ರಾಂಚಿ:ಮದುವೆಯಾಗುತ್ತೇನೆ ಎಂದು ನಂಬಿಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡ ವ್ಯಕ್ತಿಯೊಬ್ಬ, ಯುವತಿಯನ್ನು ಕಾಡಿಗೆ ಕರೆದುಕೊಂಡು ಹೋಗಿ ರೇಪ್​ ಮಾಡಿ ಅಲ್ಲಿಯೇ ಬಿಟ್ಟು ಬಂದಿರುವ ಘಟನೆ ಜಾರ್ಖಂಡ್​ನ ಮುಸಬಾನಿ ಹತ್ತಿರ ನಡೆದಿದೆ. ಮುಸಬಾನಿ ಪೊಲೀಸ್​ ಠಾಣೆಯ ಸಿಬ್ಬಂದಿ ವಿರುದ್ಧ ಯುವತಿ ಇದೀಗ ದೂರು ದಾಖಲಿಸಿದ್ದಾಳೆ.
ಪೊಲೀಸ್​ ಠಾಣೆಯ ಸಿಬ್ಬಂದಿ ಪ್ರೇಮ್​ ಚಂದ್ ಕೆಲ ತಿಂಗಳ ಹಿಂದೆ ಆ ಯುವತಿಯನ್ನು ಭೇಟಿ ಮಾಡಿದ್ದನಂತೆ. ನಾನು ನಿನ್ನ ಪ್ರೀತಿಸುತ್ತೇನೆ, ನಿನ್ನನ್ನೇ ಮದುವೆಯಾಗುತ್ತೇನೆಂದು ನಂಬಿಸಿದ್ದಾನೆ. ಮೊದಲೇ ಆತ ಪೊಲೀಸ್​ ಠಾಣಾ ಸಿಬ್ಬಂದಿಯಾಗಿದ್ದರಿಂದ ಯುವತಿ ತುಂಬಾ ಸುಲಭವಾಗಿ ನಂಬಿ ಆತನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಮದುವೆಯಾಗುತ್ತೇನೆ ಎಂದು ಹೇಳುತ್ತಲೇ ಆತ ಈವರೆಗೆ ಸಾಕಷ್ಟು ಬಾರಿ ಯುವತಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾನೆ.
ಇತ್ತೀಚೆಗೆ ಒಂದು ದಿನ ಯುವತಿ ಮದುವೆಯಾಗೆಂದು ಹಠ ಹಿಡಿದ ಹಿನ್ನೆಲೆಯಲ್ಲಿ ಮದುವೆಯಾಗುವುದಕ್ಕೆಂದು ದೇವಸ್ಥಾನವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ದೇವಸ್ಥಾನದಲ್ಲಿ ಜನರಿದ್ದಾರೆ ಎನ್ನುವ ಕಾರಣ ಕೊಟ್ಟು, ಕಾಡಿನಲ್ಲಿ ಮದುವೆಯಾಗೋಣವೆಂದು ಅಲ್ಲಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆ ಒಪ್ಪದಿದ್ದರೂ ಬಲವಂತವಾಗಿ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ. ಅದಾದ ನಂತರವೂ ಮದುವೆಯಾಗೆಂದು ಹಠ ಹಿಡಿದ ಆಕೆಯನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಈ ವಿಚಾರವಾಗಿ ಯುವತಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್)
ಕಾಲುವೆ​ಗೆ ಗುದ್ದಿದ ಹೊಡೆತಕ್ಕೆ ಎರಡು ಪೀಸ್​ ಆದ ಕಾರು! ಹಿಂದೆ ಕುಳಿತಿದ್ದ ಮೂವರೂ ಬಲಿ

ಮಗ ಮದುವೆಯಾಗಿಲ್ಲವೆಂದು ತುಂಡು ತುಂಡಾಗಿ ಕತ್ತರಿಸಿ ಎಸೆದ ಅಪ್ಪ ಅಮ್ಮ! ಮಗಳು, ಅಳಿಯನನ್ನೂ ಹಾಗೇ ಕೊಂದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
