ನವದೆಹಲಿ:ಭಾರತದಲ್ಲಿ ಕೆಲವು ಹೋಟೆಲ್​ಗಳ ಕೊಠಡಿ ದರಗಳು ವರ್ಷಾಂತ್ಯ ಡಿ.31ರಂದು ಗರಿಷ್ಠ ಮಟ್ಟ ತಲುಪಿವೆ. ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾಡಾದಲ್ಲಿ ಡಿ.31ರಂದು ಕೊಠಡಿಗಳ ಸಾಮಾನ್ಯ ಶುಲ್ಕ 1,20,000 ರೂ.ವಿಧಿಸಿದ್ದು, ಈ ಹೋಟೆಲ್​ನಲ್ಲಿ ಮಹಾರಾಜ ಸೂಟ್​ಗಾಗಿ 7 ಲಕ್ಷ ರೂಪಾಯಿ ನೀಡಿ ಬುಕ್ಕಿಂಗ್ ಮಾಡಿದ್ದಾರೆ.
ದೆಹಲಿ, ಜೈಪುರ ಮತ್ತು ಉದಯಪುರದಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್​ಗಳು ಮತ್ತು ರೆಸಾರ್ಟ್​ಗಳ ಬಾಡಿಗೆಗಳು ದಾಖಲೆಯ ಗರಿಷ್ಠ ಮಟ್ಟದಲ್ಲಿವೆ. ಲೀಲಾ ಪ್ಯಾಲೇಸ್ ಉದಯಪುರದಲ್ಲಿ ಡಿ.31ಕ್ಕೆ ಯಾವುದೇ ಕೊಠಡಿಗಳು ಲಭ್ಯವಿಲ್ಲ. ಈ ಹೋಟೆಲ್​ನಲ್ಲಿ ಕ್ರಿಸ್​ವುಸ್ ದಿನದಂದು ಒಂದು ರಾತ್ರಿ ತಂಗಲು 1,06,200 ರೂ. ಶುಲ್ಕ ವಿಧಿಸಿತ್ತು. ಈಗ ಹೊಸ ವರ್ಷದಂದು ಅದರ ದರ ಮತ್ತಷ್ಟು ಹೆಚ್ಚಾಗಿದೆ.
ಡಬಲ್ ಟ್ರೀಯ ಹಿಲ್ಟನ್ ಗೋವಾ ರೆಸಾರ್ಟ್ ಕ್ಯಾಂಡೋಲಿಮ್ ಮತ್ತು ಹಿಲ್ಟನ್ ಗೋವಾ ಅಪೋರಾ ಬಾಗಾದ ಪ್ರಾಪರ್ಟಿಗಳಲ್ಲಿ ಡಿ.31ಕ್ಕೆ ಯಾವುದೇ ಕೊಠಡಿಗಳು ಲಭ್ಯವಿಲ್ಲ. ಸರಾಸರಿ ಹೋಟೆಲ್ ಬಾಡಿಗೆ ದರಗಳು ಹಿಂದಿನ ವರ್ಷಗಳಿಗಿಂತ ಶೇ.40ರಷ್ಟು ಹೆಚ್ಚಾಗಿದೆ. ಫೇರ್​ವಾಂಟ್ ಜೈಪುರದಲ್ಲಿ ಹೋಟೆಲ್ ಬುಕಿಂಗ್ ಪ್ಯಾಕೇಜ್​ಗಳು ಕನಿಷ್ಠ 65,000 ರೂ. ಮತ್ತು ತೆರಿಗೆಗಳಿಂದ ಪ್ರಾರಂಭವಾಗಿವೆ.
ಉದಯಪುರದ ಅವರ ಝಾನಾ ಲೇಕ್ ರೆಸಾರ್ಟ್​ನಲ್ಲಿ ಎರಡು ರಾತ್ರಿ ತಂಗುವ ದರ 55 ಸಾವಿರ ದಾಟಿದ್ದು, ಮ್ಯಾರಿಯೊಟ್ ಮಸ್ಸೂರಿ ವಾಲ್​ನಟ್ ಗ್ರೋವ್ ರೆಸಾರ್ಟ್​ನಲ್ಲಿ 32 ಸಾವಿರ ರೂ.ಗೆ ರೂಮ್ ಬುಕ್ ಮಾಡಲಾಗಿದ್ದು,ಯಾವುದೇ ಕೊಠಡಿಗಳು ಲಭ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ನನ್ನನ್ನು ಹೊರ ಕಳುಹಿಸಿ ತಾಯಿಯನ್ನು ಕರೆದು… ಖ್ಯಾತ ನಿರ್ದೇಶಕನ ಮುಖವಾಡ ಕಳಚಿದ ನಟಿ ಯಶಿಕಾ!

ಸ್ಟಾಕ್ ಮಾರ್ಕೆಟ್: 2023 ರಲ್ಲಿ ಸಾರ್ವಕಾಲಿಕ ದಾಖಲೆ – ಸೆನ್ಸೆಕ್ಸ್ ಶೇ. 18.73ರಷ್ಟು ಜಿಗಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 6 =
Remember me
