ನವದೆಹಲಿ:ಲಾಕ್​ಡೌನ್ ಜಾರಿಯಿಂದಾಗಿ ವಿವಿಧ ದೇಶಗಳಲ್ಲಿ ಸಿಕ್ಕಿಕೊಂಡಿರುವ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರುವ ವಂದೇ ಭಾರತ್ ಮಿಷನ್​​ನ ಎರಡನೇ ಹಂತದ ಕಾರ್ಯಾಚರಣೆ ಮೇ 16 ಮೇ 22 ರ ಮಧ್ಯೆ ನಡೆಯಲಿದೆ.31 ದೇಶಗಳಲ್ಲಿರುವ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರಲು ಫೀಡರ್ ವಿಮಾನ ಸೇರಿದಂತೆ 149 ವಿಮಾನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ತಿಂಗಳ ಆರಂಭದಲ್ಲಿ ಸರ್ಕಾರ ಎರಡು ಹಂತದ ಕಾರ್ಯಾಚರಣೆಯನ್ನು ಘೋಷಿಸಿತ್ತು.
ಇದನ್ನೂ ಓದಿ:ನಾಳೆ ಆಕಾಶದಲ್ಲಿ ಅಪರೂಪದ ವಿದ್ಯಮಾನ: ಭೂಮಿ ಸಮೀಪ ಸ್ವಾನ್ ಧೂಮಕೇತು!ಈಗ ಸರ್ಕಾರ ಅಮೆರಿಕಕ್ಕೆ 13 ವಿಮಾನಗಳು, ಯುಕೆಗೆ 9, ಕೆನಡಾಕ್ಕೆ 10, ಯುಎಇಗೆ 11, ಸೌದಿ ಅರೆಬಿಯಾಗೆ 9, ರಷ್ಯಾಗೆ 6 ಮತ್ತು ಆಸ್ಟ್ರೇಲಿಯಾಗೆ 7 ವಿಮಾನಗಳ ವ್ಯವಸ್ಥೆ ಮಾಡುವ ನಿರೀಕ್ಷೆ ಇದೆ. ಫ್ರಾನ್ಸ್, ಇಟಲಿ, ಜರ್ಮನಿ, ಐರ್ಲೆಂಡ್ ಮತ್ತು ಆಗ್ನೇಯ ಏಷ್ಯಾ ಹಾಗೂ ಗಲ್ಫ್ ರಾಷ್ಟ್ರಗಳಿಗೂ ವಿಮಾನ ವ್ಯವಸ್ಥೆ ಮಾಡಲಿದೆ.ಮೇ 7 ರಂದು ಕಾರ್ಯಾಚರಣೆಯ ಮೊದಲ ದಿನ 2300 ಭಾರತೀಯರನ್ನು ಮರಳಿ ತರಲು ಹತ್ತು ವಿಮಾನಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಕೆಲ ದಿನಗಳ ನಂತರ ಯುಎಇಗೆ 10, ಅಮೆರಿಕ ಹಾಗೂ ಯುಕೆಗೆ ತಲಾ 7, ಸೌದಿ ಅರೆಬಿಯಾಗೆ 5, ಸಿಂಗಾಪುರಕ್ಕೆ 5, ಕತಾರ್​​ಗೆ 2 ವಿಮಾನಗಳ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ:ಮೊನ್ನೆ ಕಾಣಿಸಿಕೊಂಡವನು ನಿಜವಾದ ಕಿಮ್ ಅಲ್ವಾ? ಅವನ ಡುಪ್ಲಿಕೇಟಾ?
ಕಳೆದ ವಾರ ಆರಂಭವಾದ ಮೊದಲ ಹಂತದ ಐದು ದಿನಗಳ ಕಾರ್ಯಾಚರಣೆಯಲ್ಲಿ ಅಮೆರಿಕ, ಯುಕೆ, ಆಗ್ನೇಯ ಏಷ್ಯಾ, ಕೊಲ್ಲಿಯ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ಕರೆತರಲಾಗಿದೆ.ಕೊಲ್ಲಿ ಯುದ್ಧದ ನಂತರ ಕೇಂದ್ರ ಸರ್ಕಾರ ವಾಣಿಜ್ಯ ಜೆಟ್ ವಿಮಾನ, ಮಿಲಿಟರಿ ವಿಮಾನಗಳು ಹಾಗೂ ಯುದ್ಧ ವಿಮಾನಗಳನ್ನು ಈ ಅತಿದೊಡ್ಡ ವಾಪಸಾತಿ ಕಾರ್ಯಾಚರಣೆಯಲ್ಲಿ ಬಳಸಿಕೊಂಡಿದೆ.
ತಿರುಪತಿ ದೇವಾಲಯಕ್ಕೆ 400 ಕೋಟಿ ರೂ. ನಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
