ನವದೆಹಲಿ:ಕರಾಚಿಯ ಬಂದರಿಗೆ ಹೊರಟಿದ್ದ, ಹಾಂಗ್​ಕಾಂಗ್​ ಧ್ವಜವನ್ನು ಹೊಂದಿದ್ದ ಹಡಗನ್ನು ಗುಜರಾತ್​ನ ಕಂಡ್ಲಾ ಬಂದರಿನಲ್ಲಿ ರಕ್ಷಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಫೆ.3ರಂದೇ ಹಡಗನ್ನು ವಶ ಪಡಿಸಿಕೊಳ್ಳಲಾಗಿದ್ದು ಅದನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಹಡಗಿನಲ್ಲಿ ಖಂಡಾಂತರ (ಬ್ಯಾಲಿಸ್ಟಿಕ್)​ ಕ್ಷಿಪಣಿಗಳ ಉಡ್ಡಯನಕ್ಕೆ ಬಳಸುವ ಅಟೋಕ್ಲೇವ್​ ಇತ್ತು. ಈ ಅಟೋಕ್ಲೇವ್​ನ್ನು ಕೈಗಾರಿಕೆಗಳಲ್ಲಿ ಡ್ರೈಯರ್​​ನ್ನಾಗಿ ಕೂಡ ಉಪಯೋಗಿಸಲಾಗುತ್ತಿದೆ. ಅನುಮಾನ ಬಂದ ಹಿನ್ನೆಲೆಯಲ್ಲಿ ಭಾರತೀಯ ಅಧಿಕಾರಿಗಳು ಹಡಗನ್ನು ವಶಕ್ಕೆ ಪಡೆದಿದ್ದಾರೆ.
ತಡೆಹಿಡಿದ ಹಡಗಿನಲ್ಲಿರುವ ಅಟೋಕ್ಲೇವ್​​ನ್ನು ಈಗಾಗಲೇ ಸ್ಥಳೀಯ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆದರೆ ಹೆಚ್ಚಿನ ತನಿಖೆ ನಡೆಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಮತ್ತೊಂದು ತಂಡವನ್ನು ಗುಜರಾತ್​ ಬಂದರಿಗೆ ಕಳಿಸಿದೆ ಎಂದು ಮೂಲಗಳು ತಿಳಿಸಿವೆ.
ಜಿಯಾಂಗ್ಸು ಪ್ರಾಂತ್ಯದಲ್ಲಿನ ಯಾಂಗಟ್ಜೆ ನದಿ ತೀರದಿಂದ ಹೊರಟಿದ್ದ ಡಾ ಕುಯಿ ಯಾನ್ ಎಂಬ ಹೆಸರಿನ ಈ ಹಡಗು ಪಾಕಿಸ್ತಾನದ ಕರಾಚಿಯಲ್ಲಿರುವ ಖಾಸಿಮ್​ ಬಂದರಿಗೆ ಹೊರಟಿತ್ತು.
ಇದರಲ್ಲಿ ಅನುಮಾನಾಸ್ಪದ ಅಟೋಕ್ಲೇವ್​ ಇರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಅದರ ಅನ್ವಯ ಹಡಗನ್ನು ತಡೆ ಹಿಡಿದು ಪರಿಶೀಲನೆ ನಡೆಸಿದಾಗ ಅದರಲ್ಲಿರುವ ಅಟೋಕ್ಲೇವ್​ ಸೈನ್ಯ ಮತ್ತು ನಾಗರಿಕ ಉದ್ದೇಶಗಳಿಗೆ ಬಳಸಬಹುದಾಗಿರುವಂಥದ್ದು ಎಂಬುದು ಗೊತ್ತಾಗಿದೆ.
ಡಿಆರ್​ಡಿಒದ ಎರಡನೇ ತಂಡ ಕೂಡ ಮತ್ತೊಮ್ಮೆ ಸೂಕ್ಷ್ಮವಾಗಿ ಹಡಗು ಹಾಗೂ ಅಟೋಕ್ಲೇವ್​ ಯಂತ್ರವನ್ನು ಪರಿಶೀಲನೆ ನಡೆಸಲಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 13 =
Remember me
