ಮಿರ್ಜಾಪುರ:ಹೆತ್ತು ಹೊತ್ತು ಸಾಕಿದ್ದ ಮಗಳನ್ನು ಅಪ್ಪ ಅಮ್ಮನೇ ಕೊಲೆ ಮಾಡಿ, ಜಮೀನೊಂದರಲ್ಲಿ ಆಕೆಯ ಶವವನ್ನು ಎಸೆದಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ಕೊಲೆಯ ನಿಜ ಆಶಯ ತಿಳಿದುಬಂದಿದೆ.
ಇದನ್ನೂ ಓದಿ:ಬೋಯಿಂಗ್ ವಿಮಾನ ಹೈಜ್ಯಾಕ್​? ಪ್ರಯಾಣ ಆರಂಭಿಸಿದ ನಾಲ್ಕೇ ನಿಮಿಷಗಳಲ್ಲಿ ​ಸಂಪರ್ಕ ಕಡಿತ
ಅಂಜಲಿ (17) ಹೆಸರಿನ ಯುವತಿ ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಆಕೆಯ ಕುಟುಂಬಕ್ಕೆ ಗೊತ್ತಾಗಿದೆ. ಪ್ರೀತಿಯನ್ನು ಮರೆತುಬಿಡುವಂತೆ ಅವರು ಅವಳಿಗೆ ಎಚ್ಚರಿಸಿದ್ದಾರೆ. ಆದರೆ ಅವರ ಮಾತಿಗೆ ಬೆಲೆ ಕೊಡದ ಅಂಜಲಿ ಪ್ರೀತಿಯನ್ನು ಮುಂದುವರಿಸಿದ್ದಾಳೆ. ಮೂರ್ನಾಲ್ಕು ಬಾರಿ ಪ್ರಿಯತಮನೊಂದಿಗಿದ್ದಾಗ ಅಪ್ಪ ಅಮ್ಮನಿಗೆ ಸಿಕ್ಕಿ ಬಿದ್ದಿದ್ದಾಳೆ ಕೂಡ. ಇದನ್ನು ಒಪ್ಪದ ತಂದೆ ತಾಯಿ ಯುವಕನನ್ನೂ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಆದರೆ ಯಾವ ಪ್ರಯೋಜನವೂ ಆಗಿಲ್ಲ.
ಜನವರಿ 2ರಂದು ಪ್ರಿಯತಮನೊಂದಿಗಿದ್ದ ಅಂಜಲಿ ರಾತ್ರಿ 2 ಗಂಟೆಗೆ ಮನೆಗೆ ಬಂದಿದ್ದಾಳೆ. ಅದರಿಂದಾಗಿ ಸಿಟ್ಟಿಗೆದ್ದ ಆಕೆಯ ಅಪ್ಪ ಅಮ್ಮ ಅವಳು ತೊಟ್ಟಿದ್ದ ದುಪ್ಪಟವನ್ನು ಕುತ್ತಿಗೆಗೆ ಸುತ್ತಿ ಎಳೆದಿದ್ದಾರೆ. ಉಸಿರುಗಟ್ಟಿ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ನಂತರ ಮನೆಗೆ ಬೀಗ ಹಾಕಿ ಹೊರಟಿದ್ದಾರೆ. ಜನವರಿ 4ರಂದು ಅಂಜಲಿಯ ದೇಹವನ್ನು ಮಿರ್ಜಾಪುರದ ಜಮಾಲ್‌ಪುರ ಪ್ರದೇಶದ ರಾಧೇಶ್ಯಂ ಹೆಸರಿನವರ ಜಮೀನಿನಲ್ಲಿ ಬಿಸಾಕಿದ್ದಾರೆ. ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ:ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…
ಅನಾಥ ಶವವನ್ನು ಕಂಡ ರಾಧೇಶ್ಯಂ ಅವರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸಿರಿಗೆ ಅದು ಅಂಜಲಿಯ ಶವ ಎನ್ನುವುದು ಗೊತ್ತಾಗಿದೆ. ನಂತರ ಪ್ರಕರಣದ ಬೆನ್ನತ್ತಿ ಹೋದಾಗ ಆಕೆಯ ಅಪ್ಪ ಅಮ್ಮನೇ ಕೊಲೆ ಮಾಡಿರುವುದು ತಿಳಿದುಬಂದಿದೆ. ಇದೀಗ ಅವರಿಬ್ಬರನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)
ಖುರ್ಚಿಯಲ್ಲಿ ಪ್ರಿಯತಮನನ್ನು ಕಟ್ಟಿ ಸೆಕ್ಸ್​ ಮಾಡಲು ಹೋದ ಮಹಿಳೆ; ಕಾಮದಾಸೆಯಲ್ಲೇ ಯಮಲೋಕ ಸೇರಿದ ಯುವಕ

ಪಾರ್ಟಿಗೆ ಮಗಳನ್ನು ಕರೆದು ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದ ಕುಟುಂಬ: ಬೆಚ್ಚಿಬೀಳಿಸುವ ಪ್ರಕರಣವಿದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 14 =
Remember me
