ಹೈದರಾಬಾದ್​:ಶಾದಿ ಡಾಟ್​ ಕಮ್​ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಗಿರವಿ ಅಂಗಡಿಯ ಮ್ಯಾನೇಜರ್​ನನ್ನು ವಂಚಿಸಿ ಹಣದೊಂದಿಗೆ ಪರಾರಿಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ವಂಚನೆಗೆ ಒಳಗಾದ ವ್ಯಕ್ತಿಯನ್ನು ರೇವಂತ್​ ಎಂದು ಗುರುತಿಸಲಾಗಿದೆ. ಈತ ಪೆದ್ದಪಲ್ಲಿ ಜಿಲ್ಲೆಯ ರಾಮಂಗುಂಡಮ್​ ಏರಿಯಾದ ಎನ್​ಟಿಪಿಸಿ ಕಾಲನಿಯ ಗಿರಿವಿ ಅಂಗಡಿಯಲ್ಲಿ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಮೊದಲ ಮದುವೆಯ ಬಳಿಕ ಹಲವು ವೈಮನಸ್ಸಿನ ಕಾರಣದಿಂದಾಗಿ ಮೊದಲ ಪತ್ನಿಯೊಂದಿಗೆ ಡಿವೋರ್ಸ್ ಆಯಿತು. ಬಳಿಕ ಎರಡನೇ ಮದುವೆಯಾಗಲು ಮುಂದಾಗಿದ್ದ ರೇವಂತ್​ಗೆ ಶಾದಿ ಡಾಟ್​ ಕಂನಲ್ಲಿ ವಾರಂಗಲ್​ ಮೂಲದ ಮಾಯಾಲೇಡಿಯ ಪರಿಚಯವಾಗಿದೆ.
ಇದನ್ನೂ ಓದಿ:ನೀವು ತಲೆನೋವಿನೊಂದಿಗೆ ಬೆಳಗ್ಗೆ ಎಚ್ಚರಗೊಳ್ಳುತ್ತೀರಾ? ಹಾಗಾದ್ರೆ ವೈದ್ಯರನ್ನು ಸಂಪರ್ಕಿಸಲು ತಡ ಮಾಡಬೇಡಿ!
ಮಾಯಾಲೇಡಿಯ ಜತೆಗಿನ ಪರಿಚಯ ಸ್ನೇಹಕ್ಕೆ ತಿರುಗಿ, ಬಳಿಕ ಪ್ರೇಮಕ್ಕೆ ತಿರುಗಿದೆ. ಇಬ್ಬರು ಆಗಾಗ ಭೇಟಿ ನೀಡುವುದು ಮತ್ತು ಸಲುಗೆಯಿಂದ ಇರುವುದು ಸಾಮಾನ್ಯವಾಗಿತ್ತು. ಬಳಿಕ ರೇವಂತ್​ ಮದುವೆ ಪ್ರಸ್ತಾಪವನ್ನು ಮುಂದಿಟ್ಟಿದ್ದ. ಈಗಾಗಲೇ ತನಗೆ ಮದುವೆ ಆಗಿ ಡಿವೋರ್ಸ್ ಆಗಿರುವ ವಿಚಾರವನ್ನು ತಿಳಿಸಿದ್ದ. ಈ ವೇಳೆ ಸ್ವಲ್ಪವೂ ಯೋಚಿಸದೇ ಮಾಯಾಲೇಡಿ ಓಕೆ ಎಂದಿದ್ದಕ್ಕೆ ರೇವಂತ್​ ಅಚ್ಚರಿಯನ್ನು ವ್ಯಕ್ತಪಡಿಸಿದ್ದ.
ಇದು ತನ್ನ ಮೊದಲ ಮದುವೆ ಎಂದು ಮಾಯಾಲೇಡಿ, ರೇವಂತ್​ನನ್ನು ನಂಬಿಸಿದ್ದಳು. ಬಳಿಕ ಹಿರಿಯರ ಒಪ್ಪಿಗೆಯನ್ನು ಪಡೆದು ಇಬ್ಬರು ಸರಳವಾಗಿ ಮದುವೆ ಆಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಕೆಲವೇ ದಿನಗಳಲ್ಲಿ ಮಾಯಾ ಲೇಡಿಯ ಮತ್ತೊಂದು ಮುಖ ಕಳಚಿ ಬೀಳಲು ಆರಂಭವಾಯಿತು. ಡ್ರಗ್ಸ್​ ಮತ್ತು ಸಿಗರೇಟ್​ ಬೇಕು ಅಂತ ಕಿರುಕುಳ ನೀಡಲು ಆರಂಭಿಸಿದಳು. ಆಕೆಯ ವರ್ತನೆಯನ್ನು ಕಂಡು ರೇವಂತ್‌ಗೆ ಏನೂ ಅರ್ಥವಾಗದೆ ಸುಮ್ಮನೇ ಇದ್ದ. ಆದರೆ, ಒಂದು ದಿನ ಇದ್ದಕ್ಕಿದ್ದಂತೆ ಅಕ್ಕನ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ವಾಪಸ್​ ಬರಲೇ ಇಲ್ಲ. ಹೋಗುವಾಗ 70 ಸಾವಿರ ರೂ. ಹಣ ಮತ್ತು ಚಿನ್ನವನ್ನು ತೆಗೆದುಕೊಂಡು ಹೋಗಿರುವುದು ರೇವಂತ್​ಗೆ ಗೊತ್ತಾಗಿ ಶಾಕ್​ ಆಗಿತ್ತು.
ಮರಳಿ ಬಾರದಿದ್ದಾಗ ರೇವಂತ್​ ಆಕೆಯ ಸಂಬಂಧಿಕರು ಮತ್ತು ಸ್ನೇಹಿತರು ವಿಚಾರಿದ್ದ. ಈ ವೇಳೆ ಮಾಯಾಲೇಡಿಯ ಅಸಲಿ ಮುಖ ರೇವಂತ್​ಗೆ ಗೊತ್ತಾಗಿದೆ. ಈಗಾಗಲೇ ಆಕೆ ಮೂರು ಬಾರಿ ಮದುವೆಯಾಗಿದ್ದಳು. ಬಳಿಕ ಆಕೆಯ ವಿಳಾಸ ಪಡೆದು ಅವಳಿರುವ ಕಡೆ ರೇವಂತ್​ ಹೋದಾಗ ಆಕೆ ತನ್ನ ಸ್ನೇಹಿತರೊಂದಿಗೆ ಎಂಜಾಯ್​ ಮಾಡುವಾಗ ಸಿಕ್ಕಿಬಿದ್ದಳು. ಈ ರೀತಿ ಏಕೆ ಮಾಡಿದೆ ಎಂದು ಪ್ರಶ್ನೆ ಮಾಡಿದಾಗ, ಸ್ನೇಹಿತರೆಲ್ಲ ಸೇರಿ ರೇವಂತ್​ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ:ಸಿನಿಮಾಗೆ ಬ್ರೇಕ್​ ಕೊಟ್ಟು 2026ರಲ್ಲಿ ಚರಿತ್ರೆ ಸೃಷ್ಟಿಸುತ್ತಾರಾ ನಟ ವಿಜಯ್​? ತಮಿಳುನಾಡಲ್ಲಿ ಹೀಗೊಂದು ಚರ್ಚೆ
ಹಲ್ಲೆ ಮಾಡಿದ್ದಲ್ಲದೆ, ಹಲ್ಲೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾಳೆ. ಅಲ್ಲದೆ, ಹಣಕ್ಕಾಗಿ ಬೇಡಿಕೆಯನ್ನು ಇಟ್ಟಿದ್ದಾಳೆ. ಆಕೆಯ ಕಿರುಕುಳ ತಡೆಯಲಾರದೆ ಕೊನೆಗೆ ರೇವಂತ್ ಎನ್‌ಟಿಪಿಸಿ ಪೊಲೀಸರ ಮೊರೆ ಹೋದರು. ಪ್ರಕರಣ ದಾಖಲಿಸಿರುವ ಪೊಲೀಸರು ಇದೀಗ ಮಾಯಾಲೇಡಿಗಾಗಿ ಹುಡುಕಾಟ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಭೀಮಾ ನದಿ ತೀರದ ಅಕ್ರಮ ಮರಳು ದಂಧೆ ಮೇಲೆ ದಾಳಿ!

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಫೈನ್ ಸ್ಪೀಡ್ ಲಿಮಿಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + six =
Remember me
