ಭಟಿಂಡಾ:ದರೋಡೆ ನಡೆಸಿ ಪರಾರಿಯಾಗುತ್ತಿದ್ದ ಐವರನ್ನು ತಡೆದ ಪೊಲೀಸ್​ ಕಾನ್​ಸ್ಟೆಬಲ್​ನ ಮೇಲೆ ಹಲ್ಲೆ ನಡೆಸಿ, ಕೈ ಕತ್ತರಿಸಿರುವ ಘಟನೆ ಪಂಜಾಬ್​ನ ಭಟಿಂಡಾದ ಬಳಿ ನಡೆದಿದೆ. ಘಟನೆಯಿಂದ ಪಂಜಾಬ್​ನ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳ ಎತ್ತಲಾಗುತ್ತಿದ್ದು, ದಿನದಿಂದ ದಿನಕ್ಕೆ ಅಲ್ಲಿನ ಪರಿಸ್ಥತಿ ಹದಗೆಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಇದನ್ನೂ ಓದಿ:ಚೆಕ್​ಪೋಸ್ಟ್​​ನಲ್ಲಿ 2ರೂ. ಹಣ ವಸೂಲಿ ಆರೋಪ: 37 ವರ್ಷಗಳ ನಂತರ ಆರೋಪಿಗಳ ಖುಲಾಸೆದರೋಡೆಕೋರ ಗುಂಪು ರಸ್ತೆ ಬದಿ ಯುವಕನಿಂದ ವಸ್ತುಗಳನ್ನು ದೋಚಿಕೊಂಡು ಕಾಳಜಾರಾಣಿ ಗ್ರಾಮದ ಕಡೆಗೆ ಹೋರಟಿತ್ತು. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಕಿಕರ್ ಸಿಂಗ್, ಕಳ್ಳರನ್ನು ಹಿಡಿಯಲು ಧುನ್ನಿಕೆ ಗ್ರಾಮಕ್ಕೆ ಹೋಗುವ ಸಂಪರ್ಕ ರಸ್ತೆಯಲ್ಲಿ ವಾಹನ ನಿಲ್ಲಿಸಿದ್ದರು. ದರೋಡೆಕೋರರನ್ನು ಹಿಡಿಯಲು ಸಿಂಗ್ ಕಾರಿನಿಂದ ಇಳಿದಾಗ, ಒಬ್ಬ ದರೋಡೆಕೋರರು ಅವರ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿ ಕೈಯನ್ನು ಕತ್ತರಿಸಿದ್ದಾನೆ.ಕೂಡಲೇ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುತ್ತಲೇ ಕಳ್ಳರು ಪರಾರಿಯಾಗಲು ಯತ್ನಿಸಿದ್ದು, ಗ್ರಾಮಸ್ಥರು ದರೋಡೆಕೋರರನ್ನು ಸುತ್ತುವರಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡ ಪೊಲೀಸ್​ನನ್ನು ಕೂಡಲೇ ಚಿಕಿತ್ಸೆಗಾಗಿ ಬಟಿಂಡಾದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಸುದ್ದಿ ತಿಳಿದ ನಗರ ಡಿಎಸ್ಪಿ ವಿಶ್ವಜಿತ್ ಸಿಂಗ್ ಮಾನ್ ಆಸ್ಪತ್ರೆಗೆ ಆಗಮಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − fifteen =
Remember me
