ತೆಲಂಗಾಣ:ಕೆಲವರು ಹಣಕ್ಕಾಗಿ ಹಪಹಪಿಸುತ್ತಾರೆ. ಹಣಕ್ಕಾಗಿ ಯಾರ ಪ್ರಾಣವನ್ನೂ ತೆಗೆಯಲು ಹಿಂಜರಿಯುವುದಿಲ್ಲ.. ಒಂದು ಕ್ಷಣವೂ ಯೋಚಿಸುವುದಿಲ್ಲ. ಹೀಗೆ ಇಲ್ಲೊಬ್ಬ ಯುವಕ ತಾನು ಕೇಳಿದ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಮೇದಕ್ ಜಿಲ್ಲೆಯ ಹವೇಲಿ ಘನಾಪುರ ಮಂಡಲದ ತೊಗುಟ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:ಮದ್ಯ ಪ್ರಿಯರೇ.. ಶವರ್, ಸಿಂಕ್, ವಾಷಿಂಗ್​​ಮೆಷಿನ್ ನೀರಿನಿಂದ ತಯಾರಾಗುತ್ತೆ ಬಿಯರ್
ತೊಗುಟ ಗ್ರಾಮದ ಪುಸ್ತೆ ನರಸಮ್ಮ (40) ಮೃತ ಮಹಿಳೆ. ಭಾನು ಪ್ರಸಾದ್ ಕೊಲೆ ಮಾಡಿದ ಪಾಪಿ ಮಗ. ಮದ್ಯಪಾನಕ್ಕಾಗಿ ಅವನ ಸ್ವಂತ ತಾಯಿಯನ್ನೇ ಕೊಂದು ಜೈಲು ಪಾಲಾಗಿದ್ದಾನೆ.

ಇದನ್ನೂ ಓದಿ:ಈರುಳ್ಳಿಯನ್ನು ಹೀಗೆ ಬಳಸಿದರೆ ದಟ್ಟವಾದ ಕೂದಲು ನಿಮ್ಮದಾಗುತ್ತದೆ…
ನರಸಮ್ಮ ಎಂದಿನಂತೆ ನಿನ್ನೇ ಕೂಡಾ ಕೂಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದಿದ್ದಾಳೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಗ ಭಾನು ಪ್ರಸಾದ್ ತನ್ನ ತಾಯಿಗೆ ಕುಡಿಯಲು ಹಣ ಬೇಕು ಎಂದು ಕೇಳಿದ್ದಾನೆ. ಆದರೆ ತಾಯಿ ನರಸಮ್ಮ ಹಣವಿಲ್ಲವೆಂದು ಹೇಳಿದ್ದಾಳೆ. ಹಣ ನೀಡುತ್ತಿಲ್ಲ ಎಂದು ತಾಯಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಸಿಟ್ಟಿನಲ್ಲಿ ತಾಯಿಯನ್ನು ಕೊಲೆ ಮಾಡಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ನರಸಮ್ಮ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಭಾನು ಪ್ರಸಾದ್ ನನ್ನು ಬಂಧಿಸಿದ್ದಾರೆ. ಘಾಣಪುರ ಪೊಲೀಸರು ನರಸಮ್ಮ ಅವರ ಮೃತದೇಹವನ್ನು ಮೇದಕ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ:ಕಚೇರಿಗೆ ಟೀ ಬರಲಿಲ್ಲ.. ಬೀದಿಬದಿ ಚಹಾ ಮಾರ್ತಿದ್ದ ವ್ಯಾಪಾರಿಗೆ ನೋಟಿಸ್​ ಕೊಟ್ಟ ಅಧಿಕಾರಿಗಳು
ಭಾನು ಪ್ರಸಾದ್ ಮನೆಯಲ್ಲಿ ಜಗಳ ಮಾಡಿ ತಾಯಿಗೆ ತೊಂದರೆ ಕೊಡುತ್ತಿದ್ದ. ಇತ್ತೀಚೆಗಷ್ಟೇ ಕುಡಿತದ ಚಟಕ್ಕೆ ಬಿದ್ದಿದ್ದು, ಕೊಲೆ ಮಾಡಿದ ಈ ಪಾಪಿಗೆ ಶಿಕ್ಷೆಯಾಗುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈರುಳ್ಳಿಯನ್ನು ಹೀಗೆ ಬಳಸಿದರೆ ದಟ್ಟವಾದ ಕೂದಲು ನಿಮ್ಮದಾಗುತ್ತದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
