ನವದೆಹಲಿ:ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ಮಧ್ಯ ಪ್ರಾಚ್ಯ ವಲಯಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವು ಸಂಭವಿಸುವ ಅಪಾಯ ಹೆಚ್ಚಾಗಿದೆ.
ಅಧಿಕ ರಕ್ತದೊತ್ತಡ, ಹೆಚ್ಚಿನ ಕೊಲೆಸ್ಟ್ರಾಲ್, ಆಹಾರ ಪದ್ಧತಿಯ ಅಪಾಯಗಳು ಮತ್ತು ವಾಯುಮಾಲಿನ್ಯ ಇದಕ್ಕೆ ಪ್ರಮುಖ ಕಾರಣಗಳು ಎಂದು ಅಧ್ಯಯನವೊಂದು ಹೇಳಿದೆ. ಜಾಗತಿಕವಾಗಿ ಹೃದಯಸಂಬಂಧಿ ವ್ಯಾಧಿಗಳಿಂದ ಸಾಯುವವರ ಸಂಖ್ಯೆ 1990ರ 12.4 ದಶಲಕ್ಷದಿಂದ 2022ರಲ್ಲಿ 19.8 ದಶಲಕ್ಷಕ್ಕೆ ಏರಿದೆ. ಇದು ಇಂಥ ಅನಾರೋಗ್ಯಗಳ ಪ್ರಮಾಣದಲ್ಲಿ ಏರಿಕೆ ತೋರಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. 21 ವಲಯಗಳ ಅಂಕಿ-ಅಂಶಗಳ ವಿಶ್ಲೇಷಣೆ ನಡೆಸಿದ ನಂತರ ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಅಧ್ಯಯನ ನಡೆಸಿದ 204 ಸ್ಥಳಗಳ ಪೈಕಿ 27ರಲ್ಲಿ 2015ರಿಂದ 2022ರ ನಡುವೆ ಈ ಸಾವಿನ ಸಂಖ್ಯೆ ಹೆಚ್ಚಿರುವುದನ್ನು ಸಂಶೋಧಕರು ದಾಖಲಿಸಿದ್ದಾರೆ.
ಆರೋಗ್ಯ ಕುರಿತ ರಾಷ್ಟ್ರೀಯ ಸಂಸ್ಥೆಗಳು, ಆರೋಗ್ಯ ಮಾನದಂಡ ಮತ್ತು ಮೌಲ್ಯಮಾಪನ ಸಂಸ್ಥೆ (ಐಎಚ್​ಎಂಇ), ವಾಷಿಂಗ್ಟನ್ ವಿಶ್ವವಿದ್ಯಾಲಯ ಮೊದಲಾದವುಗಳ ಸಂಶೋಧಕರು ಅಧ್ಯಯನದಲ್ಲಿ ಭಾಗವಹಿಸಿದ್ದರು. ಈ ಸಂಖ್ಯೆಗಳು ಜಾಗತಿಕ ಜನಸಂಖ್ಯೆ ಬೆಳವಣಿಗೆ ಮತ್ತು ವಯಸ್ಸಾಗುವಿಕೆ ಹಾಗೂ ತಡೆಯಬಹುದಾದ ಚಯಾಪಚಯ, ಪರಿಸರ ಮತ್ತು ನಡವಳಿಕೆಯ ಅಪಾಯಗಳು ನೀಡುವ ಕೊಡುಗೆಯನ್ನೂ ಪ್ರತಿಫಲಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. 2022ರ ವ್ಯಾಧಿಗಳ ಜಾಗತಿಕ ಹೊರೆ ಅಧ್ಯಯನದ ಸಕಾಲಿಕಗೊಳಿಸಲಾದ 2023ರ ವರದಿಯು 204 ದೇಶ ಹಾಗೂ ಪ್ರದೇಶಗಳ ಅಂಕಿ-ಅಂಶ ಒಳಗೊಂಡಿದೆ.
ಕೋವಿಡ್​ಗೆ ಒಳಗಾಗಿದ್ದ ಶೇ.6 ಮಂದಿ ಮರಣನವದೆಹಲಿ: ಕೋವಿಡ್ ಸೋಂಕಿಗೆ ಒಳಗಾಗಿದ್ದವರಲ್ಲಿ ಶೇ. 6 ಮಂದಿ 2023ರಲ್ಲಿ ಸಾವಿಗೀಡಾಗಿದ್ದಾರೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ಕೈಗೊಂಡಿದ್ದ ಅಧ್ಯಯನದಲ್ಲಿ ಕಂಡುಬಂದಿದೆ. 2020ರ ಮಾರ್ಚ್​ನಿಂದ 2022ರ ಮಾರ್ಚ್ ವರೆಗಿನ ಅವಧಿಯಲ್ಲಿ ಕರೊನಾ ಸೋಂಕಿಗೆ ಒಳಗಾಗಿದ್ದವರಲ್ಲಿ ಶೇ. 6ರಷ್ಟು ಜನರು 2023ರ ಜುಲೈ ಒಳಗೆ ಮರಣ ಹೊಂದಿರುವುದು ಈ ಅಧ್ಯಯನದಲ್ಲಿ ತಿಳಿದುಬಂದಿದೆ. ಚೆನ್ನೈ ಹೊರತುಪಡಿಸಿ ತಮಿಳುನಾಡಿನ 1,220 ಮಂದಿಯನ್ನು ಮದ್ರಾಸ್ ಮೆಡಿಕಲ್ ಕಾಲೇಜಿನ ಇನ್​ಸ್ಟಿಟ್ಯೂಟ್ ಆಫ್ ಕಮ್ಯುನಿಟಿ ಮೆಡಿಸಿನ್​ನ ವೈದ್ಯರು ಹಾಗೂ ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯದ ಅಧಿಕಾರಿಗಳು ಈ ಅಧ್ಯಯನಕ್ಕೆ ಒಳಪಡಿಸಿದ್ದು, ಆ ಪೈಕಿ 73 ಜನರು ಮೃತಪಟ್ಟಿದ್ದಾರೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.
ಯುವನಿಧಿ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್; ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು?

ಕಣ್ಣಿಗೊಂದು ಸವಾಲು: ಜೀನಿಯಸ್​ ಮಾತ್ರ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರುವ ಬೆಕ್ಕನ್ನು ಪತ್ತೆಹಚ್ಚಬಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 2 =
Remember me
