ಗಯಾ: ಗೂಡ್ಸ್​​ ರೈಲಿನಡಿ ಸಿಲುಕಿದರೂ ಪವಾಡ ಸದೃಶನಾಗಿ ವೃದ್ಧನೊಬ್ಬ ಬದುಕಿ ಬಂದಿರುವ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.ಘಟನೆಯ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫತೇಪುರ್ ಬ್ಲಾಕ್‌ನ ಮೋರ್ಹೆ ಗ್ರಾಮದ ನಿವಾಸಿ ಬಾಲೋ ಯಾದವ್ ಎಂದು ಗುರುತಿಸಲಾದ ವಯಸ್ಸಾದ ವ್ಯಕ್ತಿಯೊಬ್ಬ ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಒಂದು ಪ್ಲಾಟ್​​ಫಾರಂನಿಂದ ಮತ್ತೊಂದು ಪ್ಲಾಟ್​​ಫಾರಂಗೆ ತೆರಳಲು ಬಯಸಿದ್ದ. ಆದರೆ ನಡೆಯಲು ಬೇಸರ ಮಾಡಿಕೊಂಡ ಯಾದವ್​ಗೆ ಅಲ್ಲಿಯೇ ನಿಂತಿದ್ದ ಗೂಡ್ಸ್​​ ರೈಲು ಕಂಡಿದೆ.ಇದನ್ನೂ ಓದಿ:ಹೃದಯಾಘಾತದಿಂದ ಕೆಂಗೇರಿ ಮಹಿಳಾ ಸಂಚಾರಿ ಪೊಲೀಸ್ ಸಾವು; ಕರೊನಾಗೆ ಪತಿ ಬಲಿ, ಮಗು ಅನಾಥಕೂಡಲೇ ಗೂಡ್ಸ್​ ರೈಲಿನ ಕೆಳಗೆ ಸಾವಕಾಶವಾಗಿ ನುಸುಳಲು ಯತ್ನಿಸಿದ್ದಾನೆ. ಈ ವೇಳೆ ರೈಲು ಒಮ್ಮಿಂದೊಮ್ಮೆಲೆ ಚಲಿಸಲು ಪ್ರಾರಂಭಿಸಿದೆ. ಯಾದವ್​ಗೆ ಏನು ಮಾಡಬೇಕೆಂದು ದಿಕ್ಕು ತೋಚದೆ, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹಳಿಗಳ ಮೇಲೆ ಮಲಗಿದ್ದಾನೆ.ಸ್ಥಳದಲ್ಲಿ ನೆರೆದಿದ್ದವರೆಲ್ಲ ಬೆಚ್ಚಿಬಿದ್ದು ಅಸಹಾಯಕರಾಗಿ ಉಸಿರು ಬಿಗಿಹಿಡಿದು ಈ ಘಟನೆಯನ್ನು ನೋಡುತ್ತಿದ್ದರು. ಅದೃಷ್ಟವೆಂಬಂತೆ ಯಾದವ್​ ರೈಲು ಹಾದುಹೋದ ನಂತರ, ಕೈಯಲ್ಲಿ ಕೋಲು ಹಿಡಿದ ಎದ್ದು ರೈಲು ಹಳಿಯಿಂದ ಹೊರನಡೆದಿದ್ದಾನೆ. ಕೆಲ ಜನರು ‘ನಯಾ ಜನಮ್ ಹುವಾ ಹೈ’ (ಅವರಿಗೆ ಹೊಸ ಜೀವನ ಸಿಕ್ಕಿತು) ಎಂದು ಮುದುಕನಿಗೆ ಹೇಳಿದರೆ, ಇನ್ನು ಕೆಲವರು ಮುದುಕನಿಗೆ ಬೈದು ಬುದ್ಧಿವಾದ ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − one =
Remember me
