ನವದೆಹಲಿ:ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಮತ್ತು ನಿರ್ಮಿಸಿದ ಹಲವು ಶಸ್ತ್ರಗಳ ಪರೀಕ್ಷೆಗೆ ಭಾರತ ಸಿದ್ಧತೆ ನಡೆಸಿದೆ. ಇದರಲ್ಲಿ ಏರ್​ ಟು ಏರ್​ ಮಿಸೈಲ್​, ವಿಕಿರಣ ನಿರೋಧಕ ಪಣಿಯಿಂದ ಹಿಡಿದು ಸ್ಮಾರ್ಟ್​ ಆ್ಯಂಟಿ ಏರ್​ಫೀಲ್ಡ್​ ಶಸ್ತ್ರಗಳು ಮತ್ತು ದೀರ್ ದೂರದ ಗ್ಲೈಡ್​​ ಬಾಂಬ್​ಗಳು ಒಳಗೊಂಡಿವೆ.
ಅಸ್ತ್ರ-1 (100 ಕಿ.ಮೀ. ರೇಂಜ್​) ಮತ್ತು ಅಸ್ತ್ರ-2 (160 ಕಿ.ಮೀ. ರೇಂಜ್​), ಬಿಯಾಂಡ್​ ವಿಷುವಲ್​ ರೇಂಜ್​ ಏರ್​ ಟು ಏರ್​ ಮಿಸೈಲ್​(ಬಿವಿಆರ್​ಎಎಎಂ), 150 ಕಿ.ಮೀ. ಗುರಿ ತಲುಪಬಲ್ಲ ನ್ಯೂ ಜನರೇಷನ್​ ಆ್ಯಂಟಿರೇಡಿಯೇಷನ್​ ಮಿಸೈಲ್​ (ಎನ್​ಜಿಎಆರ್​ಎಂ) ರುದ್ರಂ&1 ಗಳ ಪರೀೆ ಇದೇ ತಿಂಗಳು ನಡೆಯಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಮೊದಲ ಲೈವ್​ ಲಾಂಚ್​:ಅಸ್ತ್ರ-2 ಪಣಿಯ ಮೊದಲ ಲೈವ್​ ಲಾಂಚ್​ ಸುಖೋಯ್​ -30 ಎಂಕೆಐ ಫೈಟರ್​ ಜೆಟ್​ನಿಂದ ನಡೆಯಲಿದೆ. ಇದಕ್ಕೂ ಮೊದಲು ಅದರ ಸಾಗಣೆ ಮತ್ತು ಪ್ರಯೋಗಗಳನ್ನು ಸುಮ್ಮನೆ ಬೀಳಿಸುವ ಮೂಲಕ ಮಾಡಲಾಗುತ್ತದೆ. ಇದೇ ತಿಂಗಳಲ್ಲಿ ಈ ಪಣಿಯ ಮೊದಲ ಲೈವ್​ ಲಾಂಚ್​ ನಡೆಯುವ ಸಾಧ್ಯತೆ ಇದೆ.
ಉತ್ಪಾದನೆಯಲ್ಲಿ ಪ್ರಗತಿಅಸ್ತ್ರ -1ರ ಉತ್ಪಾದನೆ ಈಗಾಗಲೇ ಭಾರತ್​ ಡೈನಾಮಿಕ್ಸ್​ನಲ್ಲಿ ಶುರುವಾಗಿದೆ. ಈ ಪಣಿಯ ಪರೀೆಗಳೆಲ್ಲವೂ ಮುಕ್ತಾಯವಾಗಿದ್ದು, ರಷ್ಯಾದ ಎಜಿಎಟಿ ಜೆಟ್​ನಿಂದಲೇ ಮಾಡಲಾಗಿದೆ. 250 ಅಸ್ತ್ರ -1 ಪಣಿಯ ಉತ್ಪಾದನೆಗೆ ಆರಂಭಿಕ ಆರ್ಡರ್​ ಅನ್ನು ಸೇನೆ ಭಾರತ್​ ಡೈನಾಮಿಕ್ಸ್​ಗೆ ಕೊಟ್ಟಿದೆ. ಈ ಪಣಿಯನ್ನು ತೇಜಸ್​, ಮಿಗ್​& 29ಕ್ಕೆ ಅಳವಡಿಸುವ ಕೆಲಸವೂ ಪ್ರಗತಿಯಲ್ಲಿದೆ.
ಗ್ಲೈಡ್​​ ಬಾಂಬ್​ ಎಂದರೆ..ಗ್ಲೈಡ್​ ಬಾಂಬ್​ ಎಂಬುದು ಸ್ಮಾರ್ಟ್​ ಆ್ಯಂಟಿ ಏರ್​ಫೀಲ್ಡ್​ ವೆಪನ್ಸ್​ನ ಭಾಗವಾಗಿದೆ. ಇವುಗಳನ್ನು ಶತ್ರುಗಳ ರನ್​ವೇ, ಬಂಕರ್​, ಏರ್​ಕ್ರಾಫ್ಟ್​ ಹ್ಯಾಂಗರ್ಸ್​, ರೇಡಾರ್​ ಮತ್ತು ಇತರೆ ರಕ್ಷಣಾ ಸ್ಥಾವರಗಳನ್ನು ನಾಶ ಮಾಡಲು ಬಳಸಲಾಗುತ್ತದೆ. 100 ಕಿ.ಮೀ. ಗುರಿಯನ್ನು ನಿರ್ದೇಶಿತ ವ್ಯವಸ್ಥೆಯಲ್ಲಿ ಈ ಬಾಂಬ್​ ತಲುಪಿ ನಾಶಪಡಿಸುತ್ತದೆ. ಇವು ಸಾಮಾನ್ಯವಾಗಿ 125 ಕಿಲೋ ತೂಕ ಹೊಂದಿದ್ದು, ಉಪಗ್ರಹ ನ್ಯಾವಿಗೇಷನ್​ ಅಥವಾ ಎಲೆಕ್ಟ್ರೊ-ಆಪ್ಟಿಕಲ್​ ಇಮೇಜಿಂಗ್​ ಇನ್​್ರಾ ರೆಡ್​ ಸೀಕರ್​ ಎಂಬ ಎರಡು ಕಾನ್ಫಿಗರೇಷನ್​ ಆಧಾರಿತವಾಗಿದೆ. ಸುಖೋಯ್​ ಅಥವಾ ಜಾಗ್ವಾರ್​ಗಳಲ್ಲಿ ಇದನ್ನು ಅಳವಡಿಸಲಾಗುತ್ತದೆ. ಸುಖೋಯ್​ನಲ್ಲಿ ಇಂತಹ 32 ಬಾಂಬ್​ ಸಾಗಿಸಬಹುದು. ಇದಲ್ಲದೆ, 80 ಕಿ.ಮೀ. ರೇಂಜ್​ನ 1000 ಕಿಲೋ ತೂಕದ ಭಾರಿ ಕ್ಯಾಲಿಬ್ರೆ ಗ್ಲೈಡ್​ ಬಾಂಬ್​ ಅನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಯೋಗಕ್ಕೆ ಸಿದ್ಧತೆಈ ವರ್ಷದ ಕೊನೆಯೊಳಗೆ 350 ಕಿ.ಮೀ. ರೇಂಜ್​ ಇರುವ ಅಸ್ತ್ರ -3ರ ಮೊದಲ ಟೆಸ್ಟ್​ ನಡೆಯಲಿದೆ. ಈ ಪಣಿಯು ಸಾಲಿಡ್​ ಫ್ಯುಯೆಲ್​ ಆಧಾರಿತ ಡಕ್ಟೆಡ್​ ರಾಮ್​ಜೆಟ್​ ಪ್ರೊಪಲ್ಶನ್​ ಮೂಲಕ ಚಾಲಿತವಾದುದು. ಇದು ಪಣಿ ದೀರ್ ದೂರ ತಲುಪುವುದಕ್ಕೆ ನೆರವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × one =
Remember me
