ನವದೆಹಲಿ:ಮುಂದಿನ 25 ವರ್ಷಗಳು ದೇಶಕ್ಕೆ ಅತ್ಯಂತ ಮಹತ್ವದ್ದಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನದ ಕೊನೆಯ ದಿನವಾದ ಶನಿವಾರ ಸದನವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಾವು ಬ್ರಿಟಿಷ್ ಕಾಲದ ಕಾನೂನುಗಳನ್ನೇ ಪಾಲಿಸುತ್ತಿದ್ದೆವು. ಆದರೆ, ಅಪರಾಧ ದಂಡ ಸಂಹಿತೆಯಂತಹ ಶತಮಾನದಷ್ಟು ಹಳೆಯದಾದ ಕಾನೂನು ಇನ್ನಿಲ್ಲ. ಮುಂದಿನ ತಲೆಮಾರು ದೇಶದ ತನ್ನದೇ ನ್ಯಾಯ ಸಂಹಿತೆ ಅಡಿಯಲ್ಲಿ ಜೀವಿಸಲಿದೆ’ ಎಂದು ಹೇಳಿದರು.
‘ಜಮ್ಮು-ಕಾಶ್ಮೀರದ ಜನರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದರು. ಆದರೆ, ಸಾಮಾಜಿಕ ನ್ಯಾಯದ ಕುರಿತ ನಮ್ಮ ಬದ್ಧತೆಯಿಂದ ಈ ಭಾಗದ ಜನರು ಕೊನೆಗೂ ಸಾಮಾಜಿಕ ನ್ಯಾಯ ಕಾಣುವಂತಾಗಿದೆ. ಅಲ್ಲಿ ಮೊದಲು ಉಗ್ರವಾದಿಗಳು ದೇಶದ ಹೃದಯಕ್ಕೇ ದಾಳಿ ಮಾಡುತ್ತಿದ್ದರು. ಆದರೆ, ಭಯೋತ್ಪಾದನೆ ವಿರುದ್ಧ ನಾವು ಕಠಿಣ ಕಾನೂನು ಅನುಷ್ಠಾನಗೊಳಿಸಿದ್ದೇವೆ’ ಎಂದು ಸರ್ಕಾರದ ಬಿಗಿ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು.
‘ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧಿಸುವ ಮೂಲಕ ಮುಸ್ಲಿಂ ಹೆಣ್ಣುಮಕ್ಕಳ ಘನತೆ ಎತ್ತಿಹಿಡಿದಿದ್ದೇವೆ. ನ್ಯಾಯಾ ಲಯಗಳು ತೀರ್ಪು ನೀಡಿದವು. ಆದರೆ, ಕಾನೂನು ಜಾರಿ ಮಾಡುವ ಜವಾಬ್ದಾರಿ ನಮ್ಮದಾಗಿತ್ತು. ತ್ರಿವಳಿ ತಲಾಖ್​ನಿಂದ ಮಹಿಳೆಯರು ಏನೇನು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು ಎನ್ನುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ, 17ನೇ ಲೋಕಸಭೆ ಇಂಥದ್ದೊಂದು ಸಮಸ್ಯೆಯ ಬೇರನ್ನೇ ಕಿತ್ತೊಗೆದು, ಹೆಣ್ಣು ಮಕ್ಕಳಿಗೆ ನ್ಯಾಯ ನೀಡಿತು’ ಎಂದು ಸಂತಸ ಹಂಚಿಕೊಂಡರು.
ವಿಪಕ್ಷಗಳ ಸಭಾತ್ಯಾಗ:ರಾಜ್ಯಸಭೆಯಲ್ಲಿ ಆರ್ಥಿಕತೆ ಕುರಿತು ಕೇಂದ್ರ ಸರ್ಕಾರ ಮಂಡಿಸಿದ ಶ್ವೇತಪತ್ರದ ಮೇಲೆ ಚರ್ಚೆ ಮಾಡಲು ವಿಪಕ್ಷಗಳು ಹಿಂದೇಟು ಹಾಕಿ ಸದನದಿಂದ ಹೊರ ನಡೆದವು. ರಾಮಮಂದಿರದ ಚರ್ಚೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಸಿಪಿಐ(ಎಂ) ಸಭಾತ್ಯಾಗ ಮಾಡಿತು.
ರಾಮಮಂದಿರ ಚುನಾವಣೆ ಲಾಭಕ್ಕಲ್ಲ:ರಾಮಮಂದಿರ ವಿಚಾರದಲ್ಲಿ ಪ್ರಧಾನಿ ಮೋದಿ ಸಮಾಜದ ಎಲ್ಲ ವರ್ಗಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಮತ್ತು ಸುಪ್ರೀಂಕೋರ್ಟ್ ತೀರ್ಪು ಭಾರತದ ಜಾತ್ಯತೀತ ಗುಣವನ್ನು ಜಗತ್ತಿಗೆ ಪರಿಚಯಿಸಿತು ಎಂದು ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.ಲೋಕಸಭೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಪ್ರಾಣಪ್ರತಿಷ್ಠೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಯಾವುದೇ ದೇಶದಲ್ಲೂ ಬಹುಸಂಖ್ಯಾತ ಸಮಾಜವೊಂದು ತನ್ನ ನಂಬಿಕೆಗೆ ಸಂಬಂಧಿಸಿದ ವಿಷಯದಲ್ಲಿ ಇಷ್ಟು ದಿನ ಕಾಯಬೇಕಾಗಿ ಬಂದಿರಲಿಲ್ಲ. ರಾಮಮಂದಿರವು ದೇಶದ ನಂಬಿಕೆಯನ್ನು ಪುನರುಜ್ಜೀವನಗೊಳಿಸಿದೆ ಎಂದರು.
ಮೋದಿ ಅವರ ನಾಯಕತ್ವ ಹಾಗೂ 11 ದಿನಗಳ ಪ್ರಯಾಸಕರ ಉಪವಾಸದ ಧಾರ್ವಿುಕ ಶಿಸ್ತಿಗೂ ಷಾ ಮೆಚ್ಚುಗೆ ವ್ಯಕ್ತಪಡಿಸಿದರು. ಚುನಾವಣೆ ಲಾಭಕ್ಕಾಗಿ ಬಿಜೆಪಿ ಇದೆಲ್ಲವನ್ನು ಮಾಡುತ್ತಿದೆ ಎಂದು ಕೆಲವರು ಟೀಕಿಸಿದರು. ಆದರೆ, ನಾವು ತ್ರಿವಳಿ ತಲಾಖ್​ನಂತಹ ಆಕ್ಷೇಪಾರ್ಹ ಪದ್ಧತಿಯನ್ನೂ ನಿಷೇಧಿಸಿದೆವು ಎಂಬುದು ಗಮನಾರ್ಹ. ಭಗವಾನ್ ಶ್ರೀರಾಮನ ಪ್ರಾಣಪ್ರತಿಷ್ಠೆ ದಿನದಂದು ಯಾವುದೇ ರಾಜಕೀಯ ಘೊಷಣೆಗಳನ್ನು ಕೂಗಲಿಲ್ಲ. ಏಕತೆಯ ಸಂದೇಶವನ್ನು ಎಲ್ಲರೂ ಒಪ್ಪಬೇಕು ಮತ್ತು ಮುನ್ನಡೆಯಬೇಕು ಎಂದು ಕೇಳಿಕೊಂಡರು.
ಸ್ಪೀಕರ್ ಕಾರ್ಯಕ್ಕೆ ಶ್ಲಾಘನೆ:ದೇಶ ಸುಧಾರಣಾ ಪಥದಲ್ಲಿ ಸಾಗುತ್ತಿರುವುದಕ್ಕೆ ಕಳೆದ ಐದು ವರ್ಷಗಳು ಸಾಕ್ಷಿಯಾಗಿವೆ. ಸದನವನ್ನು ನಿಷ್ಪಕ್ಷಪಾತತೆ ಹಾಗೂ ಸಮತೋಲನ ಕಾಯ್ದುಕೊಂಡು ನಡೆಸಿದ ಸ್ಪೀಕರ್ ಓಂ ಬಿರ್ಲಾ ಅವರೂ ಮೆಚ್ಚುಗೆಗೆ ಅರ್ಹರು. ಹೊಸ ಸಂಸತ್ ಕಟ್ಟಡ ಬೇಕು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ, ಈ ದಿಕ್ಕಿನಲ್ಲಿ ಯಾರೂ ಕೆಲಸ ಮಾಡಿರಲಿಲ್ಲ ಅಥವಾ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ, ಓಂ ಬಿರ್ಲಾ ಅವರ ನಾಯಕತ್ವದಲ್ಲಿ ಇದನ್ನು ಕೈಗೆತ್ತಿಕೊಂಡು, ವಿವಿಧ ಸಭೆಗಳನ್ನು ನಡೆಸಿ, ಈಗ ದೇಶದ ಮುಂದೆ ಹೊಸ ಸಂಸತ್ತು ಘನತೆಯಿಂದ ತಲೆ ಎತ್ತಿ ನಿಂತಿದೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ರಾಮಮಂದಿರ ನಿರ್ಮಾಣ ಆಗುತ್ತಲೇ ಇರಲಿಲ್ಲ. ಮೋದಿ ಅಸಾಧ್ಯವಾದುದನ್ನು ಮಾಡಿದ್ದಾರೆ. ಇದು ರಾಮನ ಜನ್ಮಸ್ಥಳವೇ ಎಂದು ಹಲವರು ಪ್ರಶ್ನಿಸುತ್ತಾರೆ. ಬೇರೆ ಯಾವುದೇ ಮಹಾಪುರುಷನ ಬಗ್ಗೆ ಅವರು ಹಾಗೆ ಹೇಳುತ್ತಾರೆಯೇ? ನಿಮ್ಮ ಜನ್ಮಕ್ಕೆ ಪುರಾವೆ ಏನು? ನಿಮ್ಮ ಹೆತ್ತವರನ್ನು ಪಾಲಕರು ಎನ್ನುವ ಮೊದಲು ನೀವು ಅವರ ಡಿಎನ್​ಎ ಪರೀಕ್ಷೆ ಮಾಡಿದ್ದೀರಾ?
| ಪ್ರತಾಪ್ ಚಂದ್ರ ಸಾರಂಗಿ, ಬಿಜೆಪಿ ಸಂಸದ
ಬಿಜೆಪಿಯ ಜೈಶ್ರೀರಾಮ್ ಘೊಷಣೆಯಲ್ಲಿ ಕೋಪ,ದ್ವೇಷವಿದೆ. ನಿಮ್ಮ ಹೃದಯ ದ್ವೇಷದಿಂದ ತುಂಬಿದೆ. ಇತರರ ಮೇಲೆ ಗುಂಡು ಹಾರಿಸುವ, ಇತರ ಧರ್ಮಗಳ ಪೂಜಾ ಸ್ಥಳಗಳನ್ನು ಅಪವಿತ್ರಗೊಳಿಸುವ ನೀವು ರಾಮಭಕ್ತರಾಗಲು ಸಾಧ್ಯವಿಲ್ಲ.
| ಗೌರವ್ ಗೊಗೊಯ್ ಕಾಂಗ್ರೆಸ್ ಸಂಸದ
ಸೀತೆ ಇಲ್ಲದೆ ರಾಮ ಪೂರ್ಣನಲ್ಲ. ಹೀಗಾಗಿ, ಸೀತೆಯ ಜನ್ಮಸ್ಥಾನ ಎಂದು ನಂಬಲಾದ ಬಿಹಾರದ ಸೀತಾಮಡಿಯಲ್ಲಿ ನರೇಂದ್ರ ಮೋದಿ ಬೃಹತ್ ಸೀತಾ ಮಂದಿರ ನಿರ್ಮಾಣ ಮಾಡಬೇಕು.
| ರಾಮ್​ಪ್ರೀತ್ ಸಿಂಗ್ ಜೆಡಿಯು ಸಂಸದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
