ನವದೆಹಲಿ:ಪಾಕೆಟ್​ ಸ್ನೇಹಿ ಹಾಗೂ ತುಂಬಾ ಅಗ್ಗವಾಗಿ ಬಾಯಲ್ಲಿ ನೀರೂರಿಸುವಂತಹ ರುಚಿಕರ ಆಹಾರವನ್ನು ಸವಿಯುತ್ತಿದ್ದ ಕಾಲ ಎಂದೋ ಮುಗಿಯಿತು. ಇಂದು ಎಲ್ಲವು ದುಬಾರಿಯಾಗಿದೆ. ಏನಾದರೂ ತಿನ್ನಬೇಕು ಅನಿಸಿದರೂ ಮೊದಲು ಪಾಕೆಟ್​ ಚೆಕ್​ ಮಾಡಿಕೊಳ್ಳಬೇಕು. ಏಕೆಂದರೆ ಎಲ್ಲ ಬೆಲೆಗಳು ಜೇಬು ಸುಡುವಂತಿದೆ. ಅದರಲ್ಲೂ ಜಿಎಸ್​ಟಿ ಮತ್ತು ಸಿಜಿಎಸ್​ಟಿ ತೆರಿಗೆಯಿಂದಾಗಿ ತಿಂಡಿ, ತಿನಿಸು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಗಗನಮುಖಿಯಾಗಿವೆ. ಅಂದಿನಿಂದ ಇಂದಿನವರೆಗೂ ಆಗಿರುವ ಬದಲಾವಣೆಯ ಬಗ್ಗೆ ಈ ಹಿಂದಿನ ಜನರಿಗೆ ತುಂಬಾ ಅರಿವಿದೆ.
ಕೀಪ್ಯಾಡ್​ ಮೊಬೈಲ್​ ಫೋನ್​ಗಳಿಂದ ಸ್ಮಾರ್ಟ್​ ಫೋನ್​ವರೆಗೆ ಮತ್ತು ಸಿಆರ್​ಟಿ ಟಿವಿಯಿಂದಿಡಿದು ಸ್ಮಾರ್ಟ್​ ಟಿವಿಯವರೆಗೂ ಆದ ಎಲ್ಲ ಬದಲಾವಣೆಗಳನ್ನು ಹಿಂದಿನ ಕಾಲದ ಮಕ್ಕಳಿಗೆ ತುಂಬಾ ಚೆನ್ನಾಗಿ ಗೊತ್ತಿದೆ. ಇದೀಗ 1965ನೇ ಇಸವಿಯ ಹೋಟೆಲ್​ ಒಂದರ ತಿಂಡಿ-ತಿನಿಸುಗಳ ದರ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಂಧ್ರ ಪ್ರದೇಶದ ರೆಪಲ್ಲೆ ಪಟ್ಟಣದ ಹೋಟೆಲ್​ ಒಂದರ ದರ ಪಟ್ಟಿ ಇದಾಗಿದೆ. ದರಪಟ್ಟಿಯಲ್ಲಿ 1965, ನವೆಂಬರ್​ 1 ಎಂದು ನಮೂದಿಸಲಾಗಿದೆ. ದರಪಟ್ಟಿಯಲ್ಲಿ ಇಡ್ಲಿ, ವಡೆ ಬೆಲೆ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.
ಅಚ್ಚರಿಯೇನೆಂದರೆ ವೈರಲ್​ ಆಗಿರುವ ದರ ಪಟ್ಟಿಯು ಆಗಿನ ಕಾಲದಲ್ಲಿ ಬೆಲೆ ಏರಿಕೆ ನಂತರ ಪ್ರಕಟಿಸಿದ ದರ ಪಟ್ಟಿಯಾಗಿದೆ. ಹೋಟೆಲ್​ಗೆ ಬರುವವರಿಗೆ ದರ ಏರಿಕೆಯ ಬಗ್ಗೆ ಅರಿವು ಮೂಲಕ ಅಳವಡಿಸಲಾಗಿತ್ತು. ಆ ಕಾಲದಲ್ಲಿ ಎರಡು ಇಡ್ಲಿಯ ಬೆಲೆ ಕೇವಲ 15 ಪೈಸೆಯಾಗಿತ್ತು. ಉಪ್ಪಿಟ್ಟು ಕೂಡ 15 ರೂಪಾಯಿ. ಮಸಾಲೆದೋಸೆ ಬೆಲೆಯಂತೂ ಕೇವಲ 20 ಪೈಸೆಯಾಗಿತ್ತು.
ಕಾಫಿ ಮತ್ತು ಟೀ ಬೆಲೆ 15 ರೂಪಾಯಿ. ಅರ್ಧ ಕಪ್​ ಟೀ, ಕಾಫಿ ಬೆಲೆ 12 ಪೈಸೆಯಾಗಿತ್ತು. ಇದೀಗ ನೆಟ್ಟಿಗರು ಈ ಬೆಲೆ ಪಟ್ಟಿಯನ್ನು ನೋಡಿ ಹುಬ್ಬೇರಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಈಗ ಹೇಗೆ ಹೆಚ್ಚುತ್ತಿದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಮೇಲಾಗಿ ಈಗಿರುವ ಹೊಟೇಲ್, ರೆಸ್ಟೊರೆಂಟ್​ಗಳಲ್ಲಿ ಆಹಾರ ಹೇಳಿಕೊಳ್ಳುವಷ್ಟು ಆರೋಗ್ಯಯುತವಾಗಿಯೂ ಇಲ್ಲ. ಅವು ಕೂಡ ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿವೆ. ಹೀಗಾಗಿಯೇ ಹೋಟೆಲ್​ನಲ್ಲಿ ಊಟ ಮಾಡಬೇಡಿ ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ.

ಆದರೂ ಜನರಿಂದು ಹೊರಗಡೆ ತಿನ್ನುವ ಚಟಕ್ಕೆ ಬಿದ್ದಿದ್ದಾರೆ. ಕೆಲವರಿಗೆ ಇದೇ ದಿನಚರಿಯಾಗಿಬಿಟ್ಟಿದೆ. ಇದರೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ 1965ರ ಟಿಫಿನ್ ದರ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಅಲ್ಲದೆ, ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಬಹುದು.(ಏಜೆನ್ಸೀಸ್​)‘
ಏಳು ತಿಂಗಳ ಗರ್ಭಿಣಿ ಮಾಡೋ ಕೆಲಸನಾ ಇದು? ನಟಿ ಅಮಲಾ ಪೌಲ್​ಗೆ ನೆಟ್ಟಿಗರ ತರಾಟೆ

ಮಹೇಶ್​ ಬಾಬು ಮುಂದೆಯೇ ವಿಜಯ್​ಗೆ ಅವಮಾನ ಮಾಡಿದ ಸಮಂತಾ? ಅಭಿಮಾನಿಗಳ ಆಕ್ರೋಶ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four + 20 =
Remember me
