ಹೈದರಾಬಾದ್​:ಒಂದು ಪ್ಲೇಟ್​ ಇಡ್ಲಿ-ಸಾಂಬಾರ್​ ಬೆಲೆ ಎಷ್ಟಿರಬಹುದು? ಸಾಮಾನ್ಯ ಹೋಟೆಲ್​​ಗಳಲ್ಲಾದರೆ 25 ರಿಂದ 30 ರೂಪಾಯಿ ಇರುತ್ತದೆ. ಅದೇ ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ಅಬ್ಬಾಬ್ಬಾ ಅಂದ್ರ 100 ರಿಂದ 150 ರೂಪಾಯಿ ಇರುತ್ತದೆ. ಆದರೆ, ಹೈದರಾಬಾದ್​ನ ಖಾಸಗಿ ಆಸ್ಪತ್ರೆ ಒಂದು ಪ್ಲೇಟ್​ ಇಡ್ಲಿಗೆ ಚಾರ್ಜ್​​ ಮಾಡಿದ ಮೊತ್ತ ಕೇಳಿದ್ರೆ ನಿಜಕ್ಕೂ ಶಾಕ್​ ಆಗುತ್ತದೆ.
ಹೈದರಾಬಾದ್​ ಖಾಸಗಿ ಆಸ್ಪತ್ರೆ ಬರೋಬ್ಬರಿ 700 ರೂಪಾಯಿ ಬಿಲ್​ ಮಾಡಿದೆ. ನಾವು ಹೇಳುತ್ತಿರುವುದು ತಮಾಷೆಯಲ್ಲ. ನಿಜವಾಗಿಯೂ ಇಷ್ಟು ಹಣವನ್ನು ರೋಗಿಯ ಕೈಯಿಂದ ವಸೂಲಿ ಮಾಡಿದ್ದಾರೆ.
ಇದನ್ನೂ ಓದಿರಿ:ಪಾಲಕರಿಗೆ ಸುಳ್ಳು ಹೇಳಿ ಲಾಡ್ಜ್​ ಸೇರಿದ್ದ ಸರ್ಕಾರಿ ನೌಕರರಿಬ್ಬರ ಸ್ಥಿತಿ ನೋಡಿ ಬೆಚ್ಚಿಬಿದ್ದ ಪೊಲೀಸರು!
ಮೊದಲೇ ಕರೊನಾದಿಂದ ಜನರು ಆರ್ಥಿಕವಾಗಿ ಕುಗ್ಗಿರುವ ಸಮಯದಲ್ಲಿ ಹೈದರಾಬಾದ್​ ಸೇರಿದಂತೆ ದೇಶದ ಕೆಲ ಖಾಸಗಿ ಆಸ್ಪತ್ರೆಗಳು ಲೂಟಿಗೆ ಇಳಿದಿವೆ. ಜನರ ಸಮಸ್ಯೆಗೆ ಸರಿಯಾದ ಸಮಯದಲ್ಲಿ ನ್ಯಾಯ ಒದಗಿಸಿಕೊಡಲು ವಿಫಲವಾಗುತ್ತಿರುವುದರಿಂದ ಈ ರೀತಿಯ ಅನೇಕ ಘಟನೆಗಳು ನಡೆಯುತ್ತಿವೆ. ಇದನ್ನು ಪ್ರಶ್ನಿಸಿದರೆ ಏನು ಮಾಡಿಬಿಡುತ್ತಾರೋ ಎಂಬ ಭಯದಿಂದಲೂ ಕೆಲವರು ಧ್ವನಿಯೇರಿಸದೇ ಸುಮ್ಮನಾಗಿಬಿಡುತ್ತಾರೆ.
ರೋಗ ಲಕ್ಷಣಗಳಿಲ್ಲದೆ ಕೋವಿಡ್​ ಪಾಸಿಟಿವ್​ ಆದ ರೋಗಿಗಳ ಬಳಿ ಲಕ್ಷಾಂತರ ಹಣ ಪೀಕಿದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಅದೇ ರೀತಿ ಹೈದರಾಬಾದ್​ ಆಸ್ಪತ್ರೆ ರೋಗಿಯೊಬ್ಬರಿಗೆ ನೀಡಿದ ಬಿಲ್​ ನೋಡಿದ್ರೆ ಒಮ್ಮೆ ಹೃದಯಾಘಾತವಾಗುವುದು ಖಂಡಿತ. ಹೈದರಾಬಾದ್​ನ ಕಾರ್ಪೊರೇಟ್ ಆಸ್ಪತ್ರೆಯೊಂದು ಒಂದು ಪ್ಲೇಟ್​ ಇಡ್ಲಿಗೆ​ ಬರೋಬ್ಬರಿ 700 ರೂ. ಚಾರ್ಜ್​ ಮಾಡಿದೆ.
ರೋಗಿಯ ಸಂಬಂಧಿಯೊಬ್ಬರು ಟ್ವಿಟರ್​ನಲ್ಲಿ ಆಸ್ಪತ್ರೆಯ ಬಿಲ್​ ಅನ್ನು ಶೇರ್​ ಮಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಇಡ್ಲಿಗಳೇನಾದರೂ ಸ್ವರ್ಗದಿಂದ ಬಂದಿದೆಯೇ? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಇದೊಂದೆ ಆಸ್ಪತ್ರೆಯಲ್ಲ ಇಂತಹ ಅನೇಕ ಆಸ್ಪತ್ರೆಗಳಲ್ಲಿ ಇಂತಹ ಪರಿಸ್ಥಿತಿ ಇದೆ ಎಂದಿದ್ದಾರೆ. ಮನುಷ್ಯತ್ವವನ್ನೇ ಮರೆತು ಮೃಗಗಳಂತೆ ಖಾಸಗಿ ಆಸ್ಪತ್ರೆಯವರು ವರ್ತಿಸುತ್ತಿದ್ದಾರೆಂದು ನೆಟ್ಟಿಗರು ಕಿಡಿಕಾರಿದ್ದಾರೆ.(ಏಜೆನ್ಸೀಸ್​)
So 1 plate idly in Rainbow Hospital BHills is 700/- it seems.@RCH_India, does this idly come from Heavens? Also, what amounts to this OTHER CHARGES?@drgsraon@ts_health, what action are we taking here for Other Charges? I mean what is this?@CoreenaSuares2@anusha_puppalapic.twitter.com/Tx253OiTKh
— Vijay Gopal (@VijayGopal_)February 1, 2021

ಇದನ್ನೂ ಓದಿರಿ:24 ವರ್ಷದ ಹಿಂದೆ ಮಾಡಿದ್ದ ತಪ್ಪಿಗಾಗಿ ಸರ್ಕಾರಿ ಕೆಲಸ ಕಳೆದುಕೊಂಡ ಮಹಿಳೆ..!
ಸೀತೆಯ ನೇಪಾಳ, ರಾವಣನ ಲಂಕಾಗಿಂತಲೂ ರಾಮನ ಭಾರತದಲ್ಲಿ ಪೆಟ್ರೋಲ್​ ದರ ಹೆಚ್ಚುತ್ತಿದೆ: ಸುಬ್ರಮಣಿಯನ್​ ಸ್ವಾಮಿ

ಮುಗ್ಧ ತಮ್ಮನ ಹೆಂಡತಿ ಮೇಲೆ ಬಿತ್ತು ಅಣ್ಣನ ಕಾಮದೃಷ್ಟಿ: ನಡದೇ ಹೋಯ್ತು ದುರಂತ ಘಟನೆ!

ತೂಕದಲ್ಲಿ ಅಜಗಜಾಂತರ ವ್ಯತ್ಯಾಸವಿರುವ ಇವರಿಬ್ಬರ ಲವ್​ ಸ್ಟೋರಿ ತುಂಬಾ ಡಿಫರೆಂಟ್..!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 18 =
Remember me
