ಮುಂಬೈ:ಟೆಲಿಕಾಂ ಸೇವಾ ಪೂರೈಕೆದಾರ ವೊಡಾಫೋನ್ ಐಡಿಯಾ ಲಿಮಿಟೆಡ್ (Vodafone Idea Ltd.) ಮಂಗಳವಾರ ಗಮನಸೆಳೆದಿವೆ. ಆರಂಭಿಕ ವಹಿವಾಟಿನಲ್ಲಿ ಕಂಪನಿಯ ಷೇರುಗಳ ಬೆಲೆ 2% ರಷ್ಟು ಕಡಿಮೆಯಾಗಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರುಗಳ ಬೆಲೆ ರೂ 13.30 ತಲುಪಿತು.
ವೋಡಾಫೋನ್​ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 125.66 ಹಾಗೂ ಕನಿಷ್ಠ ಬೆಲೆ ರೂ. 2.40 ಇದೆ.
ಯುಬಿಎಸ್ ಬ್ರೋಕರೇಜ್ ಸಂಸ್ಥೆಯು ಇತ್ತೀಚಿನ ಸುಧಾರಣೆಯ ನಂತರ ವೊಡಾಫೋನ್ ಐಡಿಯಾದ ರೇಟಿಂಗ್ ಬದಲಾಯಿಸಿದೆ. ಈ ಮೊದಲು ಬ್ರೋಕರೇಜ್​ ಸಂಸ್ಥೆಯು ಈ ಷೇರಿಗೆ ‘ಮಾರಾಟ’ ರೇಟಿಂಗ್ ನೀಡಿತ್ತು. ಆದರೆ, ಈಗ ಈ ರೇಟಿಂಗ್​ ಅನ್ನು ‘ತಟಸ್ಥ’ ಎಂದು ಬದಲಾಯಿಸಿದೆ. ಅಲ್ಲದೆ, ಗುರಿ ಬೆಲೆಯನ್ನು ಹಿಂದಿನ ರೂ.11.5 ರಿಂದ ರೂ. 13.10 ಕ್ಕೆ ಹೆಚ್ಚಿಸಿದೆ.
ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 18.42 ಇದೆ. ಇದಕ್ಕೆ ಹೋಲಿಸಿದರೆ, ಈ ಸ್ಟಾಕ್ ಪ್ರಸ್ತುತ 28% ಕೆಳಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
ಈ ಕಂಪನಿಯು ರೂ. 45,000 ಕೋಟಿ ನಿಧಿಯನ್ನು ಸಂಗ್ರಹಿಸಲಿದೆ. ಫೆಬ್ರವರಿ 27 ರಂದು ವೊಡಾಫೋನ್ ಐಡಿಯಾ ಮಂಡಳಿಯು ರೂ. 45,000 ಕೋಟಿ ನಿಧಿಯನ್ನು ಸಂಗ್ರಹಿಸಲು ಅನುಮೋದಿಸಿದೆ. ಇದರಲ್ಲಿ ರೂ. 20,000 ಕೋಟಿಯನ್ನು ಈಕ್ವಿಟಿ ಅಥವಾ ಈಕ್ವಿಟಿ-ಲಿಂಕ್ಡ್ ಉಪಕರಣಗಳ ಮೂಲಕ ಸಂಗ್ರಹಿಸಲಾಗುವುದು. ಸಾಲ ನಿಧಿಗಾಗಿ ತನ್ನ ಸಾಲದಾತರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಕಂಪನಿ ಹೇಳಿದೆ, ಇದನ್ನು ಈಕ್ವಿಟಿ ಫಂಡಿಂಗ್ ಅನುಸರಿಸುತ್ತದೆ.
ಕಂಪನಿಯು ಪ್ರಮುಖ ನಿಧಿಯನ್ನು ಪಡೆದುಕೊಳ್ಳಲು ಹತ್ತಿರದಲ್ಲಿದೆ ಎಂದು ಯುಬಿಎಸ್ ಹೇಳಿದೆ.
2025 ರ ಹಣಕಾಸು ವರ್ಷದಲ್ಲಿ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯದಲ್ಲಿ ವೊಡಾಫೋನ್ ಐಡಿಯಾ 13% ರಿಂದ 15% ಬೆಳವಣಿಗೆಯನ್ನು ವರದಿ ಮಾಡುತ್ತದೆ ಎಂದು ಯುಬಿಎಸ್​ ನಿರೀಕ್ಷಿಸುತ್ತದೆ. ಅಲ್ಲದೆ, 6% ರಿಂದ 8% ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (CAGR) ವೃದ್ಧಿ ಕಾಣಲಿದೆ ಎಂದು ಅಂದಾಜಿಸಿದೆ.
ವೊಡಾಫೋನ್ ಐಡಿಯಾ ಷೇರುಗಳ ಬೆಲೆ ಕಳೆದ ಒಂದು ತಿಂಗಳಲ್ಲಿ 22% ಮತ್ತು ಆರು ತಿಂಗಳಲ್ಲಿ 21% ಕುಸಿದಿದೆ. ಆದರೆ, ಕಳೆದ ಒಂದು ವರ್ಷದಲ್ಲಿ ಈ ಷೇರು ಬೆಲೆ ಶೇ. 120ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಇದರ ಬೆಲೆ 6 ರೂ.ನಿಂದ ಈಗಿನ ಬೆಲೆಗೆ ಏರಿಕೆಯಾಗಿದೆ. 2015ರಲ್ಲಿ ಈ ಷೇರಿನ ಬೆಲೆ 118 ರೂ. ಇತ್ತು. ಇದರಂತೆ ಇಲ್ಲಿಯವರೆಗೆ ಈ ಷೇರು ಬೆಲೆ ಶೇ. 89ರಷ್ಟು ಕುಸಿದಿದೆ.

5 ದಿನಗಳ ಬದಲು 3 ದಿನ ಮಾತ್ರ ವಹಿವಾಟು: ಷೇರುಪೇಟೆಯಲ್ಲಿ ಮುಂದಿನ ವಾರ ಹೀಗೇಕೆ ಗೊತ್ತೆ?

ರಕ್ಷಣಾ ಕಂಪನಿಯಿಂದ ಹೂಡಿಕೆದಾರರಿಗೆ ಡಬಲ್ ಬಹುಮಾನ: ಷೇರಿನ ಟಾರ್ಗೆಟ್​ ಪ್ರೈಸ್​ ಹೆಚ್ಚಿಸಿದ ಬ್ರೋಕರೇಜ್​

ಮಗಳ ಗಾಯಕ್ಕೆ ಭಾರತೀಯ ವೈದ್ಯರಿಂದಲೇ ಚಿಕಿತ್ಸೆ: ಈ ನೈಜ ಘಟನೆ ಆನಂದ ಮಹೀಂದ್ರಾಗೆ ದೊಡ್ಡ ಪಾಠ ಕಲಿಸಿದ್ದು ಹೇಗೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 3 =
Remember me
