ಕೋಲ್ಕತ: ಪಶ್ವಿಮ ಬಂಗಾಳ ಹಾಗೂ ಇಲ್ಲಿರುವ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬೇಕಾದ ಎಲ್ಲ ಪ್ರಯತ್ನಗಳನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅಸಡ್ಡೆ ತೋರಿಸುತ್ತಿದೆ. ಇದರಿಂದಾಗಿ ಇಲ್ಲಿನ ಜನರು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭಾನುವಾರ ಕಿಡಿಕಾರಿದರು.
ಎರಡು ದಿನಗಳ ಬಂಗಾಳ ಪ್ರವಾಸದಲ್ಲಿರುವ ಪ್ರಧಾನಿ, ಸ್ವಾಮಿ ವಿವೇಕಾನಂದರ ಜಯಂತಿ ಹಿನ್ನೆಲೆ ಹೌರಾ ಜಿಲ್ಲೆಯಲ್ಲಿರುವ ರಾಮಕೃಷ್ಣ ಮಿಷನ್​ನ ಕೇಂದ್ರ ಕಚೇರಿ ಬೇಲೂರು ಮಠಕ್ಕೆ ಭೇಟಿ ನೀಡಿದ್ದರು. ಸ್ವಾಮಿ ವಿವೇಕಾನಂದರ ಪುತ್ಥಳಿಗೆ ನಮಿಸಿ ಬಳಿಕ ಮಠದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮೋದಿ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶದ ಯುವಜನತೆಯನ್ನು ವಿಪಕ್ಷಗಳು ದಿಕ್ಕುತಪ್ಪಿಸುತ್ತಿವೆ. ಸಿಎಎ ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ. ಬದಲಿಗೆ ನೆರೆಯ ಮೂರೂ ದೇಶಗಳಲ್ಲಿ ಸಂಕಷ್ಟದಲ್ಲಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತದೆ ಎಂದರು. ಅಲ್ಲದೇ ಆ ದೇಶಗಳಲ್ಲಿನ ನಮ್ಮ ಸಹೋದರ, ಸಹೋದರಿಯರಿಗೆ ಧರ್ಮದ ಕಾರಣ ಜೀವನ ನರಕವಾಗಿದೆ. ಅವರಿಗೆ ಪೌರತ್ವ ನೀಡುವ ಮೂಲಕ ನಾವು ಅವರೊಂದಿಗೆ ನಿಲ್ಲಬೇಕು ಎಂದು ನೀವು ಭಾವಿಸುವುದಿಲ್ಲವೇ? ಇದು ವಿಶೇಷವಾಗಿ ಬಂಗಾಳದ ಯುವಜನತೆಗೆ ಬಿಟ್ಟ ವಿಷಯ ಎಂದರು.
ಟ್ರಸ್ಟ್​ಗೆ ಮರುನಾಮಕರಣ
ಪ್ರಧಾನಿ ಮೋದಿ ಪಶ್ಚಿಮ ಬಂಗಾಳದಲ್ಲಿ ನೂರಾರು ಕೋಟಿ ರೂಪಾಯಿ ಮೊತ್ತದ ಹಲವು ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಜತೆಗೆ ಕೋಲ್ಕತ ಬಂದರಿನ ವಿಸ್ತರಣೆ ಹಾಗೂ ಆಧುನೀಕರಣ ಕಾಮಗಾರಿಗೆ, ಬುಡಕಟ್ಟು ಮಹಿಳೆಯರ ಶಿಕ್ಷಣ, ಕೌಶಲ್ಯ ಅಭಿವೃದ್ಧಿಗಾಗಿ ಹಾಸ್ಟೆಲ್ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರದ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದರು. ಈ ವೇಳೆ ಕೋಲ್ಕತ ಬಂದರು ಟ್ರಸ್ಟ್ ಹೆಸರನ್ನು ಡಾ.ಶ್ಯಾಮಪ್ರಸಾದ್ ಮುಖರ್ಜಿ ಟ್ರಸ್ಟ್ ಎಂದು ಮರುನಾಮಕರಣ ಮಾಡಿದರು. ನಂತರ ಮಾತನಾಡಿದ ಮೋದಿ, ಕೋಲ್ಕತ ಬಂದರು ಪೂರ್ವ ಭಾಗದ ಭಾರತದ ಕೈಗಾರಿಕಾ ಕೇಂದ್ರಗಳೊಂದಿಗಿನ ಸಂಪರ್ಕವನ್ನು ಸುಧಾರಿಸಿದೆ. ಭೂತಾನ್, ಮ್ಯಾನ್ಮಾರ್ ಮತ್ತು ನೇಪಾಳದ ವ್ಯಾಪಾರವನ್ನು ಸುಲಭಗೊಳಿಸಿದೆ. ಕೇಂದ್ರ ಸರ್ಕಾರ ಜಲಸಂಪರ್ಕವನ್ನು ಸುಧಾರಿಸಲು ಸಾಗರಮಾಲಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ಮೋದಿ ಹೇಳಿದರು.
ನಮಗೆ ಹಾಗೂ ನಿಮಗೆ ಭಾರತದ ಮೇಲೆ ಎಷ್ಟು ಅಧಿಕಾರವಿದೆಯೋ ಅಷ್ಟೇ ಅಧಿಕಾರ ನೆರೆಯ ಮೂರೂ ದೇಶಗಳಿಂದ ಬಂದು ಇಲ್ಲಿನ ಪೌರತ್ವ ಪಡೆದ ಅಲ್ಲಿನ ಅಲ್ಪಸಂಖ್ಯಾತ ಸಮುದಾಯದವರಿಗೂ ಇದೆ.
| ಅಮಿತ್ ಷಾ ಕೇಂದ್ರ ಗೃಹ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − seventeen =
Remember me
