ಮುಂಬೈ:ಮಂಗಳವಾರದಂದು ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್​ (Havells India Ltd.) ಕಂಪನಿಯ ಷೇರುಗಳ ಬೆಲೆ 52 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿತು. ಷೇರುಗಳ ಬೆಲೆ 1660 ರೂಪಾಯಿಗೆ ಏರಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಅಲ್ಲದೆ, ಬ್ರೋಕರೇಜ್​ ಕಂಪನಿಯು ಈ ಷೇರುಗಳ ಖರೀದಿಗೆ ರೇಟಿಂಗ್ ನೀಡಿದೆ.
ವೈರ್ ಮತ್ತು ಕೇಬಲ್ಸ್ ತಯಾರಿಸುವ ಕಂಪನಿ ಹ್ಯಾವೆಲ್ಸ್ ಇಂಡಿಯಾ ಷೇರುಗಳು ಉತ್ತಮ ಏರಿಕೆ ಕಂಡಿವೆ. ಮಂಗಳವಾರ ಹ್ಯಾವೆಲ್ಸ್ ಇಂಡಿಯಾ ಷೇರುಗಳು ಶೇ. 3ಕ್ಕಿಂತ ಅಧಿಕ ಏರಿಕೆ ಕಂಡು 1469.30 ರೂಪಾಯಿ ತಲುಪಿದವು. ದಿನದ ವಹಿವಾಟಿನಲ್ಲಿ, ಈ ಕಂಪನಿಯ ಷೇರುಗಳ ಬೆಲೆ 1481.30 ರೂಪಾಯಿಗೆ ತಲುಪಿತ್ತು. ಈ ಮೂಲಕ 52 ವಾರಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿತು. ಮಾರುಕಟ್ಟೆ ಹ್ಯಾವೆಲ್ಸ್ ಇಂಡಿಯಾ ಷೇರುಗಳು ಮತ್ತಷ್ಟು ಏರಿಕೆಯಾಗಬಹುದು ಎನ್ನುತ್ತಾರೆ ತಜ್ಞರು.
ಈ ಕಂಪನಿಯ ಷೇರುಗಳು ದೀರ್ಘಾವಧಿಯ ಹೂಡಿಕೆದಾರರಿಗೆ 100,000 ಪ್ರತಿಶತಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿವೆ. ವಿದೇಶಿ ಬ್ರೋಕರೇಜ್ ಸಂಸ್ಥೆಯಾದ ಗೋಲ್ಡ್‌ಮನ್ ಸ್ಯಾಚ್ಸ್ ಕೂಡ ಹ್ಯಾವೆಲ್ಸ್ ಇಂಡಿಯಾದ ಷೇರುಗಳನ್ನು ಖರೀದಿಸಲು ಶಿಫಾರಸು ಮಾಡಿದೆ. ಬ್ರೋಕರೇಜ್ ಸಂಸ್ಥೆಯು ಈ ಕಂಪನಿಯ ಷೇರುಗಳಿಗೆ ಖರೀದಿ ರೇಟಿಂಗ್ ನೀಡಿದೆ,
ಆದರೆ, ಈ ಹಿಂದೆ ಕಂಪನಿಯ ಷೇರುಗಳ ಮೇಲೆ ತಟಸ್ಥ ರೇಟಿಂಗ್ ಅನ್ನು ಈ ಸಂಸ್ಥೆಯು ನೀಡಿತ್ತು. ಗೋಲ್ಡ್‌ಮನ್ ಸ್ಯಾಚ್ಸ್ ಸಂಸ್ಥೆಯು ಹ್ಯಾವೆಲ್ಸ್ ಇಂಡಿಯಾ ಷೇರುಗಳ ಗುರಿ ಬೆಲೆಯನ್ನು (ಟಾರ್ಗೆಟ್​ ಪ್ರೈಸ್​) ರೂ 1660 ಕ್ಕೆ ಹೆಚ್ಚಿಸಿದೆ, ಈ ಮೊದಲು ಟಾರ್ಗೆಟ್​ ಪ್ರೈಸ್​ 1540 ರೂ ಇತ್ತು. ಇದು ಹ್ಯಾವೆಲ್ಸ್ ಷೇರುಗಳಿಗೆ ಗರಿಷ್ಠ ಗುರಿ ಬೆಲೆಯಾಗಿದೆ. ಹ್ಯಾವೆಲ್ಸ್ ಇಂಡಿಯಾವನ್ನು ಟ್ರ್ಯಾಕಿಂಗ್ ಮಾಡುತ್ತಿರುವ 44 ವಿಶ್ಲೇಷಕರ ಪೈಕಿ 28 ಪರಿಣತರು, ಈ ಕಂಪನಿಯ ಷೇರುಗಳ ಮೇಲೆ ಖರೀದಿ ರೇಟಿಂಗ್ ನೀಡಿದ್ದಾರೆ. ಇದೇ ಸಮಯದಲ್ಲಿ, 12 ವಿಶ್ಲೇಷಕರು ಕಂಪನಿಯ ಷೇರುಗಳಿಗೆ ಹೋಲ್ಡ್ ರೇಟಿಂಗ್ ನೀಡಿದ್ದಾರೆ. 4 ವಿಶ್ಲೇಷಕರು ಕಂಪನಿಯ ಷೇರುಗಳಿಗೆ ಮಾರಾಟ ರೇಟಿಂಗ್ ನೀಡಿದ್ದಾರೆ.
ಹ್ಯಾವೆಲ್ಸ್ ಇಂಡಿಯಾದ ಷೇರುಗಳು ದೀರ್ಘಾವಧಿಯ ದೃಷ್ಟಿಕೋನದಿಂದ ಹೂಡಿಕೆದಾರರಿಗೆ 100,000% ಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿವೆ. 28 ಫೆಬ್ರವರಿ 2003ರಲ್ಲಿ ಕಂಪನಿಯ ಷೇರುಗಳ ಬೆಲೆ 1.46 ರೂಪಾಯಿ ಇತ್ತು. ಈಗ ಈ ಷೇರುಗಳ ಬೆಲೆ 1469.30 ರೂ. ತಲುಪಿದೆ.
ಕಳೆದ 10 ವರ್ಷಗಳಲ್ಲಿ, ಈ ಷೇರುಗಳ ಬೆಲೆ ಶೇಕಡಾ 850 ಕ್ಕಿಂತ ಹೆಚ್ಚು ಜಿಗಿದಿದೆ. ಹ್ಯಾವೆಲ್ಸ್ ಇಂಡಿಯಾದ ಷೇರುಗಳ ಬೆಲೆ 21 ಫೆಬ್ರವರಿ 2014 ರಂದು ರೂ 153.91 ರಷ್ಟಿತ್ತು,

ಬೆಲೆ ಕುಸಿದಿರುವ ಅದಾನಿ ಗ್ರೂಪ್​ನ ಈ 3 ಷೇರು ಖರೀದಿಸಲು ಶಿಫಾರಸು

ಮಂಗಳವಾರ ಒಂದೇ ದಿನದಲ್ಲಿ 20% ಏರಿಕೆ ಕಂಡ ಷೇರುಗಳು: ಬುಧವಾರವೂ ಈ ಸ್ಟಾಕ್​ಗಳು ಲಾಭ ಕೊಡುವ ನಿರೀಕ್ಷೆ

156ರಿಂದ 14 ರೂಪಾಯಿಗೆ ಕುಸಿದಿರುವ ಷೇರಿಗೆ ಈಗ ಬೇಡಿಕೆ: ಒಂದೇ ತಿಂಗಳಲ್ಲಿ 109% ಏರಿಕೆ; ಮಂಗಳವಾರ ಮತ್ತೆ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಗಿದ್ದೇಕೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + 13 =
Remember me
