ಅಹಮದಾಬಾದ್​:ಹೆಣ್ಣು ಮಗು ಹುಟ್ಟಿದರೆ ಮಹಾಲಕ್ಷ್ಮಿ ಜನಿಸಿದಳು ಎಂದು ಸಂಭ್ರಮಿಸುವ ರೀತಿಯಲ್ಲೇ ಗುಜರಾತ್​ನ ಕುಟುಂಬವೊಂದು ಕರುವನ್ನೇ ಮಹಾಲಕ್ಷ್ಮಿಯಂತೆ ತಮ್ಮ ಮನೆಗೆ ಅದ್ಧೂರಿಯಿಂದ ಬರಮಾಡಿಕೊಂಡಿದ್ದಾರೆ.
ಹಿಂದು ಸಂಪ್ರದಾಯದಲ್ಲಿ ಹಸುವನ್ನು ಪೂಜನೀಯ ಭಾವನೆಯಿಂದ ನೋಡುತ್ತಾರೆ. ಹಬ್ಬ-ಹರಿದಿನ ಅಂತ ಬಂದಾಗ ಗೋವಿಗೂ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಗುಜರಾತ್​ನ ಪ್ರಾಣಿ ಪ್ರಿಯರೊಬ್ಬರು ತಮ್ಮ ಮುದ್ದಾದ ಕರುವಿಗೆ ಚಿನ್ನ ಮತ್ತು ಬೆಳ್ಳಿ ಆಭರಣವನ್ನು ಉಡುಗೊರೆಯಾಗಿ ನೀಡುವ ಮೂಲಕ ಆತ್ಮೀಯವಾಗಿ ಮನೆ ತುಂಬಿಸಿಕೊಂಡಿದ್ದಾರೆ.
ಹೌದು. ವಿಜಯ ಪ್ರಸನ್ನ ಎಂಬುವರ ಮನೆಯಲ್ಲಿನ ಹಸುವೊಂದು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಇಡೀ ಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ವಿಜಯ್​ ಅವರಿಗೆ ಗೋವು ಕಂಡರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಅವುಗಳಿಗಾಗಿಯೇ ವಿಶೇಷವಾಗಿ ಚಿನ್ನ ಮತ್ತು ಬೆಳ್ಳಿಯ ಆಭರಣ ಮಾಡಿಸಿ ಉಡುಗೊರೆ ನೀಡಿದ್ದಾರೆ.
ಇದನ್ನೂ ಓದಿರಿ:ಜಾರಕಿಹೊಳಿ ಸಿಡಿ ಕೇಸ್: ಆ ಐವರ ಬಗ್ಗೆ ದಿನೇಶ್​ ಕಲ್ಲಹಳ್ಳಿ ಹೇಳಿದ್ದೇನು?
ಆಭರವನ್ನು ಮಾಡಿಸಿ ತಂದು ಮನೆಯನ್ನು ಸಿಂಗರಿಸಿ ವರ್ಣ ರಂಜಿತ ಸಮಾರಂಭದಲ್ಲಿ ಆಭರಣಗಳನ್ನು ಗೋವು ಮತ್ತು ಕರುವಿಗೆ ವಿಜಯ್​ ಕುಟುಂಬ ಉಡುಗೊರೆಯಾಗಿ ನೀಡಿದೆ. ಅಲ್ಲದೆ, ಮೂಕ ಪ್ರಾಣಿಗಳಿಗೆ ಪುಷ್ಪಾರ್ಚನೆಯ ಸ್ವಾಗತವನ್ನು ಕುಟುಂಬ ಇದೇ ಸಂದರ್ಭದಲ್ಲಿ ನೀಡಿದೆ.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಕುಟುಂಬ ಈ ಎರಡೂ ಜೀವಿಗಳು ನಮ್ಮ ಮನೆಯ ದೊಡ್ಡ ದೇವತೆಗಳು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ವಿಜಯ್​ ಕುಟುಂಬದ ಪ್ರಾಣಿ ಪ್ರೀತಿಗೆ ಅನೇಕ ಫಿದಾ ಆಗಿದ್ದು, ದೇವರ ನಿಮಗೆ ಒಳ್ಳೆಯದು ಮಾಡಲಿ ಎಂದು ಎಲ್ಲರು ಕುಟುಂಬಕ್ಕೆ ಶುಭ ಕೋರಿದ್ದಾರೆ.(ಏಜೆನ್ಸೀಸ್​)
ದರ್ಶನ್​-ಯಶ್​ ಅಭಿಮಾನಿಗಳ ನಡುವೆ ಜೋರಾಯ್ತು ಟ್ವೀಟ್​ ಸಮರ: ಫ್ಯಾನ್ಸ್​ ವಾರ್​ಗೆ ಕೊನೆ ಎಂದು?

ಕಾಲು ಶತಮಾನದ ನಂತರ ಇತಿಹಾಸ ಬರೆದ ಕೇರಳದ ಮುಸ್ಲೀಂ ಲೀಗ್​- ಮಹಿಳೆಗೆ ಸಿಕ್ಕಿತು ಸ್ಥಾನ

ಹುಟ್ಟುವಾಗ್ಲೇ 2 ಗುಪ್ತಾಂಗ ಹೊಂದಿರುವ ಮಹಿಳೆ: ಒಂದು ಕೆಲಸಕ್ಕೆ, ಮತ್ತೊಂದು ಸಂಗಾತಿಗಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eighteen =
Remember me
