ಮುಂಬೈ:ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎನ್ನುವ ಕುತೂಹಲಕ್ಕಿನ್ನೂ ತೆರೆ ಬಿದ್ದಿಲ್ಲ. ರಾಹುಲ್​ ಗಾಂಧಿ ಅಥವಾ ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಹಾಗಿರುವಾಗಲೇ ಶಿವಸೇನೆಯು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧೀಗೆ ಹೊಗಳಿಕೆಯ ಸರಮಾಲೆಯನ್ನೇ ತೊಡಿಸಿದ್ದು, ಅವರೇ ಅಧ್ಯಕ್ಷರಾಗಬೇಕೆಂಬ ಇಂಗಿತ ತೋಡಿಕೊಂಡಿದೆ.
ಇದನ್ನೂ ಓದಿ:ಟ್ಯೂಷನ್​ ಕ್ಲಾಸ್​ಗೆ ಹೊರಟಿದ್ದ ಬಾಲಕಿಯ ಮೇಲೆ ಗ್ಯಾಂಗ್​ ರೇಪ್​! ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ಬಾಲಕಿ
ಶಿವಸೇನೆಯ ಸಮನಾ ಪತ್ರಿಕೆಯ ಸಂಪಾದಕೀಯ ಅಂಕಣವನ್ನು ರಾಹುಲ್​ ಗಾಂಧಿ ಹೊಗಳಿಕೆಗೇ ಮೀಸಲಿಡಲಾಗಿದೆ. “ಬಿಜೆಪಿಯಲ್ಲಿ ಮೋದಿ ಹೇಗೋ, ಕಾಂಗ್ರೆಸ್​ನಲ್ಲಿ ರಾಹುಲ್​ ಗಾಂಧಿ ಹಾಗೇ. ಅವರು ಕೇಂದ್ರ ಸರ್ಕಾರದ ವಿರುದ್ಧದ ನಿಜವಾದ ಹೋರಾಟಗಾರ. ಸರ್ವಾಧಿಕಾರಿಗಳು ತಮ್ಮ ವಿರುದ್ಧ ಒಬ್ಬ ವ್ಯಕ್ತಿ ಹೋರಾಟಡಿದರೂ ಭಯ ಪಡುತ್ತಾರೆ. ಅದರಲ್ಲೂ ಹೋರಾಡುತ್ತಿರುವ ವ್ಯಕ್ತಿ ಪ್ರಾಮಾಣಿಕನಾಗಿದ್ದರೆ ಭಯ ನೂರು ಪಟ್ಟಾಗುತ್ತದೆ. ಅಂತದ್ದೇ ಒಬ್ಬ ಹೋರಾಟಗಾರ ರಾಹುಲ್​ ಗಾಂಧಿ. ದೆಹಲಿಯಲ್ಲಿರುವ ನಾಯಕರಿಗೆ ರಾಹುಲ್​ ಗಾಂಧಿ ಕಂಡರೆ ಹೆಚ್ಚು ಭಯವಿದೆ” ಎಂದು ಸಂಪಾದಕೀಯ ಅಂಕಣದಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಜೆಡಿಎಸ್​ ತೊರೆಯಲು ಸಾಕಷ್ಟು ಆಫರ್​ ಬಂದಿತ್ತು… ಎನ್ನುತ್ತಲೇ ದೇವೇಗೌಡರಿಗೆ ಮಾಜಿ ಶಾಸಕ ಕೊಟ್ಟ ಎಚ್ಚರಿಕೆ ಏನು?
ಕಾಂಗ್ರೆಸ್​ಗೆ ರಾಹುಲ್​ ಗಾಂಧಿ ಬಿಟ್ಟರೆ ಬೇರೊಬ್ಬ ಪರ್ಯಾಯ ವ್ಯಕ್ತಿ ಇಲ್ಲವೇ ಇಲ್ಲ. ಅವರನ್ನು ಅಪಹಾಸ್ಯ ಮಾಡಲಾಗುತ್ತದೆ. ಆದರೆ ಸರ್ಕಾರದ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ತಿರುಗಿ ಬೀಳುವುದು ಅವರು ಮಾತ್ರ. ಪಕ್ಷಕ್ಕೆ ಅಧ್ಯಕ್ಷ ಸ್ಥಾನಕ್ಕೆ ಅವರು ಏರಿದರೆ ಒಳಿತಾಗಲಿದೆ ಎಂದು ಶಿವಸೇನೆ ಹೇಳಿದೆ. (ಏಜೆನ್ಸೀಸ್​)
ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
