ತಿರುವನಂತಪುರಂ:ಕುಡಿದು ಪೋಷಕರನ್ನು ಹತ್ಯೆಗೈದ ಹಲವು ಘಟನೆಗಳ ಕುರಿತಾಗಿ ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವಕ ಎಣ್ಣೆ ತರಲು ತಾಯಿ ಬಳಿ ಹಣ ಕೇಳಿದ್ದಾನೆ. ಕುಡಿತ ಸಾಕು ಎಂದು ಮಗನಿಗೆ ಬುದ್ದಿವಾದ ಹೇಳಿದ ತಾಯಿ, ಮಗನಿಂದಲೇ ತನ್ನ ಪ್ರಾಣವನ್ನು ಕಳೆದುಕೊಂಡಿರುವ ಘಟನೆ ಕೇರಳದ ಅಲಪ್ಪುಯದಲ್ಲಿ ನಡೆದಿದೆ.
ವೈಶಾಲಿ ಧನು ಮೃತ ಮಹಿಳೆ. ಮಿಥುನ್​​ ಮೋಹನ್​​ ಆರೋಪಿ. ಈತನ ಕುಡಿಯುವ ಚಟಕ್ಕೆ ತನ್ನ ತಾಯಿಯ ಪ್ರಾಣವನ್ನು ಬಲಿ ಪಡೆದುಕೊಂಡಿದ್ದಾನೆ.
ಇದನ್ನೂ ಓದಿ:ಸೈಬರ್‌ ಕಳ್ಳರ ಕನ್ನ; 1 ಲಕ್ಷ ರೂ. ಕಳೆದುಕೊಂಡ ನಟಿ ನಗ್ಮಾ!
ಮಿಥುನ್ ಮೋಹನ್ ತನ್ನ ತಂದೆ ಜೊತೆ ಎಣ್ಣೆ ಪಾರ್ಟಿ ಮಾಡಿದ್ದಾನೆ. ತಂದೆ-ಮಗ ಇಬ್ಬರು ಪೈಪೋಟಿಗೆ ಬಿದ್ದು ಎಣ್ಣೆ ಕುಡಿದಿದ್ದಾರೆ. ಕೆಲ ಹೊತ್ತಲ್ಲೇ ಎಣ್ಣೆ ಖಾಲಿ. ಇಬ್ಬರಿಗೂ ಇನ್ನೂ ಒಂದು ಬಾಟಲ್ ಎಣ್ಣೆ ಬೇಕಾಗಿದೆ. ತಂದೆ ಹಾಗೂ ಮಗ ಇಬ್ಬರಲ್ಲೂ ಹಣವಿಲ್ಲ. ಹೀಗಾಗಿ ತಾಯಿ ರಾಮಾ ಮೋಹನ್ ಬಳಿ ಹಣ ಕೇಳಿದ್ದಾನೆ. ಆದರೆ ಮಗನಿಗೆ ಬುದ್ದಿವಾದ ಹೇಳಲು ಆರಂಭಿಸಿದ ತಾಯಿ ಕತ್ತು ಹಿಸುಕಿ ಮಗ ಮಿಥುನ್ ಮೋಹನ್ ಹತ್ಯೆ ಮಾಡಿದ್ದಾನೆ. ಇತ್ತ ತಂದೆ ಕುಡಿದ ಅಮಲಿನಲ್ಲೇ ಅಲ್ಲೆ ಮಲಗಿದ್ದಾನೆ. ಇತ್ತ ಕಿರಿಯ ಮಗ ಮನೆಯಿಂದ ಹೊರಹೋಗಿದ್ದಾನೆ. ಮರುದಿನ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:VIDEO | ಬಸ್‌ ಸೀಟಿಗಾಗಿ ಜುಟ್ಟು ಹಿಡಿದು ಹೊಡೆದಾಡಿದ ಮಹಿಳೆಯರು!
ಪೊಲೀಸರ ಸ್ಥಳಕ್ಕೆ ಆಗಮಿಸಿದಾಗ ಮಹಿಳೆ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ. ಇತ್ತ ನಶೆ ಇಳಿಯದ ಪತಿ ಏನೂ ಅರಿವಿಲ್ಲದೆ ಮಲಗಿದ್ದಾರೆ. ಮಗನ ಸುಳಿವಿಲ್ಲ. ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಬಳಿಕ ಅಪ್ಪ ಹಾಗೂ ಮಗ ಇಬ್ಬರನ್ನೂ ಬಂಧಿಸಿದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಗೀಸರ್‌ನಿಂದ ಗ್ಯಾಸ್ ಸೋರಿಕೆ; ಸ್ನಾನಕ್ಕೆಂದು ತೆರಳಿದ ದಂಪತಿ ಉಸಿರುಗಟ್ಟಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
