನ್ನ ಸೇವೆ ಆರಂಭಿಸಿದ್ದು, ಇದರ ನೆನಪಿಗಾಗಿ ಪ್ರತಿ ವರ್ಷ ನ.9ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯ 1987ರ ಸೆಕ್ಷನ್ 12ರ ಮೂಲಕ ಸೂಚಿಸಲಾದ ಅರ್ಹತಾ ಮಾನದಂಡಗಳನ್ನು ಪೂರೈಸುವ ಯಾವುದೇ ವ್ಯಕ್ತಿಯು ಉಚಿತ ಕಾನೂನು ಸೇವೆ ಪಡೆಯಬಹುದು. ಈ ಅಧಿನಿಯಮದ ಅಡಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಸೇವಾ ಸಮಿತಿ ಪ್ರಾಧಿಕಾರ ರಚಿಸಲಾಗಿದೆ.
ಯಾರು ಅರ್ಹರು?:ಮುಖ್ಯವಾಗಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯ. ಸಂವಿಧಾನದ 23ನೇ ವಿಧಿಯಲ್ಲಿ ಉಲ್ಲೇಖಿಸಿದಂತೆ ಮಾನವ ಕಳ್ಳಸಾಗಣೆಯ ಬಲಿಪಶು, ಮಹಿಳೆ ಅಥವಾ ಮಗು, ಅಂಗವಿಕಲ ವ್ಯಕ್ತಿ, ಸಾಮೂಹಿಕ ವಿಪತ್ತು, ಜನಾಂಗೀಯ ಹಿಂಸಾಚಾರ, ಜಾತಿದೌರ್ಜನ್ಯ, ಪ್ರವಾಹ, ಭೂಕಂಪ ಅಥವಾ ಕೈಗಾರಿಕಾ ದುರಂತದ ಬಲಿಪಶು, ಕಾರ್ಖಾನೆ ಕಾರ್ವಿುಕರು. ಗುಂಪುಘರ್ಷಣೆ, ಗಲಭೆ, ಮತೀಯ ಕಾರಣದಿಂದ ದೌರ್ಜನ್ಯಕ್ಕೆ ಒಳಗಾದವರು, ಮಾನಸಿಕ ಅಥವಾ ಬೇರೆ ಯಾವುದಾದರೂ ನ್ಯೂನ್ಯತೆ ಹೊಂದಿದವರು ಮತ್ತು 3 ಲಕ್ಷ ರೂ. ಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಪ್ರತಿಯೊಬ್ಬರು ಉಚಿತ ಕಾನೂನು ನೆರವು ಪಡೆಯಲು ಅರ್ಹರು.
ಅರ್ಜಿ ಸಲ್ಲಿಕೆ:ಉಚಿತ ಕಾನೂನು ನೆರವು ಪಡೆಯಲು ಬಯಸಿದರೆ ಹತ್ತಿರದ ನ್ಯಾಯಾಲಯದ ಆವರಣದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿ, ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಂಬಂಧಪಟ್ಟ ರಾಜ್ಯ ಕಾನೂನು ಸೇವೆಗಳ ಸಮಿತಿ, ಹೈಕೋರ್ಟ್ ಆವರಣದಲ್ಲಿರುವ ಹೈಕೋರ್ಟ್ ಕಾನೂನು ಸೇವಾ ಸಮಿತಿ. ಸವೋಚ್ಚ ನ್ಯಾಯಾಲಯದ ಮುಂದೆ ಪ್ರಕರಣಗಳಿಗೆ ಸುಪ್ರೀಂಕೋರ್ಟ್ ಕಾನೂನು ಸೇವೆಗಳ ಸಮಿತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಲಿಖಿತ ರೂಪದಲ್ಲಿ ಮೇಲ್ ಇಲ್ಲವೆ ಪತ್ರವನ್ನು ಕಳುಹಿಸುವ ಮೂಲಕ ಅಥವಾ ಸದರಿ ಅಧಿಕಾರಿಗಳು ಸಿದ್ಧಪಡಿಸಿದ ಫಾರಂಗಳನ್ನು ಭರ್ತಿ ಮಾಡುವ ಮೂಲಕ ಪ್ರಾಧಿಕಾರ-ಸಮಿತಿಯನ್ನು ಸಂರ್ಪಸಬಹುದು. ಮೌಖಿಕವಾಗಿ ಕೂಡ ಸಂಬಂಧಪಟ್ಟ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿ ಅಥವಾ ಪ್ಯಾರಾ ಲೀಗಲ್ ಸ್ವಯಂಸೇವಕರು ವ್ಯಕ್ತಿಗೆ ಸಹಾಯ ಮಾಡಬಹುದಾಗಿದೆ.
ಪ್ರಕ್ರಿಯೆ:ವ್ಯಕ್ತಿ ತನ್ನ ಸಮಸ್ಯೆ ಕುರಿತು ತಾಲೂಕು ಸಮಿತಿಗೆ ಅಥವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದಾಗ, ಕಾನೂನು ಪ್ರಾಧಿಕಾರದ ವತಿಯಿಂದ ಪ್ಯಾನಲ್ ವಕೀಲರನ್ನು ನೇಮಕ ಮಾಡಲಾಗುತ್ತದೆ. ನಂತರ ಉಚಿತವಾಗಿ ಕಾನೂನು ಸೇವೆ ಕೊಡಲಾಗುತ್ತದೆ. ಮೊದಲು ಪರಿಹಾರ ವ್ಯಾಜ್ಯಗಳ ಕುರಿತು ರ್ಚಚಿಸಲಾಗುತ್ತದೆ. ಉದಾಹರಣೆಗೆ ಸಿವಿಲ್ ಸಂಬಂಧಿ ವಿಷಯವಿದ್ದಲ್ಲಿ ದೂರುದಾರ ಮತ್ತು ಆರೋಪಿ ಇಬ್ಬರನ್ನೂ ಕರೆಸಿ ಮಾತಿನ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತದೆ. ವಾದಿ ಮತ್ತು ಪ್ರತಿವಾದಿ ರಾಜಿಗೆ ಅಸಮ್ಮತಿ ಸೂಚಿಸಿದಲ್ಲಿ ಯಾವುದೇ ರೀತಿಯ ಒತ್ತಡ ಹೇರುವುದಿಲ್ಲ.
ಉತ್ತಮ ಸವಲತ್ತು:ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಪ್ರತಿ ತಾಲೂಕಿನಲ್ಲಿ ಲೀಗಲ್ ಹೆಡ್ ಕ್ಲಿನಿಕ್​ಗಳನ್ನು ಮತ್ತು ಪ್ರತಿ ನ್ಯಾಯಾಲಯದಲ್ಲಿ ಫ್ರಂಟ್ ಆಫೀಸ್​ನ್ನು ಈಗಾಗಲೇ ತೆರೆಯಲಾಗಿದೆ. ಯಾವುದೇ ಹಂತದಲ್ಲಿ ವಕೀಲರಿಗೆ ಶುಲ್ಕ ಪಾವತಿ ಮಾಡುವಂತಿಲ್ಲ. ಪ್ರಕ್ರಿಯೆ, ಡ್ರಾಫ್ಟಿಂಗ್, ಟೈಪಿಂಗ್ ಕ್ಲರ್ಕ್ ಮತ್ತು ಪ್ಯಾನಲ್ ವಕೀಲರ ಶುಲ್ಕದಂತಹ ವೆಚ್ಚಗಳನ್ನು ಕಾನೂನು ಸೇವಾ ಸಂಸ್ಥೆಗಳು ಭರಿಸುತ್ತವೆ. ವಕೀಲರಿಗೆ ಗೌರವಧನ ನೀಡಲಾಗುತ್ತದೆ. ರಾಜ್ಯದಲ್ಲಿ ಮೂವರು ಪ್ಯಾನೆಲ್ ವಕೀಲರಿದ್ದಾರೆ. ಟೋಲ್ ನಂ 180042590900ಗೆ ಕರೆ ಮಾಡಿದರೆ, ಅವರು ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಸಲಹೆ ನೀಡುತ್ತಾರೆ. ರಾಜ್ಯದಲ್ಲಿ ಒಟ್ಟು 30 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಮತ್ತು 149 ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯನಿರ್ವಹಿಸುತ್ತಿವೆ. ಒಟ್ಟು ಆರು ಖಾಯಂ ಜನತಾ ನ್ಯಾಯಾಲಯಗಳು ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ ಮತ್ತು ಕಲಬುರಗಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಜನತಾ ನ್ಯಾಯಾಲಯ:ತ್ವರಿತ ಗತಿಯಲ್ಲಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದ ಅಡಿಯಲ್ಲಿ ಜನತಾ ನ್ಯಾಯಾಲಯ (ಲೋಕ ಅದಾಲತ್) ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ವಾದಿ ಮತ್ತು ಪ್ರತಿವಾದಿ ಇಬ್ಬರು ಒಮ್ಮತದಿಂದ ತೀರ್ವನಕ್ಕೆ ಬರುತ್ತಾರೆ. ಪ್ರತಿ ಲೋಕ ಅದಾಲತ್​ನಲ್ಲಿ ಕನಿಷ್ಠ ಇಬ್ಬರು ಸಂಧಾನಕಾರರು ಕಾರ್ಯನಿರ್ವಹಿಸುತ್ತಾರೆ. ಅವರಲ್ಲಿ ಒಬ್ಬರು ನಿವೃತ್ತ ನ್ಯಾಯಾಧೀಶರು ಮತ್ತು ಇನ್ನೊಬ್ಬರು ಇತರ ಸಂಧಾನಕಾರರಾಗಿರುತ್ತಾರೆ. ವಾದಿ-ಪ್ರತಿವಾದಿ ಇಬ್ಬರೂ ರಾಜಿಗೆ ಒಪ್ಪಿಗೆ ನೀಡಿಲ್ಲ ಎಂದರೆ ಇಬ್ಬರಿಗೂ ಅನುಕೂಲವಾಗುವಂತೆ ಸಲಹೆ ನೀಡಿ ನ್ಯಾಯಾಲಯದ ಆದೇಶಕ್ಕಾಗಿ ಕಾಯುವಂತೆ ಸೂಚಿಸಲಾಗುತ್ತದೆ.
ಕಾನೂನು ಅರಿವು ಕಾರ್ಯಕ್ರಮ:ರಾಜ್ಯ ಮಟ್ಟದಲ್ಲಿ ಒಟ್ಟು 1,444 ಕಾನೂನು ಸೇವೆಗಳ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದ್ದು, 2782 ಪ್ಯಾನಲ್ ವಕೀಲರು, 95 ಕಾನೂನು ನೆರವು ರಕ್ಷಣಾ ಸಲಹೆಗಾರರು ಮತ್ತು 4,848 ಅರೆಕಾಲಿಕ ಸ್ವಯಂಸೇವಕರು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಮಿತಿಗಳ ಜತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದೇ ದುರ್ಬಲರೆನಿಸಿಕೊಂಡವರು ಹಣಕಾಸಿನ ಸಮಸ್ಯೆಯಿಂದಾಗಿ ನ್ಯಾಯ ಕೇಳಲು ಮುಂದೆ ಬರುತ್ತಿರಲಿಲ್ಲ. ಆದರೆ ಈಗ ಉಚಿತ ಕಾನೂನು ಸೇವೆ ಮೂಲಕ ನ್ಯಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲ್ಯವಿವಾಹ, ಪೋಕ್ಸೋ ಪ್ರಕರಣ ಸೇರಿ ಹಲವು ಅರಿವು ಕಾರ್ಯಕ್ರಮಗಳು ಸಾಮಾನ್ಯರಲ್ಲಿ ಕಾನೂನುಪ್ರಜ್ಞೆ ಮೂಡಿಸಲು ಸಹಕರಿಸಿವೆ.
| ಜೈಶಂಕರ್ ಸದಸ್ಯ ಕಾರ್ಯದರ್ಶಿ, ರಾಜ್ಯ ಕಾನೂನು ಸೇವಾ ಪ್ರಾಧಿಕಾರ
3 ವರ್ಷಗಳ ಸಾಧನೆ
ನ್ಯಾಯಾಲಯದಲ್ಲಿನ ಪ್ರಕರಣಗಳಿಗೆ ನೀಡಿದ ಉಚಿತ ಕಾನೂನು ನೆರವು
* 2021- 4,301
* 2022- 7,348
* 2023 ಸೆ.ವರೆಗೆ-6,922
ಕಾನೂನು ಅರಿವು
* 2021- 40,471
* 2022 -86,837
* 2023-80,017
ನೋಟು ಅಮಾನ್ಯೀಕರಣಕ್ಕೆ 7 ವರ್ಷ: ನೋಟು ರದ್ದತಿಯ ಸಪ್ತ ವರ್ಷಗಳ ಪಯಣ ಹೇಗಿತ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + twenty =
Remember me
