ನವದೆಹಲಿ:ಇ-ಕಾಮರ್ಸ್​ ವೆಬ್​ಸೈಟ್​​ನಲ್ಲಿ ವಹಿವಾಟು ನಡೆಸಿದ್ದಕ್ಕೆ ಇಲ್ಲೊಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರುವಂತಾಗಿದೆ. ಕೇಳಿದ್ದು ಎಲ್ಲೆಡೆಗಿಂತ ಕಡಿಮೆ ಬೆಲೆಗೆ ಮನೆ ಬಾಗಿಲಿಗೇ ಬಂದು ಬಿಡುತ್ತದೆ ಎಂದು ಇ-ಕಾಮರ್ಸ್​ ವಹಿವಾಟನ್ನೇ ನೆಚ್ಚಿಕೊಂಡಿರುವ ಹಲವರಂತೆ ಇವರೂ ಬುಕ್​ ಮಾಡಿದ್ದು, ಈಗ ಪೊಲೀಸ್​ ಠಾಣೆ ವರೆಗೂ ಹೋಗುವಂತೆ ಮಾಡಿದೆ.
ಇಂಡಿಯನ್ ಕೌನ್ಸಿಲ್ ಆಫ್​ ಅಗ್ರಿಕಲ್ಚರಲ್​ ರಿಸರ್ಚ್​ (ಐಸಿಎಆರ್) ಸಂಸ್ಥೆಯಲ್ಲಿ ಸೆಕ್ಷನ್ ಆಫೀಸರ್ ಆಗಿರುವ ಸೋಹನ್​ ಲಾಲ್​ ಎಂಬುವವರಿಗೆ ಹೀಗಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಸೋಹನ್​ ಅವರು ಅ.19ರಂದು ಇ-ಕಾಮರ್ಸ್ ವೆಬ್​ಸೈಟ್​ವೊಂದರಲ್ಲಿ ಮೊಬೈಲ್​ಫೋನ್​ ಬುಕ್ ಮಾಡಿದ್ದರು.
ದೆಹಲಿಯ ಮಯೂರ್ ವಿಹಾರ್ ಫೇಸ್​-3ನಲ್ಲಿ ಇರುವ ಅವರ ನಿವಾಸಕ್ಕೆ ಅ. 21ರ ಮಧ್ಯಾಹ್ನ ಬಂದಿದ್ದ ಹುಡುಗನೊಬ್ಬ ಪಾರ್ಸೆಲ್ ಹಸ್ತಾಂತರಿಸಿ ಹೋಗಿದ್ದ. ಆದರೆ ಪಾರ್ಸೆಲ್ ಬಿಡಿಸಿ ನೋಡಿದಾಗ ಅದರಲ್ಲಿ ಮೊಬೈಲ್​ ಫೋನ್ ಬದಲು ಸೋಪ್ ಇತ್ತು. ಈ ಬಗ್ಗೆ ಅವರು ಗಾಜಿಪುರ್ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸೋಹನ್​ ಕೆಲವು ದಿನಗಳ ಹಿಂದೆ ಇ-ಕಾಮರ್ಸ್​ ವೆಬ್​ಸೈಟ್​ ಮೂಲಕ ಫೋನ್​ವೊಂದನ್ನು ಖರೀದಿಸಿದ್ದರು. ಅವರ ಹಿರಿಯ ಅಧಿಕಾರಿ ಅಂಥದ್ದೇ ಫೋನ್​ಗೆ ಬೇಡಿಕೆ ಇಟ್ಟ ಕಾರಣ, ಸೋಹನ್ ಮತ್ತೊಂದು ಫೋನ್​ ಬುಕ್ ಮಾಡಿದ್ದರು ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:eight − 1 =
Remember me
