ಅಹಮದಾಬಾದ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್​ ಅವರು ಫೆ.24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ಫೆ.24ರಂದು ಗುಜರಾತ್​​ನ ಅಹಮದಾಬಾದ್​ಗೆ ಆಗಮಿಸುವ ಟ್ರಂಪ್​ಗಾಗಿ ‘ನಮಸ್ತೆ ಟ್ರಂಪ್​’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಟ್ರಂಪ್​ ಭೇಟಿಗಾಗಿ ಅಹಮದಾಬಾದ್​ನಲ್ಲಿ ಭರ್ಜರಿ ಸಿದ್ಧತೆಗಳೂ ನಡೆಯುತ್ತಿವೆ.ಈ ಮಧ್ಯೆ ಬಿಜೆಪಿಯ ಮಾಜಿ ಮಿತ್ರಪಕ್ಷ ಶಿವಸೇನೆ ಟ್ರಂಪ್​ ಭೇಟಿಯ ಬಗ್ಗೆ ವ್ಯಂಗ್ಯವಾಡಿದೆ. ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಟ್ರಂಪ್​ ಭೇಟಿಯನ್ನು ಕಟುವಾಗಿ ವಿಮರ್ಶಿಸಿದ್ದು ಇದೊಂದು ಗುಲಾಮಿ ಮನಸ್ಥಿತಿ ಎಂದು ಹೇಳಿದೆ.
ಭಾರತಕ್ಕೆ ಟ್ರಂಪ್​ ಬರುತ್ತಿರುವುದಕ್ಕೆ ಏನೋ ಚಕ್ರವರ್ತಿಯೇ ಬರುತ್ತಿದ್ದಾನೆ ಎನ್ನುವ ರೀತಿಯಲ್ಲಿ ಸಿದ್ಧತೆ ಮಾಡಲಾಗುತ್ತಿದೆ. ಇದು ಭಾರತೀಯರ ಗುಲಾಮ ಮನಸ್ಥಿತಿಗೆ ಹಿಡಿದ ಪ್ರತಿಬಿಂಬದಂತೆ ಭಾಸವಾಗುತ್ತಿದೆ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶ ಬ್ರಿಟಿಷರ ಕೈವಶದಲ್ಲಿತ್ತು. ಆಗ ಬಿಟ್ರಿಷ್ ರಾಜನೋ, ರಾಣಿಯೋ ನಮ್ಮ ದೇಶಕ್ಕೆ ಬರುವ ಸಂದರ್ಭದಲ್ಲಿ ಹೀಗೆ ತಯಾರಿ ಮಾಡಲಾಗುತ್ತಿತ್ತು. ಈಗ ಟ್ರಂಪ್​ ಭೇಟಿಯೂ ಹಾಗೇ ಆಗಿದೆ. ಅದಕ್ಕಾಗಿ ಭರ್ಜರಿ ಹಣ ಖರ್ಚಾಗುತ್ತಿದೆ ಎಂದು ಹೇಳಿದೆ.
ಟ್ರಂಪ್​ ಭೇಟಿಯ ವೇಳೆ ಕೊಳೆಗೇರಿಗಳಿಗೆ ಅಡ್ಡಲಾಗಿ ಏಳು ಅಡಿ ಎತ್ತರದ ಗೋಡೆಗಳನ್ನು ಕಟ್ಟಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಆಕ್ಷೇಪ ವ್ಯಕ್ತವಾಗಿದೆ. ಟ್ರಂಪ್​ಗೆ ಕೊಳೆಗೇರಿಗಳು ಕಾಣಬಾರದು ಎಂದು ಗೋಡೆ ಕಟ್ಟುತ್ತಿದ್ದಾರೆಂದು ಹಲವರು ವ್ಯಂಗ್ಯವಾಡಿದ್ದಾರೆ. ಆದರೆ ಬಿಜೆಪಿ ಕೇಂದ್ರ ಸರ್ಕಾರ, ಇದು ಕೊಳೆಗೇರಿಗಳು ಕಾಣಬಾರದು ಎಂದು ಕಟ್ಟುತ್ತಿರುವ ಗೋಡೆಯಲ್ಲ. ಟ್ರಂಪ್​ ರೋಡ್ ಶೋ ವೇಳೆ ಯಾವುದೇ ಸ್ಲಮ್​ಗಳಿಗೆ ಯಾವುದೇ ಹಾನಿಯಾಗಬಾರದು ಎಂದು ಹೀಗೆ ಮಾಡಲಾಗುತ್ತಿದೆ ಎಂದು ಹೇಳಿದೆ.
ಈಗ ಶಿವಸೇನೆ ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ತೆಗಳಿ, ಇಂದಿರಾ ಗಾಂಧಿಯವರನ್ನು ಹೊಗಳಿ ಸಂಪಾದಕೀಯ ಬರೆದಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಗರೀಬಿ ಹಟಾವೋ (ಬಡತನವನ್ನು ನಿರ್ಮೂಲನೆ ಮಾಡಿ) ಎಂದು ಹೇಳಿದ್ದರು. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಗರೀಬಿ ಚುಪಾವೋ (ಬಡತನವನ್ನು ಅಡಗಿಸಿ) ಎನ್ನುತ್ತಿದ್ದಾರೆ ಎಂದು ಟೀಕಿಸಿದೆ. ಟ್ರಂಪ್​ ಅವರು ಅಹಮಾದಾಬಾದ್​ನಲ್ಲಿ ಮೂರು ತಾಸು ಮಾತ್ರ ಇರುತ್ತಾರೆ. ಆದರೆ ಅಷ್ಟಕ್ಕಾಗಿ ಕಟ್ಟಲಾಗುತ್ತಿರುವ ಗೋಡೆಗೆ 100 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಇದಕ್ಕೇನಾದರೂ ಗುಜರಾತ್​ ಸರ್ಕಾರ ತನ್ನ ಯೋಜನೆ ಮೂಲಕ ಹಣ ನೀಡಿದೆಯಾ ಅಥವಾ ತಾನು ಬರುತ್ತಿದ್ದೇನೆ, ದೇಶಾದ್ಯಂತ ಗೋಡೆ ಕಟ್ಟಿ ಎಂದು ಟ್ರಂಪ್​ ಅವರು ಸಾಲ ಕೊಡುತ್ತಿದ್ದಾರಾ ? ನಮಗೆಲ್ಲ ಅಚ್ಚರಿಯಾಗುತ್ತಿದೆ ಎಂದು ಶಿವಸೇನೆ ಹೇಳಿದೆ.
ಕಳೆದ ವರ್ಷ ಅಮೆರಿಕದಲ್ಲಿ ಹೌಡಿ ಮೋದಿ (ಹೇಗಿದ್ದೀರಿ ಮೋದಿ) ಎಂಬ ಕಾರ್ಯಕ್ರಮ ನಡೆಯಿತು. ಈಗ ಭಾರತದಲ್ಲಿ ನಮಸ್ತೆ ಟ್ರಂಪ್​ ನಡೆಯುತ್ತಿದೆ. ಒಟ್ಟಿನಲ್ಲಿ ಇದು ಭಾರತದ ಪ್ರಧಾನಿ ಮತ್ತು ಅಮೆರಿಕ ಅಧ್ಯಕ್ಷರ ನಡುವಿನ ರಾಜಕೀಯ ಆಟ ಎಂದು ಬರೆದಿದೆ. (ಪಿಟಿಐ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − five =
Remember me
