ಲಖನೌ:ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಸೋಲು ಕಂಡಿದ್ದರ ಕುರಿತು ಇದೀಗ ಕಾರಣಗಳು ಬಹಿರಂಗವಾಗಿವೆ. ಈ ಸಂಬಂಧ ಬಿಜೆಪಿ ಕಾರ್ಯಪಡೆ ತಯಾರಿಸಿದ್ದ ವರದಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸಲ್ಲಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಪಕ್ಷದೊಳಗಿನ ಭಿನ್ನಾಭಿಪ್ರಾಯ ಹಾಗೂ ಜಿಲ್ಲಾ ಆಡಳಿತ ಯಂತ್ರದ ಸಹಕಾರ ಕೊರತೆ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಲು ಎರಡು ಅತಿಮುಖ್ಯ ಕಾರಣಗಳು ಎಂದು ಕಾರ್ಯಪಡೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ 2019ರ ಚುನಾವಣೆಯಲ್ಲಿ 62 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ, 2024ರ ಚುನಾವಣೆಯಲ್ಲಿ 33 ಸ್ಥಾನಗಳನ್ನಷ್ಟೇ ಗಳಿಸಿದೆ. ಈ ಮೂಲಕ ಉತ್ತರಪ್ರದೇಶದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಿದ್ದ ಬಿಜೆಪಿ ಮುಜುಗರಪಡುವಂತಾಗಿತ್ತು.
ವಿವಾದಿತ ಹೇಳಿಕೆ ದುಷ್ಪರಿಣಾಮ:ಟಿಕೆಟ್ ಹಂಚಿಕೆ, ಠಾಕೂರ್ ಸಮುದಾಯದ ಅಸಮಾಧಾನ, ವಿಪಕ್ಷಗಳ ‘ಸಂವಿಧಾನ ಬೆದರಿಕೆ’ ನಿರೂಪಣೆ, ಬಿಎಸ್​ಪಿಯ ಮತಗಳು ಸಮಾಜವಾದಿ ಪಕ್ಷಕ್ಕೆ ಹೋಗಿದ್ದು ಕೂಡ ಬಿಜೆಪಿ ಸೋಲಿಗೆ ಮುಖ್ಯ ಕಾರಣಗಳಾಗಿವೆ ಎಂದೂ ಕಾರ್ಯಪಡೆ ವರದಿ ತಿಳಿಸಿದೆ. ರಾಜ್ಯಸಭಾ ಸದಸ್ಯ ಪಶೋತ್ತಮ್ ರೂಪಾಲಾ ಅವರು ಹಿಂದಿನ ರಾಜಮನೆತನಗಳು ಬ್ರಿಟಿಷರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಎಂದು ನೀಡಿದ್ದ ಹೇಳಿಕೆ ವಿವಾದಾತ್ಮಕವಾಗಿ ಪರಿಣಮಿಸಿದ್ದು, ಇದು ಠಾಕೂರ್(ರಜಪೂತ) ಮುಂತಾದ ಕ್ಷತ್ರಿಯ ಸಂಘಟನೆಗಳು ಸಿಡಿದೇಳುವಂತೆ ಮಾಡಿತ್ತು. ರಾಜ್​ಕೋಟ್ ಕ್ಷೇತ್ರದಿಂದ ರೂಪಾಲಾ ಗೆದ್ದರೂ ಅವರ ಹೇಳಿಕೆ ಠಾಕೂರ್ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟುಮಾಡಿತು ಎಂಬುದನ್ನೂ ಕಾರ್ಯಪಡೆ ವರದಿ ಹೇಳಿದೆ.
ಅಧಿಕಾರಿಗಳ ವರ್ಗಾವಣೆ:ಕಾರ್ಯಪಡೆ ವರದಿ ಸಲ್ಲಿಕೆಯಾದ ಬೆನ್ನಿಗೇ ಸಿಎಂ ಯೋಗಿ ರಾಜ್ಯದ 12 ಡಿಸ್ಟ್ರಿಕ್ಟ್ ಮ್ಯಾಜಿಸ್ಟೇಟ್ಸ್​ಗಳನ್ನು ವರ್ಗಾವಣೆ ಮಾಡಿದ್ದಾರೆ. ಅವರಲ್ಲಿ ಬಹುತೇಕರು ಬಿಜೆಪಿ ಸೋತ ಕ್ಷೇತ್ರಗಳಿಗೆ ಸಂಬಂಧಿಸಿದ ಜಿಲ್ಲೆಯವರಾಗಿದ್ದಾರೆ. ಸೀತಾಪುರ, ಬಂದಾ, ಬಸ್ತಿ, ಶ್ರಾವಸ್ತಿ, ಕೌಶಂಬಿ, ಸಂಬಾಲ್, ಸಹರಣ್​ಪುರ್, ಮೊರಾದಾಬಾದ್, ಹಾಥರಸ್​ನ ಡಿಎಂಗಳನ್ನು ವರ್ಗಾವಣೆ ಮಾಡಲಾಗಿದ್ದರೆ, ಕಸ್​ಗಂಜ್, ಚಿತ್ರಕೂಟ ಮತ್ತು ಔರೈಯಾ ಜಿಲ್ಲೆಗಳ ಡಿಎಂಗಳನ್ನು ಮರು ನಿಯೋಜನೆ ಮಾಡಲಾಗಿದೆ. ಹಾಥರಸ್ ಹೊರತು ಪಡಿಸಿ ಈ ಎಲ್ಲ ಕಡೆ ಬಿಜೆಪಿಗೆ ಸೋಲುಂಟಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
