ನವದೆಹಲಿ:ಇಂಧನ ಬೆಲೆ ಏರಿಕೆ ಬೆನ್ನಲ್ಲೇ ಮುಂದಿನ ವಾರ ಅಡುಗೆ ಅನಿಲದ ಬೆಲೆ ಹೆಚ್ಚಳವಾಗುವುದು ಬಹುತೇಕ ನಿಶ್ಚಿತವಾಗಿದೆ. ಮನೆ ಬಳಕೆಯ ಸಬ್ಸಿಡಿ ದರದ ಅನಿಲ, ಸಬ್ಸಿಡಿಯೇತರ ಹಾಗೂ ಕೈಗಾರಿಕಾ ಅನಿಲ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ.
14.2 ಕೆಜಿ ಎಲ್​ಪಿಜಿ ಸಿಲಿಂಡರ್ ದರಗಳನ್ನು ಅಕ್ಟೋಬರ್ 6ರಂದು 15 ರೂಪಾಯಿಯಷ್ಟು ಏರಿಸಲಾಗಿತ್ತು. ಇದರಿಂದಾಗಿ ಜುಲೈ ನಂತರ ಅಡುಗೆ ಅನಿಲ ಬೆಲೆ 90 ರೂಪಾಯಿ ಹೆಚ್ಚಾಗಿದ್ದು ಈಗ ಮತ್ತೊಮ್ಮೆ ಏರಿಕೆಯಾಲಿದೆ. ಅಂತಾರಾಷ್ಟ್ರೀಯ ಇಂಧನ ಬೆಲೆಗಳಲ್ಲಿ ಭಾರಿ ಏರಿಕೆಯಾಗಿರುವುದರಿಂದ ತಲಾ ಸಿಲಿಂಡರ್ ಮೇಲಿನ ಅಂಡರ್ ರಿಕವರಿ ಅಥವಾ ನಷ್ಟ ನೂರು ರೂಪಾಯಿಗೂ ಅಧಿಕವಾಗಿದೆ. ಹೀಗಾಗಿ ದರ ಏರಿಸುವುದು ಅನಿವಾರ್ಯ ಎಂದು ಕಂಪನಿಗಳು ಹೇಳಿವೆ.
35 ಪೈಸೆ ಏರಿಕೆ:ಈ ನಡುವೆ, ಎರಡು ದಿನಗಳ ವಿರಾಮದ ನಂತರ, ಬುಧವಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 35 ಪೈಸೆ ಏರಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಹೇಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − sixteen =
Remember me
