ಪಾಟ್ನಾ:ಲಂಡನ್​ ಮೂಲದ ಮಹಿಳೆಯೊಬ್ಬರು ಬಿಹಾರದ ರಾಜಕೀಯದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಇದೇ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ತಾನು ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಆಕೆ ಹೇಳಿಕೊಂಡಿದ್ದಾರೆ.
ಲಂಡನ್​ನಲ್ಲಿ ವಾಸವಿರುವ ಪುಷ್ಪಮ್​ ಪ್ರಿಯಾ ಚೌಧರಿ ಇಂತದ್ದೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ವಿಶ್ವ ಮಹಿಳಾ ದಿನಾಚರಣೆಯ ದಿನದಂದು (ಮಾ.8) ಅನೇಕ ರಾಷ್ಟ್ರೀಯ ಪತ್ರಿಕೆಗಳಲ್ಲಿ ತಾನು ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಜಾಹಿರಾತನ್ನು ಪ್ರಿಯಾ ಚೌಧರಿ ನೀಡಿದ್ದಾರೆ. ಈಕೆ ಜನತಾದಳ ಯುನೈಟೆಡ್​ನ ಮಾಜಿ ಎಮ್​ಎಲ್​ಸಿ ವಿನೋಧ್​ ಚೌಧರಿಯವರ ಮಗಳು ಎನ್ನುವುದು ವಿಶೇಷ.
ಸಿಎಂ ಅಭ್ಯರ್ಥಿ ಎಂದು ಘೋಷಿಸಿಕೊಂಡಿರುವ ಪ್ರಿಯಾ ಚೌಧರಿ, ನೀವು ಬಿಹಾರನ್ನು ಪ್ರೀತಿಸುತ್ತಿದ್ದು ರಾಜಕೀಯವನ್ನು ದ್ವೇಷಿಸುತ್ತಿದ್ದರೆ ನನ್ನೊಂದಿಗೆ ಕೈ ಜೋಡಿಸಿ ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ. ಒಂದು ವೇಳೆ ಜನರು ಆಕೆಯನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾದಲ್ಲಿ 2025ರೊಳಗೆ ಬಿಹಾರ್​ನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುವುದಾಗಿ ಆಕೆ ಆಶ್ವಾಸನೆ ನೀಡಿದ್ದಾರೆ.
ಲಂಡನ್​ನ ಸಸೆಕ್ಟ್​ ವಿಶ್ವವಿದ್ಯಾಲಯದಲ್ಲಿ ಡೆವಲಪ್​ಮೆಂಟ್​ ಸ್ಟಡೀಸ್​ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಪ್ರಿಯಾ ಚೌಧರಿ ಲಂಡನ್​ ಸ್ಕೂಲ್​ ಆಫ್​ ಎಕಾನಾಮಿಕ್ಸ್​ ಆ್ಯಂಡ್​ ಪೊಲಿಟಿಕಲ್​ ಸೈನ್ಸ್​ನಲ್ಲಿ ಪಬ್ಲಿಕ್​ ಅಡ್ಮಿನಿಸ್ಟ್ರೇಷನ್​ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.
ಪ್ರಸ್ತುತ ಬಿಹಾರದಲ್ಲಿ ಬಿಜೆಪಿ, ಜೆಡಿಯು ಮತ್ತು ಎಲ್​ಜೆಪಿ ಪಕ್ಷದ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಜೆಡಿಯು ಪಕ್ಷದ ಮುಖ್ಯಸ್ಥ ನಿತೀಶ್​ ಕುಮಾರ್​ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತದಲ್ಲಿದ್ದಾರೆ.(ಏಜೆನ್ಸೀಸ್​)
Bihar needs pace, Bihar needs wings, Bihar needs change. Because Bihar deserves better and better is possible. Reject bullshit politics, join Plurals to make Bihar run and fly in 2020.#PluralsHasArrived#ProgressiveBihar2020pic.twitter.com/GiQU00oiJv
— Pushpam Priya Choudhary (@pushpampc13)March 8, 2020

ಹೆರಿಗೆ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆಗೆ ದಾಖಲಾಗಿದ್ದ ಕೊರೊನಾ ಪೀಡಿತ 100 ವರ್ಷದ ವೃದ್ಧ ಸಂಪೂರ್ಣ ಗುಣಮುಖ..!

ಕೊರೊನಾ ಶಂಕಿತ ವ್ಯಕ್ತಿ ಮಂಗಳೂರು ಆಸ್ಪತ್ರೆಯಿಂದ ಪರಾರಿ…ಮನೆಗೆ ಬೀಗ; ಪೊಲೀಸರಿಗೆ ದೂರು ನೀಡಿದ ವೈದ್ಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
