ನವದೆಹಲಿ:ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದ ಬೆನ್ನಿಗೇ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿದ್ದು, 2 ಸಾವಿರ ನೋಟನ್ನು ಬ್ಯಾಂಡೇಜ್ ಎಂದು ಕರೆದಿದ್ದಾರೆ.
ನಿರೀಕ್ಷೆಯಂತೆ ಕೇಂದ್ರ ಸರ್ಕಾರ/ಆರ್​​ಬಿಐ 2000 ರೂ. ನೋಟುಗಳನ್ನು ಹಿಂದೆಗೆದುಕೊಂಡಿದೆ ಮತ್ತು ನೋಟುಗಳನ್ನು ಬದಲಾಯಿಸಲು ಸೆಪ್ಟೆಂಬರ್ 30ರವರೆಗೆ ಸಮಯ ನೀಡಿದೆ. 2000 ರೂಪಾಯಿ ನೋಟು ವಿನಿಮಯದ ಜನಪ್ರಿಯ ಮಾಧ್ಯಮವಲ್ಲ. ನಾವು ಇದನ್ನು 2016ರ ನವೆಂಬರ್​​ನಲ್ಲೇ ಹೇಳಿದ್ದೇವೆ ಮತ್ತು ನಾವು ಸರಿ ಎಂದು ಸಾಬೀತಾಗಿದೆ ಎಂದು ಪಿ.ಚಿದಂಬರಂ ಹೇಳಿದ್ದಾರೆ.
ಇದನ್ನೂ ಓದಿ:ಮಲ್ಟಿಪ್ಲೆಕ್ಸ್​ನಲ್ಲಿ 99 ರೂಪಾಯಿಗೇ ಕನ್ನಡ ಸಿನಿಮಾ!; ಎಷ್ಟು ದಿನ ಈ ವಿಶೇಷ ಕೊಡುಗೆ?
ಜನಪ್ರಿಯ ಮತ್ತು ವ್ಯಾಪಕವಾಗಿ ವಿನಿಮಯದಲ್ಲಿದ್ದ 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯಗೊಳಿಸುವ ಮೂರ್ಖ ನಿರ್ಧಾರವನ್ನು ಮರೆಮಾಚಲು 2000 ರೂ. ನೋಟು ಒಂದು ಬ್ಯಾಂಡೇಜ್​ ಆಗಿತ್ತು. ನೋಟು ಅಮಾನ್ಯೀಕರಣದ ಕೆಲವು ವಾರಗಳ ನಂತರ ಕೇಂದ್ರ ಸರ್ಕಾರ/ಆರ್​ಬಿಐ 500 ರೂ. ನೋಟನ್ನು ಮತ್ತೆ ಪರಿಚಯಿಸಲು ಒತ್ತಾಯಿಸಲಾಯಿತು. ಇನ್ನು 1000 ರೂ. ಮುಖಬೆಲೆಯ ನೋಟುಗಳನ್ನು ಮತ್ತೆ ಪರಿಚಯಿಸಿದರೆ ನನಗೆ ಆಶ್ಚರ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಹೆಲ್ಮೆಟ್​ ಧರಿಸದ ಮಹಿಳಾ ಪಿಎಸ್​ಐ; ಟ್ವೀಟ್ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲು, ದಂಡ ವಿಧಿಸಿದ ಪೊಲೀಸರು
ನೋಟು ಅಮಾನ್ಯೀಕರಣ ಒಂದು ಸುತ್ತು ಬಂದಿದೆ ಎಂದಿರುವ ಚಿದಂಬರಂ, 2 ಸಾವಿರ ರೂ. ನೋಟು ಯಾವತ್ತೂ ಕ್ಲೀನ್ ನೋಟ್ ಆಗಿರಲಿಲ್ಲ. ಬಹಳಷ್ಟು ಮಂದಿಯಿಂದ ಅದು ಬಳಕೆಯೇ ಆಗುತ್ತಿರಲಿಲ್ಲ. ಅದು ಕಾಳಧನ ಇರುವವರಲ್ಲಿ ತಾತ್ಕಾಲಿಕ ಬಳಕೆಗಷ್ಟೇ ಆಗಿತ್ತು ಎಂದಿದ್ದಾರೆ.
2000 ರೂ. ಮುಖಬೆಲೆಯ ನೋಟು ಹಿಂಪಡೆದ ಆರ್​ಬಿಐ: ಇದ್ದವರು ಏನು ಮಾಡಬೇಕು?

ಅಂದು ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಇಂದು ಬಿ.ಎಲ್.ಸಂತೋಷ್ ಮರುಪ್ರಶ್ನೆ!: ವಿಷಯ ಇದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
