ಮುಂಬೈ:ಈ ಡ್ರೋನ್ ತಯಾರಿಕೆ ಕಂಪನಿಯ ಷೇರುಗಳು 1600 ರೂಪಾಯಿ ದಾಟುತ್ತವೆ. ನೀವು ಈಗ ಬಾಜಿ ಕಟ್ಟಿದರೆ ಮಲ್ಟಿಬ್ಯಾಗರ್ ರಿಟರ್ನ್ಸ್ ಸಿಗುತ್ತದೆ. ಅಂದರೆ, ಷೇರು ಬೆಲೆ ದುಪ್ಪಟ್ಟಾಗಲಿದೆ ಎಂದು ಬ್ರೋಕರೇಜ್​ ಸಂಸ್ಥೆಯೊಂದು ಭವಿಷ್ಯ ನುಡಿದಿದೆ.
ಐಡಿಯಾಫೋರ್ಜ್ ಟೆಕ್ನಾಲಜಿ ಲಿಮಿಟೆಡ್ (Ideaforge Technology Ltd.) ಡ್ರೋನ್ ತಯಾರಿಕೆ ಕಂಪನಿಯಾಗಿದೆ. ಈ ಷೇರುಗಳ ಬೆಲೆ ಮಂಗಳವಾರದ ವಹಿವಾಟಿನಲ್ಲಿ 1.36% ರಷ್ಟು ಏರಿಕೆಯಾಗಿ, 741.25 ರೂ. ತಲುಪಿವೆ.
ಕಳೆದ ವರ್ಷ ಐಪಿಒ ಮೂಲಕ 672 ರೂಪಾಯಿ ಬೆಲೆಯಲ್ಲಿ ಈ ಕಂಪನಿಯ ಷೇರುಗಳನ್ನು ನೀಡಲಾಗಿತ್ತು. ಅಂದರೆ ಪ್ರಸ್ತುತ ಈ ಷೇರು ಐಪಿಒ ಬೆಲೆಗಿಂತ 9% ರಷ್ಟು ಹೆಚ್ಚು ಇದೆ.
ಕಳೆದ ವಾರ (ಫೆಬ್ರವರಿ 14) ಈ ಸ್ಟಾಕ್ ತನ್ನ ದಾಖಲೆಯ ಕನಿಷ್ಠ ಬೆಲೆ 689 ರೂಪಾಯಿ ತಲುಪಿತ್ತು. ಈ ವರ್ಷದ ಜನವರಿಯಲ್ಲಿ 14 ಪ್ರತಿಶತಕ್ಕಿಂತ ಹೆಚ್ಚು ಕುಸಿದ ನಂತರ, ಫೆಬ್ರವರಿಯಲ್ಲಿ ಇದುವರೆಗೆ 4 ಪ್ರತಿಶತದಷ್ಟು ಕುಸಿದಿದೆ.ಏತನ್ಮಧ್ಯೆ, ಜುಲೈ 2023 ರಲ್ಲಿ ಪಟ್ಟಿಯಾದ ನಂತರ ಈ ಸ್ಟಾಕ್ ಆಗಸ್ಟ್ 2023 ರಲ್ಲಿ ಶೇಕಡಾ 13, ಸೆಪ್ಟೆಂಬರ್‌ನಲ್ಲಿ ಶೇಕಡಾ 9, ಅಕ್ಟೋಬರ್‌ನಲ್ಲಿ ಶೇಕಡಾ 11 ಮತ್ತು ನವೆಂಬರ್‌ನಲ್ಲಿ ಶೇಕಡಾ 2 ಕ್ಕಿಂತ ಹೆಚ್ಚು ಕುಸಿದಿದೆ. ಆದರೂ ಇದು ಕಳೆದ ಡಿಸೆಂಬರ್‌ನಲ್ಲಿ 6 ಪ್ರತಿಶತದಷ್ಟು ಏರಿಕೆ ಕಂಡಿದೆ.
ನಿರಾಶಾದಾಯಕ ಪ್ರದರ್ಶನದ ಹೊರತಾಗಿಯೂ, ಬ್ರೋಕರೇಜ್ ಸಂಸ್ಥೆಯಾದ ಏಷ್ಯನ್ ಮಾರ್ಕೆಟ್ ಸೆಕ್ಯುರಿಟೀಸ್ (AMSEC) ಈ ಸ್ಟಾಕ್ ಡಿಸೆಂಬರ್ 2026 ರವರೆಗೆ ಮಲ್ಟಿಬ್ಯಾಗರ್ ಆದಾಯವನ್ನು ನೀಡುತ್ತದೆ ಎಂದು ಅಂದಾಜಿಸಿದೆ.ಈ ಷೇರುಗಳ ಮೇಲೆ ‘ಖರೀದಿ’ಗೆ ಕರೆ ನೀಡಿದೆ. 1,607 ರೂಪಾಯಿಯ ಗುರಿ ಬೆಲೆಯನ್ನು ಈ ಸ್ಟಾಕ್‌ಗೆ ನೀಡಿದೆ. ಇದರ ಪ್ರಸ್ತುತ ಬೆಲೆಗಿಂತ 100 ಪ್ರತಿಶತ ಹೆಚ್ಚಳ ಇದಾಗಿದೆ.
ಡಿಸೆಂಬರ್ ತ್ರೈಮಾಸಿಕದಲ್ಲಿ ಈ ಸಂಸ್ಥೆಯು 14.8 ಕೋಟಿ ರೂ. ಲಾಭವನ್ನು ವರದಿ ಮಾಡಿದೆ. ಇದು ಹಿಂದಿನ ತ್ರೈಮಾಸಿಕದ ರೂ. 89 ಲಕ್ಷಕ್ಕೆ ಹೋಲಿಸಿದರೆ, ಶೇ. 1,562ರಷ್ಟು ಹೆಚ್ಚಾಗಿದೆ.ಹಿಂದಿನ ವರ್ಷದ ತ್ರೈಮಾಸಿಕದಲ್ಲಿ 7.8 ಕೋಟಿ ರೂ. ನಷ್ಟ ಅನುಭವಿಸಿತ್ತು.

ಬ್ಯಾಕ್-ಟು-ಬ್ಯಾಕ್ ಆರ್ಡರ್‌ ಪಡೆದುಕೊಂಡ ಐಟಿ ಕಂಪನಿ: ಒಂದೇ ದಿನದಲ್ಲಿ ಷೇರು ಬೆಲೆ 14.45% ಜಿಗಿತ

ಮೊದಲ ಬಾರಿಗೆ ಸ್ಟಾಕ್ ವಿಭಜಿಸುತ್ತಿದೆ ಸರ್ಕಾರಿ ಬ್ಯಾಂಕ್​: ಅಧಿಕ ಲಾಭಾಂಶ ನೀಡಿದ ಷೇರಿಗೆ ಈಗ ಡಿಮ್ಯಾಂಡು

ಕೇವಲ 3 ವರ್ಷಗಳಲ್ಲಿ 1 ಲಕ್ಷವಾಯ್ತು 2.83 ಕೋಟಿ: 7000% ಭರ್ಜರಿ ಲಾಭ ನೀಡಿದ ಷೇರುಗಳಿಗೆ ಈಗಲೂ ಬೇಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 4 =
Remember me
