ನವದೆಹಲಿ: ತೈವಾನ್​ ರಾಷ್ಟ್ರೀಯ ದಿನಕ್ಕೆ ಬಿಜೆಪಿಯ ದೆಹಲಿ ನಾಯಕ ತೇಜಿಂದರ್ ಪಾಲ್​ ಸಿಂಗ್ ಶುಭ ಕೋರಿ ಹಾಕಿದ್ದ ಪೋಸ್ಟರ್ ಕೆಲವೇ ಗಂಟೆಗಳಲ್ಲಿ ತೆರವುಗೊಂಡಿದೆ. ಈ ಶುಭಾಶಯದ ಪೋಸ್ಟರನ್ನು ನವದೆಹಲಿ ಮುನಿಸಿಪಲ್​ ಕೌನ್ಸಿಲ್​ (ಎನ್​ಡಿಎಂಸಿ) ತೆರವುಗೊಳಿಸಿದೆ.
ತೇಜಿಂದರ್ ಪಾಲ್​ ಸಿಂಗ್ ದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿಗೆ ಸನಿಹದಲ್ಲೇ ‘ತೈವಾನ್​ ಹ್ಯಾಪಿ ನ್ಯಾಷನಲ್ ಡೇ ಅಕ್ಟೋಬರ್ 10’ ಎಂಬ ಪೋಸ್ಟರ್ ಶುಕ್ರವಾರ ರಾತ್ರಿ ಹಾಕಿಸಿದ್ದರು. ಮಾತ್ರವಲ್ಲ ಅದರ ಫೋಟೋ ಕೂಡ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.
ಶನಿವಾರ ರಾಷ್ಟ್ರೀಯ ದಿನವನ್ನು ಆಚರಿಸುವುದಾಗಿ ತೈವಾನ್ ಸರ್ಕಾರ ಬುಧವಾರ ಭಾರತದ ಹಲವಾರು ಮಾಧ್ಯಮಗಳಿಗೆ ಜಾಹೀರಾತು ನೀಡಿತ್ತು. ಈ ಹಿನ್ನೆಲೆಯಲ್ಲಿ ತೈವಾನ್​ಅನ್ನು ದೇಶ ಅಥವಾ ರಿಪಬ್ಲಿಕ್​ ಆಫ್​ ಚೈನಾ ಎಂದು ಉಲ್ಲೇಖಿಸಬಾರದು ಹಾಗೂ ದೆಹಲಿಯ ‘ಒನ್​ ಚೈನಾ’ ನೀತಿಯನ್ನು ಉಲ್ಲಂಘಿಸಬಾರದು ಎಂದು ಚೀನಾ ಕೂಡ ನಂತರ ಭಾರತಕ್ಕೆ ಮನವಿ ಮಾಡಿಕೊಂಡಿತ್ತು. ತೈವಾನ್​ಗೆ ಶುಭಕೋರಿದ್ದ ಪೋಸ್ಟರ್​ ಈ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ ಎನ್ನಲಾಗಿದೆ. (ಏಜೆನ್ಸೀಸ್​)
#TaiwanNationalDaypic.twitter.com/EX2W6YmJzk
— Tajinder Pal Singh Bagga (@TajinderBagga)October 9, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
