ಚೆನ್ನೈ:ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್​ನಿಂದಾಗಿ ಒಂದೇ ಕುಟುಂಬದ ನಾಲ್ವರು ದುರಂತ ಸಾವಿಗೀಡಾಗಿರುವ ಘಟನೆ ಚೆನ್ನೈನ ಮನಾಲಿಯಲ್ಲಿರುವ ಮಥುರ್​ ಎಂಎಂಡಿಯ ಏರಿಯಾದಲ್ಲಿ ಇಂದು (ಆ. 19) ಮುಂಜಾನೆ ನಡೆದಿದೆ.
ಮೃತರನ್ನು ಸಂತಾನಲಕ್ಷ್ಮೀ ಮತ್ತು ಆಕೆಯ ಮೂವರು ಮಕ್ಕಳಾದ ಸಂಧ್ಯಾ (10), ಪ್ರಿಯಾ ರಕ್ಷಿತಾ (8) ಮತ್ತು ಪವಿತ್ರಾ (8) ಎಂದು ಗುರುತಿಸಲಾಗಿದೆ.
ಒಡೆಯಾ ಎಂಬಾತ ಆನ್​ಲೈನ್​ ಫುಡ್​ ಡೆಲಿವರಿಬಾಯ್​ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಅವರ ಕಾಲಿಗೆ ಏಟು ಬಿದ್ದು ಗಾಯಗೊಂಡರು. ಬಳಿಕ ಅವರನ್ನು ಚೆನ್ನೈನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆತನನ್ನು ನೋಡಿಕೊಳ್ಳಲೆಂದು ಪತ್ನಿ ಆಸ್ಪತ್ರೆಗೆ ಬಂದಿದ್ದರು. ಆಕೆಯ ತಾಯಿ, ಮನೆಯಲ್ಲಿದ್ದ ಮೂವರು ಮೊಮಕ್ಕಳನ್ನು ನೋಡಿಕೊಳ್ಳಲೆಂದು ವಾಪಸ್ಸಾಗಿದ್ದರು.
ಇದನ್ನೂ ಓದಿ:ಬೆತ್ತಲೆ ವಿಡಿಯೋ ಕಾಲ್​ ಮಾಡುವಂತೆ ಗಂಡನಿಂದ ಒತ್ತಾಯ: ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ
ಮೂವರು ಮಕ್ಕಳು ಸಹ ರಾತ್ರಿ ಅಜ್ಜಿಯ ಜತೆ ಮಲಗಿದ್ದರು. ಅವರು ವಾಸಿಸುತ್ತಿದ್ದ ಪ್ರದೇಶದಲ್ಲಿ ಸೊಳ್ಳೆಗಳು ಹೆಚ್ಚಾಗಿದ್ದರಿಂದ ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್​ ಅನ್ನು ಆನ್​ ಮಾಡಿ ಮಲಗಿದ್ದರು. ಗಾಢ ನಿದ್ರೆಯಲ್ಲಿ ಇರುವಾಗ ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್​ ಓವರ್​ಹೀಟ್​ನಿಂದ ಮೆಲ್ಟ್​ ಆಗಿ ಹತ್ತಿರದಲ್ಲಿ ಇದ್ದ ಕಾರ್ಡ್​ಬೋರ್ಡ್​ ಬಾಕ್ಸ್​ ಮೇಲೆ ಬಿದ್ದಿದೆ. ಇದರಿಂದ ಉಂಟಾದ ಹೊಗೆಯಿಂದ ಉಸಿರಾಡಲು ಆಗದೇ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಳಗ್ಗೆ ಎದ್ದು ನೋಡಿದಾಗ ಮನೆಯ ಕಿಟಕಿಗಳಿಂದ ಹೊಗೆ ಆಚೆ ಬರುತ್ತಿರುವುದನ್ನು ನೆರೆಯವರು ಗಮನಿಸಿದರು. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ನಾಲ್ವರು ಮೃತಪಟ್ಟಿರುವು ಬೆಳಕಿಗೆ ಬಂದಿದೆ. ಈ ಘಟನೆ ಆ ಏರಿಯಾ ಜನರನ್ನು ಆತಂಕಕ್ಕೆ ದೂಡಿದೆ.
ಇತ್ತ ಆಸ್ಪತ್ರೆಯಲ್ಲಿರುವ ಒಡೆಯ ಮತ್ತು ಆತನ ಪತ್ನಿಗೆ ಈ ಸುದ್ದಿ ಬರ ಸಿಡಿಲು ಬಡಿದಂತಾಗಿದೆ. ಇನ್ನು ಈ ಘಟನೆಗೆ ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್​ ಕಾರಣ ಎಂದು ಹೇಳಲಾಗಿದ್ದರೂ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇದು ಕೂಡ ಸಂಭಾವ್ಯ ಕಾರಣ ಆಗಿರಬಹುದೆಂದು ತಿಳಿಸಿದ್ದಾರೆ. ಅಲ್ಲದೆ, ಮನೆಯಲ್ಲಿ ಬಳಸದ ಸಿಲಿಂಡರ್​ ಸಹ ಇತ್ತೆಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
‘ಪಪ್ಪಾ ನಾನಿನ್ನೂ ಬದುಕಿದ್ದೇನೆ’; ಅಂತ್ಯಸಂಸ್ಕಾರದ ನಂತರ ವಿಡಿಯೋ ಕರೆ ಮಾಡಿದ ಮಗಳು…ಹಾಗಾದರೆ ಆ ಮೃತದೇಹ ಯಾರದ್ದು?

‘ಅವರು’ ನಿಮ್ಮ ಹೆಂಡತಿಯ ಹತ್ಯೆಗೈದು ಅಂತ್ಯಕ್ರಿಯೆ ಮಾಡಿದ್ದಾರೆ: ಸ್ನೇಹಿತನ ಕರೆಗೆ ಪತಿ ತತ್ತರ

ದೇಶದ ಎಲ್ಲ ಸಂಸ್ಥೆಗಳು ಆರ್​ಎಸ್​ಎಸ್​ ಹಿಡಿತದಲ್ಲಿವೆ: ರಾಹುಲ್​ ಗಾಂಧಿ ಗಂಭೀರ ಆರೋಪ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two × one =
Remember me
