ನವದೆಹಲಿ:ಬಡ ಮಕ್ಕಳು ಹಾಗೂ ಹಿರಿಯ ನಾಗರಿಕರಿಗಾಗಿ ರಿಲಯನ್ಸ್ ಫೌಂಡೇಷನ್​ ‘ದಿ ಸೌಂಡ್ ಆಫ್ ಮ್ಯೂಸಿಕ್’ ವಿಶೇಷ ಪ್ರದರ್ಶನ ಹಮ್ಮಿಕೊಂಡಿತ್ತು. ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಈ ಪ್ರದರ್ಶನವನ್ನು ಒಟ್ಟು 3,400 ಮಕ್ಕಳು-ಹಿರಿಯ ನಾಗರಿಕರಿಗೆ ಸಮರ್ಪಿಸಲಾಯಿತು.
ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಹಲವಾರು ವರ್ಷಗಳಿಂದ ಮಕ್ಕಳಿಗಾಗಿ ಹಮ್ಮಿಕೊಂಡು ಬರುತ್ತಿದ್ದ ಕಾರ್ಯಕ್ರಮಗಳ ಅಂಗವಾಗಿ ಈ ಪ್ರದರ್ಶನ ಆಯೋಜಿಸಲಾಗಿತ್ತು.
ರಿಲಯನ್ಸ್ ಫೌಂಡೇಷನ್ ಬೆಂಬಲಿತ 18 ಎನ್​ಜಿಒಗಳ ಮಕ್ಕಳು ಮತ್ತು ಹಿರಿಯ ನಾಗರಿಕರಿಗಾಗಿ ಆಯೋಜಿಸಲಾದ ಈ ವಿಶೇಷ ಪ್ರದರ್ಶನಗಳು ಹಾಜರಿದ್ದವರ ಮೊಗದಲ್ಲಿ ನಗು ಮೂಡಿಸಿದವು.
ರಿಲಯನ್ಸ್ ಫೌಂಡೇಷನ್​ನ ಎಜುಕೇಷನ್ ಆ್ಯಂಡ್​ ಸ್ಪೋರ್ಟ್ಸ್ ಫಾರ್ ಆಲ್ (ಇಎಸ್ಎ) ಕಾರ್ಯಕ್ರಮವು 2010ರಿಂದ ನಡೆಯುತ್ತಿದ್ದು, ಮಕ್ಕಳ ಸಮಗ್ರ ಮತ್ತು ಅಂತರ್ಗತ ಅಭಿವೃದ್ಧಿಗೆ, ಅವರ ಆಕಾಂಕ್ಷೆಗಳನ್ನು ಈಡೇರಿಕೆಗೆ ಮತ್ತು ಅವರ ಸಾಧಿಸುವ ಸಾಮರ್ಥ್ಯವನ್ನು ರೂಪಿಸಿಕೊಳ್ಳುವಲ್ಲಿ ನಿರಂತರ ನೆರವು ಒದಗಿಸಿದೆ.

ಅಯೋಧ್ಯಾ ರಾಮಮಂದಿರ ಸಂಕ್ರಾಂತಿ ಬಳಿಕ ಲೋಕಾರ್ಪಣೆ, ಅಲ್ಲಿ ಯಾವುದೇ ಸೇವೆಗಳಿರಲ್ಲ: ಪೇಜಾವರಶ್ರೀ

ಮೊನ್ನೆ ಜಗ್ಗೇಶ್​ಗೆ ಕನ್ನಡ ಪಾಠ ಮಾಡಿದ್ದ ‘ಮೇಷ್ಟ್ರು’, ಇಂದು ಸಚಿವರು-ಸರ್ಕಾರಿ ಅಧಿಕಾರಿಗಳಿಗೂ ಕಿವಿಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
