ನವದೆಹಲಿ:ಮನೆಬಳಕೆಯ 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 200 ರೂ.ನಷ್ಟು ಇಳಿಸುವ ಮೂಲಕ ಕೇಂದ್ರ ಸರ್ಕಾರ, ದೇಶದ ಮಹಿಳೆಯರಿಗೆ ರಕ್ಷಾಬಂಧನದ ಗಿಫ್ಟ್ ನೀಡಿದೆ. ಉದಾಹರಣೆಗೆ, ದೆಹಲಿಯಲ್ಲಿ 1103 ರೂ. ಇರುವ ಸಿಲಿಂಡರ್ ಬೆಲೆ 903 ರೂ.ಗೆ ಇಳಿಯಲಿದೆ. ಈ ನಿರ್ಧಾರ ನಾಳೆಯಿಂದಲೇ, ಅಂದರೆ ಆಗಸ್ಟ್​ 30ರಿಂದ ದೇಶಾದ್ಯಂತ ಜಾರಿಗೆ ಬರಲಿದೆ.
ಪ್ರಧಾನಮಂತ್ರಿ ಉಜ್ವಲ ಯೋಜನಾ ಸವಲತ್ತು ಪಡೆದಿರುವ ಮನೆಗಳಿಗೆ ಈಗಾಗಲೇ ಇರುವ 200 ರೂ. ಸಬ್ಸಿಡಿ ಜತೆಗೆ ಇದೂ ಸಹ ಅನ್ವಯವಾಗಲಿದೆ. ಉದಾಹರಣೆಗೆ, ದೆಹಲಿಯಲ್ಲಿ ಉಜ್ವಲ ಮನೆಗಳಿಗೆ ಸಿಲಿಂಡರ್ ಇನ್ನು ಮುಂದೆ 703 ರೂ. ದರದಲ್ಲಿ ದೊರೆಯಲಿದೆ. ಉಜ್ವಲ ಯೋಜನೆ 9.6 ಕೋಟಿ ಫಲಾನುಭವಿ ಕುಟುಂಬಗಳು ಸೇರಿದಂತೆ ದೇಶದಲ್ಲಿ 31 ಕೋಟಿಗಿಂತ ಹೆಚ್ಚಿನ ದೇಶೀಯ ಎಲ್ಪಿಜಿ ಗ್ರಾಹಕರಿದ್ದಾರೆ. ಈ ಕಡಿತದಿಂದ ದೇಶದ ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ ಸಹಾಯವಾಗಲಿದೆ.
ಬಾಕಿ ಉಳಿದಿರುವ ಉಜ್ವಲ ಅರ್ಜಿಗಳನ್ನು ತೆರವುಗೊಳಿಸಲು ಮತ್ತು ಎಲ್ಲಾ ಅರ್ಹ ಕುಟುಂಬಗಳಿಗೆ ಠೇವಣಿಮುಕ್ತ ಎಲ್ಪಿಜಿ ಸಂಪರ್ಕ ಒದಗಿಸಲು, ಎಲ್ಪಿಜಿ ಸಂಪರ್ಕ ಹೊಂದಿರದ ಬಡ ಕುಟುಂಬಗಳ 75 ಲಕ್ಷ ಮಹಿಳೆಯರಿಗೆ ಸರ್ಕಾರ ಶೀಘ್ರದಲ್ಲೇ ಉಜ್ವಲ ಯೋಜನೆ ಸಂಪರ್ಕಗಳನ್ನು ವಿತರಿಸಲು ಪ್ರಾರಂಭಿಸಲಿದೆ. ಇದು ಉಜ್ವಲ ಯೋಜನೆ ಅಡಿ, ಒಟ್ಟು ಫಲಾನುಭವಿಗಳ ಸಂಖ್ಯೆಯನ್ನು 9.6 ಕೋಟಿಯಿಂದ 10.35 ಕೋಟಿಗೆ ಹೆಚ್ಚಿಸಲಿದೆ.
ಇದನ್ನೂ ಓದಿ:ಮಿಸ್​​ ವರ್ಲ್ಡ್​​ 2023; ಈ ಬಾರಿ ಕಾಶ್ಮೀರದಲ್ಲಿ ನಡೆಯಲಿದೆ ಸ್ಪರ್ಧೆ
ಪ್ರತಿ ಸಿಲಿಂಡರ್‌ಗೆ 200 ರೂ. ಇಳಿಕೆಯ ಕ್ರಮ, ದೇಶದಲ್ಲಿರುವ ನನ್ನ ಕೋಟ್ಯಂತರ ಸೋದರಿಯರಿಗೆ ರಕ್ಷಾಬಂಧನದ ಉಡುಗೊರೆ. ಜನರ ಜೀವನಮಟ್ಟ ಎತ್ತರಿಸಲು, ಬಡವರಿಗೆ, ಮಧ್ಯಮವರ್ಗದವರಿಗೆ ಆರ್ಥಿಕವಾಗಿ ಸಹಾಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಸದಾ ಶ್ರಮಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಕುಟುಂಬಗಳು ತಮ್ಮ ಬಜೆಟ್ ನಿರ್ವಹಿಸುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಕೈಗೆಟಕುವ ಬೆಲೆಗೆ ಅಗತ್ಯ ವಸ್ತುಗಳು ಸಿಗುವುದನ್ನು ಸರ್ಕಾರ ಎಲ್ಲರಿಗೂ ಖಾತ್ರಿಪಡಿಸಲಿದೆ ಎಂದಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − three =
Remember me
