ನವದೆಹಲಿ:ಲಾಕ್​ಡೌನ್​ನಿಂದಾಗಿ ಕರೊನಾ ವೈರಸ್​ ಹರಡುವಿಕೆಯ ನಿಧಾನವಾಗಿ ಆಗಿದ್ದು, ಇದೀಗ ಲಾಕ್​ಡೌನ್​ ಸಡಿಲಿಕೆ ಮಾಡಿರುವ ಕಾರಣ, ನವೆಂಬರ್​ ಅಂತ್ಯದ ವೇಳೆಗೆ ಕರೊನಾ ಅತ್ಯಧಿಕವಾಗಿ ತನ್ನ ಪ್ರಭಾವ ಬೀರಲಿದೆ ಎಂಬುದಾಗಿ ತಾನು ಹೇಳಿಯೇ ಇಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್​) ಸ್ಪಷ್ಟನೆ ನೀಡಿದೆ.
ಭಾರತದ ಅತ್ಯುನ್ನತ ವೈದ್ಯಕೀಯ ಸಂಸ್ಥೆಯಾಗಿರುವ ಐಸಿಎಂಆರ್​ ಈ ಸ್ಪಷ್ಟನೆ ನೀಡಿದ್ದು, ಮಾಧ್ಯಮಗಳನ್ನು ವರದಿಯಾಗಿರುವುದು ಸತ್ಯಕ್ಕೆ ದೂರವಾಗಿರುವ ವಿಷಯ ಎಂದು ಹೇಳಿದೆ.
ಇದನ್ನೂ ಓದಿ:17ರಂದು ಹೊರರಾಜ್ಯದ ಬಸ್​ ಕರ್ನಾಟಕಕ್ಕೆ ಎಂಟ್ರಿ: ಯಾವ್ಯಾವ ಊರಿಂದ?
ನವೆಂಬರ್​ ಮಧ್ಯಭಾಗದಲ್ಲಿ ಐಸಿಯು, ಹಾಸಿಗೆ ಮತ್ತು ವೆಂಟಿಲೇಟರ್​ಗಳಿಗೆ ಕೊರತೆ ಬರುವ ಸಾಧ್ಯತೆ ಇದ್ದು, ಇದರಿಂದ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಐಸಿಎಂಆರ್​ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ಮಾಡಿರುವ ವರದಿಯನ್ನು ತನ್ನ ಟ್ವಿಟರ್​ ಖಾತೆಯಲ್ಲಿ ಉಲ್ಲೇಖಿಸಿರುವ ಪರಿಷತ್ತು, ಇದು ಸತ್ಯಕ್ಕೆ ದೂರವಾಗಿರುವ ವಿಷಯ. ಇದನ್ನು ನಂಬಬಾರದು ಎಂದಿದೆ.
ಲಾಕ್​ಡೌನ್​ನಿಂದಾಗಿ ಕರೊನಾ ವೈರಸ್​ ಹರಡುವಿಕೆಯು 34 ರಿಂದ 76 ದಿನಕ್ಕೆ ಮುಂದೂಡಲ್ಪಟ್ಟಿದ್ದು, ಇದೀಗ ಅದು ನವೆಂಬರ್​ ವೇಳೆಗೆ ಹೆಚ್ಚಳವಾಗಲಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದು ಹಾದಿತಪ್ಪಿಸುವ ವರದಿ ಎಂದು ಐಸಿಎಂಆರ್​ ಹೇಳಿದೆ.(ಏಜೆನ್ಸೀಸ್​)

The news reports attributing this study to ICMR are misleading. This refers to a non peer reviewed modelling, not carried out by ICMR and does not reflect the official position of ICMR.pic.twitter.com/OJQq2uYdlM
— ICMR (@ICMRDELHI)June 15, 2020

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 − three =
Remember me
