ತಿರುವನಂತಪುರ:ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಬಡ ರಬ್ಬರ್​ ಟ್ಯಾಪರ್​ ಒಬ್ಬ ರಾತ್ರೋರಾತ್ರಿ ಕೋಟ್ಯಧಿಪತಿ ಆಗಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಬ್ಯಾಂಕ್​ನಲ್ಲಿ ಮೂರು ಸಾಲ ಹೊಂದಿದ್ದ ರಂಜನ್​ ಈಗ ಬರೋಬ್ಬರಿ 12 ಕೋಟಿ ಮೌಲ್ಯದ ಲಾಟರಿ ಟಿಕೆಟ್​ ಗೆದ್ದಿರುವುದು ವರದಿಯಾಗಿದೆ.
ಐವತ್ತಮೂರು ವರ್ಷದ ರಂಜನ್​ ಇತ್ತೀಚೆಗೆ ಬ್ಯಾಂಕ್​ ಒಂದಕ್ಕೆ ತೆರಳಿ ತನ್ನ ಮೂರು ಸಾಲದ ಬಡ್ಡಿ ಕಟ್ಟುವುದಕ್ಕಾಗಿ ನಾಲ್ಕನೇ ಸಾಲವನ್ನು ಕೊಡಿ ಎಂದು ಬ್ಯಾಂಕ್​ನ ಮ್ಯಾನೇಜರ್​ನಲ್ಲಿ ಕೇಳಿಕೊಂಡಿದ್ದನಂತೆ. ಆದರೆ ಮ್ಯಾನೇಜರ್​ ಅದಕ್ಕೆ ಒಪ್ಪದೆ ಆತನನ್ನು ಹಾಗೇ ಕಳಿಸಿದ್ದರು. ಬೇಜಾರಿನಿಂದ ಮನೆಗೆ ಹಿಂದಿರುಗುವಾಗ ತನ್ನ ಹವ್ಯಾಸವಾಗಿದ್ದ ಲಾಟರಿ ಟಿಕೆಟ್​ನ್ನು ಕೊಂಡು ಬಂದಿದ್ದಾನೆ. 300 ರೂಪಾಯಿ ಕೊಟ್ಟು ತೆಗೆದುಕೊಂಡ ಲಾಟರಿ ಟಿಕೆಟ್​ ರಂಜನ್​ ಅವರ ಬದುಕನ್ನೇ ಬದಲಾಯಿಸಿದೆ.
ಸೋಮವಾರದಂದು ಲಾಟರಿ ಟಿಕೆಟ್​ನ ವಿಜೇತರನ್ನು ಘೋಷಿಸಲಾಗಿದೆ. ಆದರೆ ಯಾರೂ ಕೂಡ ಆ ಟಿಕೆಟ್​ ತಮ್ಮದು ಎಂದು ಮುಂದೆ ಬಂದಿರಲಿಲ್ಲ. ಮಂಗಳವಾರದಂದು ಲಾಟರಿ ಕೊಂಡ ಸ್ಥಳಕ್ಕೆ ಹೋದ ರಂಜನ್​ ತನ್ನ ಟಿಕೆಟ್​ ಗೆದ್ದಿದೆಯೋ ಇಲ್ಲವೋ ಎಂದು ಪರಿಶೀಲಿಸಿದ್ದಾರೆ. ಆಗ ತನ್ನ ಟಿಕೆಟ್​ ಸಂಖ್ಯೆ ಎಸ್​ಟಿ269609 ಲಾಟರಿ ಗೆದ್ದಿದ್ದು 12 ಕೋಟಿ ಹಣವು ತನಗೆ ಬಹುಮಾನವಾಗಿ ಬಂದಿರುವುದು ರಂಜನ್​ಗೆ ತಿಳಿದುಬಂದಿದೆ. ಸಂತಸದಿಂದ ಮನೆಗೆ ಬಂದ ರಂಜನ್​ ತನ್ನ ಮಡದಿಯ ಬಳಿ ಈ ವಿಚಾರವನ್ನು ಹಂಚಿಕೊಂಡಾಗ ಮೊದಲಿಗೆ ಆಕೆ ನಂಬಿರಲಿಲ್ಲವಂತೆ. ಆಮೇಲೆ ಊರವರೆಲ್ಲ ಬಂದು ಆತನಿಗೆ ಶುಭಹಾರೈಸುವುದನ್ನು ಕಂಡು ಆಕೆ ನಂಬಿದಳು ಎಂದು ರಂಜನ್​ ತಿಳಿಸಿದ್ದಾರೆ.
ತೆರಿಗೆ ಎಲ್ಲ ಕಳೆದು ರಂಜನ್​ಗೆ 7ರಿಂದ 8 ಕೋಟಿ ರೂಪಾಯಿ ಬಹುಮಾನವಾಗಿ ಬರುವ ನಿರೀಕ್ಷೆಯಿದೆ. ಈ ಹಣದಲ್ಲಿ ಮೊದಲು ಬ್ಯಾಂಕ್​ನಲ್ಲಿರುವ 7 ಲಕ್ಷ ಸಾಲವನ್ನು ತೀರಿಸಿಕೊಳ್ಳುವುದಾಗಿ ರಂಜನ್​ ತಿಳಿಸಿದ್ದಾರೆ. ಅರ್ಧ ನಿರ್ಮಾಣವಾಗಿರುವ ತನ್ನ ಮನೆಯನ್ನು ಈ ಹಣದಲ್ಲಿ ಪೂರ್ತಿ ಮಾಡುವುದಾಗಿ ಆತ ಹೇಳಿದ್ದಾರೆ.
ಮೂರು ಮಕ್ಕಳಿರುವ ಕುಟುಂಬದಲ್ಲಿ ಮೊದಲನೇ ಮಗಳು ಮದುವೆಯಾಗಿ ಗಂಡನ ಮನೆಯಲ್ಲಿದ್ದು, ಮಗ ವಿದ್ಯಾಭ್ಯಾಸ ಬಿಟ್ಟು ತಂದೆಗೆ ಕೆಲಸದಲ್ಲಿ ನೆರವಾಗುತ್ತಿದ್ದಾನೆ. ಇನ್ನೋರ್ವ ಮಗಳು 12ನೇ ತರಗತಿಯಲ್ಲಿ ಓದುತ್ತಿದ್ದಾಳೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − four =
Remember me
