ನವದೆಹಲಿ:ಕರೊನಾ ಲಸಿಕೆಯ ಮೊದಲ ಡೋಸ್ ಸಾವಿನ ಸಾಧ್ಯತೆಯನ್ನು ಶೇಕಡ 97.5ರಷ್ಟು ತಡೆಯುತ್ತದೆ ಹಾಗೂ 2ನೇ ಡೋಸ್​ನ ಪರಿಣಾಮ ಶೇ, 97.5ರಷ್ಟಿರುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಏಪ್ರಿಲ್-ಮೇ ಮಾಸದಲ್ಲಿ ಎರಡನೇ ಅಲೆ ವೇಳೆ ಲಸಿಕೆ ಪಡೆಯದವರಲ್ಲೇ ಹೆಚ್ಚಿನ ಮರಣ ದಾಖಲಾಗಿದೆ ಎಂದು ಅಧ್ಯಯನ ಹೇಳಿದೆ. ಹೀಗಾಗಿ ಸೋಂಕು ತಡೆಗೆ ಲಸಿಕೆ ಪರಿಣಾಮಕಾರಿ ಎಂಬುದು ಋಜುವಾತಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ‘ವೈರಸ್ ವಿರುದ್ಧ ವ್ಯಾಕ್ಸಿನ್ ಅತ್ಯಂತ ಮಹತ್ವದ ಗುರಾಣಿಯಾಗಿದೆ’ ಎಂದು ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿ.ಕೆ. ಪೌಲ್ ಹೇಳಿದ್ದಾರೆ.
ನಾಸಿಕ ಲಸಿಕೆ ಪರೀಕ್ಷೆ:ಕರೊನಾ ತಡೆಗಾಗಿ ಮೂಗಿನ ಮೂಲಕ ನೀಡುವಂಥ ಭಾರತ್ ಬಯೋಟೆಕ್​ನ ಬಿಬಿವಿ154 ಲಸಿಕೆಯ ಎರಡು ಮತ್ತು ಮೂರನೇ ಹಂತದ ಪರೀಕ್ಷೆಗಳನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್್ಸ), ಲಿವರ್ ಆಂಡ್ ಬಿಲಿಯರಿ ಸೈನ್ಸಸ್ ಸಂಸ್ಥೆ ಹಾಗೂ ಗುರುನಾನಕ್ ಆಸ್ಪತ್ರೆ, ಹರಿಯಾಣದ ಪಲ್ವಾಲ್​ನಲ್ಲಿರುವ ಇನ್​ಕ್ಲೆನ್ ಆಸ್ಪತ್ರೆಗಳಲ್ಲಿ ನಡೆಸಲಾಗುತ್ತದೆ. ಎರಡರಿಂದ ಮೂರು ವಾರಗಳಲ್ಲಿ ಪರೀಕ್ಷೆ ಆರಂಭವಾಗುವ ನಿರೀಕ್ಷೆಯಿದೆ.
18-60 ವಯೋಗುಂಪಿನ ಆರೋಗ್ಯ ಸ್ವಯಂಸೇವಕರಲ್ಲಿ ಜೂನ್ ತಿಂಗಳಲ್ಲೇ ಭಾರತ್ ಬಯೋಟೆಕ್ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿದೆ. ಕೇಂದ್ರೀಯ ಔಷಧಗಳ ಮಾನಕ ನಿಯಂತ್ರಣ ಸಂಸ್ಥೆಗೆ (ಸಿಡಿಎಸ್​ಸಿಒ) ಟ್ರಯಲ್​ನ ಡೇಟಾವನ್ನು ಸಲ್ಲಿಸಿದ್ದು ಅದು ತೃಪ್ತಿಕರವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ವೈರಸ್ ಪ್ರವೇಶಿಸುವ ಜಾಗವಾದ ಮೂಗಿನಲ್ಲೇ ಬಲಿಷ್ಠವಾದ ರೋಗನಿರೋಧಕ ಶಕ್ತಿಯನ್ನು ಇದು ಸೃಷ್ಟಿಸುತ್ತದೆ. ವೈರಾಣು ಶ್ವಾಸಕೋಶವನ್ನು ಪ್ರವೇಶಿಸುವುದನ್ನು ತಡೆದು ಹಾನಿಯನ್ನು ತಪ್ಪಿಸುತ್ತದೆ. ನಾಸಿಕ ಲಸಿಕೆಯು ಚುಚ್ಚುವಂಥದ್ದಲ್ಲ. ಬಿಬಿವಿ154 ಸೂಜಿ-ಮುಕ್ತ ವ್ಯಾಕ್ಸಿನ್ ಆಗಿದೆ.
ವೃದ್ಧರಲ್ಲಿ ಕೇಸ್ ಜಾಸ್ತಿ:ಲಸಿಕೆಯ ಸಂಪೂರ್ಣ ಡೋಸ್ ಪಡೆದರೂ ಕೋವಿಡ್ ಸೋಂಕು ತಗಲುವ ಅಪಾಯ ವೃದ್ಧರು ಹಾಗೂ ಅನ್ಯವ್ಯಾಧಿಗಳಿಂದ ಬಳಲುತ್ತಿರುವವರಲ್ಲಿ ಜಾಸ್ತಿಯಿದೆ ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ನಡೆಸಿದ ಅಧ್ಯಯನ ದೃಢಪಡಿಸಿದೆ. ಸಂಪೂರ್ಣ ಲಸಿಕೆ ಪಡೆದವರಲ್ಲಿ ಕರೊನಾ ಸೋಂಕು ದೃಢಪಟ್ಟ 12,908 ಗಂಭೀರ ಪ್ರಕರಣಗಳು ಆಗಸ್ಟ್ 30ರ ವರೆಗೆ ತನಗೆ ಬಂದಿವೆ ಎಂದು ಸಿಡಿಸಿ ಹೇಳಿದೆ. ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವುದು ಅಗತ್ಯವಾದ ಸುಮಾರು ಶೇಕಡ 70 ಪ್ರಕರಣಗಳು 65 ವರ್ಷ ಮೇಲ್ಪಟ್ಟ ವಯಸ್ಕರಲ್ಲಿ ಕಂಡು ಬಂದಿದೆ. ಮೃತಪಟ್ಟವರಲ್ಲಿ ಶೇ. 87ರಷ್ಟು ಮಂದಿ ಕೂಡ 65 ವರ್ಷ ಮೇಲಿನವರು ಎಂದೂ ಸಿಡಿಸಿ ಹೇಳಿದೆ.
43 ಸಾವಿರ ಹೊಸ ಕೇಸ್:ಗುರುವಾರ ದೇಶದಲ್ಲಿ 43,263 ಕೋವಿಡ್ ಕೇಸ್​ಗಳು ದೃಢಪಟ್ಟಿವೆ. ಇದು ಬುಧವಾರದಕ್ಕಿಂತ ಶೇಕಡ 14ರಷ್ಟು ಹೆಚ್ಚಾಗಿದೆ. ಕೇರಳದ 181 ಜನರ ಸಹಿತ ದೇಶದಲ್ಲಿ ಒಟ್ಟು 338 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹೊಸ ಪ್ರಕರಣಗಳಲ್ಲಿ ಕೇರಳದ ಪಾಲೇ 30,196 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದ ಆರ್ಥಿಕ ರಾಜಧಾನಿ ಮುಂಬೈಯಲ್ಲಿ ದೈನಿಕ ಪ್ರಕರಣ ಹೆಚ್ಚಾಗಿದೆ.
1.8 ಕೋಟಿ ರೂ. ಬಿಲ್:ಕೋವಿಡ್ ಚಿಕಿತ್ಸೆ ಪಡೆಯಲು ದೆಹಲಿ ಸಾಕೇತ್​ನ ಮ್ಯಾಕ್ಸ್ ಆಸ್ಪತ್ರೆಗೆ ಸೇರಿದ್ದ ರೋಗಿಯೊಬ್ಬನಿಗೆ 1.8 ಕೋಟಿ ರೂಪಾಯಿ ಬಿಲ್ ನೀಡಿದ್ದಕ್ಕೆ ಹಲವು ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಏಪ್ರಿಲ್ 28ರಂದು ದಾಖಲಾಗಿದ್ದ 51 ವರ್ಷದ ರೋಗಿ ಸೆಪ್ಟೆಂಬರ್ 6ರಂದು ಡಿಸ್ಚಾರ್ಜ್ ಆಗಿದ್ದರು. ದುಬಾರಿ ಬಿಲ್​ಗೆ ವಿರೋಧ ವ್ಯಕ್ತವಾಗಿರುವುದಕ್ಕೆ ಆಸ್ಪತ್ರೆ ಸ್ಪಷ್ಟೀಕರಣ ನೀಡಿದೆ. ಇದು ಸಂಕೀರ್ಣ ಕೇಸ್ ಆಗಿತ್ತು. ಆಸ್ಪತ್ರೆ ಒದಗಿಸಿದ ಆರೈಕೆಗೆ ರೋಗಿ ಕುಟುಂಬಸ್ಥರು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಅದು ವಿವರಿಸಿದೆ.
ಭಾರತದಲ್ಲಿ ಇನ್ನು ಈ ಕಾರು ಉತ್ಪಾದನೆ ಆಗುವುದಿಲ್ಲ; ಸದ್ಯಕ್ಕೆ ಇರುವ ದಾಸ್ತಾನಷ್ಟೇ ಮಾರಾಟ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 6 =
Remember me
