ಹೈದರಾಬಾದ್​:ಇಂದು ಯಾವುದೇ ಸರ್ಕಾರಿ ಕೆಲಸ ಆಗಬೇಕೆಂದರೂ ಅಲ್ಲಿ ಲಂಚವೇ ಪ್ರಧಾನ. ಲಂಚ ಕೊಡದಿದ್ದರೆ ಯಾವುದೇ ಕೆಲಸ ಆಗುವುದಿಲ್ಲ. ಸರ್ಕಾರಿ ಸೇವೆ ಜನ ಸಾಮಾನ್ಯನ ಹಕ್ಕು ಆಗಿದ್ದರೂ ಅದನ್ನು ಪಡೆಯಲು ತಾನು ಬೆವರು ಸುರಿಸಿ ದುಡಿದ ಹಣವನ್ನು ಲಂಚವಾಗಿ ಕೊಡಬೇಕಿದೆ. ಸರ್ಕಾರಿ ನೌಕರಿಯಲ್ಲಿರುವ ಕೆಲ ಹೈಟೆಕ್​ ಭಿಕ್ಷುಕರ ಜನ ಸಾಮಾನ್ಯರನ್ನು ಸುಲಿಗೆ ಮಾಡುವದನ್ನೇ ತಮ್ಮ ಗುರಿಯನ್ನಾಗಿ ಮಾಡಿಕೊಂಡಿದ್ದಾರೆ. ಲಂಚಕ್ಕೆ ಕಡಿವಾಣ ಹಾಕಲು ಎಷ್ಟೇ ಕಾನೂನು ತಂದರೂ ಅದು ಪರಿಣಾಮಕಾರಿಯಾಗುತ್ತಿಲ್ಲ. ಲಂಚ ಒಂದು ರೀತಿಯಲ್ಲಿ ಸಾಂಕ್ರಮಿಕ ರೋಗದಂತೆ ಎಲ್ಲಡೆ ಪಸರಿಸಿದೆ.
ಆದರೆ, ಲಂಚ ಕೇಳವವರನ್ನು ಪ್ರಶ್ನಿಸಿದರೆ ಅವರ ಎದೆಯಲ್ಲಿ ನಡುಕ ಹುಟ್ಟುವುದಂತೂ ಗ್ಯಾರೆಂಟಿ. ಮಹಾರಾಷ್ಟ್ರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ, ಲಂಚ ಕೇಳಿದ ಬ್ಲಾಕ್​ ಪಂಚಾಯಿತಿ ಅಧಿಕಾರಿಗೆ ಬಿಸಿ ಮುಟ್ಟಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ:ಆಟಿಸಂ ಮಕ್ಕಳು ಬುದ್ಧಿಮಾಂದ್ಯರಲ್ಲ: ಸಮಸ್ಯೆ ಗುರುತಿಸಿ, ಆರಂಭದಲ್ಲೇ ಚಿಕಿತ್ಸೆ ಕೊಡಿಸಲು ಪಾಲಕರಿಗೆ ಸಲಹೆ
ಗ್ರಾಮ ಪಂಚಾಯಿತಿ ಸದಸ್ಯ ಮಂಗೇಶ್​ ಸಾಬಲೆ ಎಂಬುವರು ಮಹಾರಾಷ್ಟ್ರದ ಸಂಭಾಜಿ ನಗರ ಜಿಲ್ಲೆಯ ತಮ್ಮ ಗರೈ ಪೈಗಾ ಗ್ರಾಮದಲ್ಲಿ ಒಂದು ಬಾವಿಯನ್ನು ಕೊರೆಸಬೇಕೆಂಬ ಬಯಸಿದ್ದರು. ಇದಕ್ಕೆ ಅನುಮತಿ ಕೋರಿ ಪಂಚಾಯಿತಿಯಲ್ಲಿ ಬೇಡಿಕೆ ಇಟ್ಟಿದ್ದರು. ಆದರೆ, ಅಧಿಕಾರಿಗಳು ಪ್ರಸ್ತಾವನೆಗೆ ಅನುಮೋದನೆ ನೀಡಲು 12 ಪರ್ಸೆಂಟ್​ ಲಂಚ ಕೇಳಿದ್ದರು. ಗ್ರಾಮದ ಅಭಿವೃದ್ಧಿ ಕೆಲಸಕ್ಕಾಗಿ ಲಂಚ ಕೇಳಿದ್ದಕ್ಕೆ ಅಧಿಕಾರಿಗಳ ವಿರುದ್ಧ ಸಾಬಲೆ ಅವರಿಗೆ ಎಲ್ಲಿಲ್ಲದ ಆಕ್ರೋಶ ಬಂದಿತು.
ಆದರೂ ಗ್ರಾಮಕ್ಕಾಗಿ ಸುಮ್ಮನಾದ ಸಾಬಲೆ, ತುರ್ತಾಗಿ ಬಾವಿ ತೋಡಬೇಕು ಅಂತ ಒಂದು ಲಕ್ಷ ರೂಪಾಯಿ ಹಣದೊಂದಿಗೆ ಪಂಚಾಯತಿ ಬ್ಲಾಕ್ ಅಧಿಕಾರಿಗಳನ್ನು ಸಂಪರ್ಕಿಸಿದರು. ಆದರೆ, ಅಧಿಕಾರಿಗಳು ತಮಗೆ 12ರಷ್ಟು ಹಣ ಬೇಕೇ ಬೇಕು ಎಂದು ಪಟ್ಟು ಹಿಡಿದರು. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಗ್ರಾಮ ಪಂಚಾಯಿತಿ ಸದಸ್ಯ ಸಾಬಲೆ ನಿರಾಸೆಯಿಂದ ಅಲ್ಲಿಂದ ಹಿಂತಿರುಗಿದರು.
ಇದಾದ ಮಾರನೇ ದಿನ ಅಂದರೆ ಮಾರ್ಚ್​ 31ರಂದು ಬೆಳಗ್ಗೆ ಜಿಲ್ಲಾ ಪಂಚಾಯಿತಿ ವಲಯ ಕಚೇರಿ ಮುಂದೆ 2 ಲಕ್ಷ ರೂ. ನೋಟುಗಳ ಸರಮಾಲೆಯೊಂದಿಗೆ ಬಂದ ಸಾಬಲೆ, ಹಣವನ್ನು ಗಾಳಿಯಲ್ಲಿ ಎಸೆಯಲು ಆರಂಭಿಸಿದರು. ಪಂಚಾಯಿತಿ ಅಧಿಕಾರಿಗಳು ಗ್ರಾಮದ ಜನರಿಗಾಗಿ ಮಾಡಿರುವ ಕೆಲಸಕ್ಕೆ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆಕ್ರೋಶ ಹೊರಹಾಕುತ್ತಾ ಒಂದೊಂದೆ ನೋಟನ್ನು ಕಿತ್ತು ಗಾಳಿಯಲ್ಲಿ ಎಸೆದಾಡಿದರು. ಈ ದೃಶ್ಯಗಳನ್ನು ಅಲ್ಲಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದರಿಂದಾಗಿ ಆ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಳ: ತಾಪಮಾನ ಏರಿಕೆಯಾದಂತೆ ಜನರಿಗೆ ಕಾಡಲಿದೆ ಈ ಸಮಸ್ಯೆಗಳು
#ViralVideo| Sarpanch in#Maharashtraresorts to unique protest against corruption.He throws nearly Rs 2 lakh worth currency notes on Panchayat office in Maharashtra's Chhatrapati Sambhajinagar district.pic.twitter.com/FGT9KwgxBL
— Nazaket Rather (@RatherNazaket)April 1, 2023

ಗರೈ ಪೈಗಾ ಗ್ರಾಮದ 20 ರೈತರು ತಮ್ಮ ಹೊಲಗಳಲ್ಲಿ ಕೊಳವೆಬಾವಿ ಕೊರೆಸಲು ಸಲ್ಲಿಸಿರುವ ಅರ್ಜಿಗಳು ಆ ಪಂಚಾಯಿತಿ ಬ್ಲಾಕ್‌ನಲ್ಲಿ ಬಾಕಿ ಉಳಿದಿವೆ. ಲಂಚ ನೀಡದ ಕಾರಣ ಅನುಮತಿ ನೀಡದೆ ಬಾಕಿ ಇರಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಬಾವಿ ತೋಡುವುದಲ್ಲದೆ ಕುರಿಗಳ ಶೆಡ್, ಕಾಲುವೆಗಳ ನಿರ್ಮಾಣದಂತಹ ಯಾವುದೇ ಕಾಮಗಾರಿಗಳನ್ನು ಮಾಡಬೇಕಾದರೂ ಪಂಚಾಯಿತಿ ಸಮಿತಿ ಅಧಿಕಾರಿಗಳು ಕೇಳಿದ ಮೊತ್ತವನ್ನು ಲಂಚವಾಗಿ ನೀಡಬೇಕಾಗಿದೆ ಎಂದು ರೈತರು ದೂರುತ್ತಾರೆ.
ಪಂಚಾಯಿತಿ ಸದಸ್ಯ ಸಾಬಲೆ ಅವರ ವಿನೂತನ ಪ್ರತಿಭಟನೆಯಿಂದಾಗಿ ಅಧಿಕಾರಿಗಳೇ ಕಿತ್ತಾಡಿಕೊಂಡಿದ್ದಾರೆ. ಲಂಚ ಪಡೆದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮೇಲಿನ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಈ ವಿಡಿಯೋ ವೈರಲ್ ಆದ ನಂತರ ನೆಟ್ಟಿಗರು ಅಧಿಕಾರಿಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಸಾಬಲೆ ಅವರನ್ನು ಪ್ರಶಂಸಿಸಿದ್ದಾರೆ. ಸಾಬಲೆ ಅವರು ಎಸೆದ ಕೆಲವು ನೋಟುಗಳನ್ನು ಹತ್ತಿರದ ಮಕ್ಕಳು ಎತ್ತಿಕೊಂಡರು ಮತ್ತು ಕೆಲವನ್ನು ಅಲ್ಲಿದ್ದ ಕೆಲವರು ತೆಗೆದುಕೊಂಡು ಹೋಗಿದ್ದಾರೆ.(ಏಜೆನ್ಸೀಸ್​)
ಇಷ್ಟಪಟ್ಟು ಓದಲು ಕರೆ ನೀಡುತ್ತಿದೆ ‘ಬನ್​ ಟೀ’ ಚಿತ್ರತಂಡ; ಟ್ರೇಲರ್​ ಬಿಡುಗಡೆ

ವಂಚಕನನ್ನು ಅಕ್ರಮವಾಗಿ ಬಂಧಿಸಿ ಬೆದರಿಸಿ 15 ಲಕ್ಷ ರೂ. ವಸೂಲಿ; ಪಿಎಸ್​ಐ ಸೇರಿ ನಾಲ್ವರು ಪೊಲೀಸರ ಅಮಾನತು

ಚಿನ್ನದ ಬೆಲೆ ಏರಿಕೆ ಏಕೆ?: ಒಂದೇ ವರ್ಷದಲ್ಲಿ ಎಷ್ಟು ಏರಿಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
