ದಕ್ಷಿಣ ಆಫ್ರಿಕಾ:ಮೂರು ಕಾಲಿನ ಆನೆಯೊಂದು ದಕ್ಷಿಣ ಆಫ್ರಿಕಾ ಅರಣ್ಯದಲ್ಲಿ ಪತ್ತೆಯಾಗಿದೆ. ಈ ಆನೆಯ ಕಥೆಯೊಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.
ಈ ಮೂರು ಕಾಲಿನ ಆನೆಯ ಸ್ಪೂರ್ತಿದಾಯಕ ಕಥೆಯನ್ನು ಕಂಟೆಂಟ್ ಕ್ರಿಯೇಟರ್ ಡೈಲನ್ ಪೊನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಸತಾರಾದಲ್ಲಿ ಈ ಮೂರು ಕಾಲಿನ ಆನೆಯನ್ನು ನೋಡಿದ ಅನುಭವವನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ:VIDEO| ಮದುವೆ ಶಾಸ್ತ್ರ ನಡೆಯುವಾಗಲೇ ನಿದ್ರೆಗೆ ಜಾರಿದ ವಧು; ವರ ಮಾಡಿದ್ದೇನು ನೋಡಿ..
ಆನೆಗಳ ಗುಂಪು ನೀರಿನಲ್ಲಿ ಆಟವಾಡುತ್ತಿದ್ದವು. ಈ ಆನೆ ಒಂದು ಕಾಲು ಕಳೆದುಕೊಂಡಿದ್ದು, ಮೊದಲಿಗೆ ತಿಳಿದಿರಲ್ಲಿಲ್ಲ. ತನ್ನ ಆನೆಗಳ ಹಿಂಡಿನೊಂದಿಗೆ  ಸುಂದರ ಜೀವನ ನಡೆಸುತ್ತಿತ್ತು ಈ ಮುದ್ದಾದ ಆನೆ. ದುರದೃಷ್ಟವಶಾತ್ ಆನೆಗಳಿಗೆ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಯಿಂದಾಗಿ ಈ ಆನೆ ತನ್ನ ಅಂಗವನ್ನು ಕಳೆದುಕೊಂಡಿರಬಹುದು ಅಥವಾ ನರಭಕ್ಷಕ ದಾಳಿಗೆ ಬಲಿಯಾಗಿರಬಹುದು ಎಂಬುದು ತಿಳಿದಿಲ್ಲ. ಆದರೆ ಈ ಆನೆಗೆ ಮೂರು ಕಾಲುಗಳು ಮಾತ್ರ ಇದೆ. ಆನೆ ತನ್ನ ಹಿಂಡುಗಳೊಂದಿಗೆ ಓಡಾಡಿಕೊಂಡು ತನ್ನದೇ ರೀತಿಯಲ್ಲಿ ಜೀವನವನ್ನುನಡೆಸುತ್ತಿದೆ. ಇದು ಹೃದಯಸ್ಪರ್ಶಿಯಾಗಿತ್ತು ಎಂದು ತಮ್ಮ ಅನುಭವವವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:PUCಯಲ್ಲಿ ಕಡಿಮೆ ಮಾರ್ಕ್ಸ್ ತೆಗೆದ ವಧು; ವಿವಾಹ ಕ್ಯಾನ್ಸಲ್ ಮಾಡಿದ ವರ
ಇಂತಹ ಯಾವುದೇ ಇತರ ಗಾಯಗೊಂಡ ಪ್ರಾಣಿಗಳನ್ನು ರಸ್ತೆಯ ಸಮೀಪದಲ್ಲಿ ನೋಡಿದರೆ, ನಿಮ್ಮಿಂದ ಆದ ಸಹಾಯ ಮಾಡಿ. ಮಾನವೀಯತೆಯಿಂದ ಅವುಗಳನ್ನು ನೋಡಿ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್​ ನೋಡಿದ ನೆಟ್ಟಿಗರು ಕಾಮೆಂಟ್ ಮಾಡುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇತಿಹಾಸದಲ್ಲಿ ನಂಜೇಗೌಡ, ಉರಿಗೌಡ‌ ಇದ್ದಾರಾ?; ಡಿಕೆಶಿ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + four =
Remember me
