ಫ್ರಾನ್ಸ್​:ಕೊರೊನಾ ವೈರಸ್​ ಭೀತಿ ಇಡೀ ಜಗತ್ತಿಗೇ ಆವರಿಸಿದೆ. ಈ ಕಾರಣದಿಂದ ಮಾಸ್ಕ್​ ಎಂಬುದು ಬಹುದೊಡ್ಡ ಅಗತ್ಯವಾಗಿ ಪರಿಣಮಿಸಿದೆ.
ಸದ್ಯದ ಮಟ್ಟಿಗೆ ಪ್ರತಿಯೊಬ್ಬರ ಬೇಡಿಕೆಯಾದ ಮಾಸ್ಕ್​ ಕೂಡ ಕಳವಾಗುತ್ತಿದೆ. ಈಗ ದಕ್ಷಿಣ ಫ್ರೆಂಚ್​​ನ ಮಾರ್ಸಿಲ್ಲೆ ನಗರದ ಆಸ್ಪತ್ರೆಯೊಂದರಿಂದ ಬರೋಬ್ಬರಿ 2000 ಸರ್ಜಿಕಲ್​ ಮಾಸ್ಕ್​ಗಳು ಕಳುವಾಗಿದ್ದಾಗಿ ವರದಿಯಾಗಿದೆ. ಇವೆಲ್ಲ ಶಸ್ತ್ರಚಿಕಿತ್ಸೆ ಸಮಯದಲ್ಲಿ ಬಳಸುವ ಮಾಸ್ಕ್​ಗಳಾಗಿದ್ದು, ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಮತ್ತು ಅಲ್ಲಿನ ವೈದ್ಯರ ಬಳಕೆಗಾಗಿ ಇಡಲಾಗಿತ್ತು.
ಸರ್ಜಿಕಲ್​ ಮಾಸ್ಕ್​ಗಳು ಕಳವಾದ ಬೆನ್ನಲ್ಲೇ ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಫೇಸ್​ ಮಾಸ್ಕ್​ಗಳ ಉತ್ಪಾದನೆ ಹಾಗೂ ಸಂಗ್ರಹ ಹೆಚ್ಚಾಗಬೇಕು ಎಂದು ಆರೋಗ್ಯ ಇಲಾಖೆ, ಸಂಸ್ಥೆಗಳಿಗೆ ತಿಳಿಸಿದ್ದಾರೆ.ಮಾಸ್ಕ್​ಗಳ ಕೊರತೆ ಆದರೆ ಹೀಗೆ ಕಳವಾಗುವ ಪ್ರಮಾಣವೂ ಹೆಚ್ಚಾಗುತ್ತದೆ. ಇದರಿಂದಾಗಿ ನಿಜಕ್ಕೂ ಅಗತ್ಯ ಇರುವವರಿಗೆ ಪೂರೈಕೆ ಆಗುವುದಿಲ್ಲ ಎಂದಿದ್ದಾರೆ.
ಫ್ರಾನ್ಸ್​ನಲ್ಲಿ ಕೊರೊನಾ ವೈರಸ್​ನಿಂದ ನಾಲ್ವರು ಮೃತಪಟ್ಟಿದ್ದು, ಒಟ್ಟು 204 ಜನರಲ್ಲಿ ಸೋಂಕು ದೃಢಪಟ್ಟಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
