ಪಂಜಾಬ್:ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಬೀದಿ ಬದಿಯಲ್ಲಿ ಆಹಾರದ ಅಂಗಡಿ ನಡೆಸುವವರನ್ನು ನಾವು ನೋಡಿಯೇ ಇರುತ್ತೇವೆ. ಪಂಜಾಬಿನ ಅಮೃತಸರದಲ್ಲೂ ಅದೇ ರೀತಿಯ ಪುಟ್ಟ ಅಂಗಡಿಯಿದೆ, ಆದರೆ ಅದನ್ನು ನೋಡಿಕೊಳ್ಳುತ್ತಿರುವವರು ಮಾತ್ರ ಚಿಕ್ಕ ಸಹೋದರರು. ಈ ಮಕ್ಕಳ ವಿಡಿಯೋ ಸದ್ಯ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇಶಾನ್​ಜೀತ್ ಸಿಂಗ್ (16) ಮತ್ತು ಶಾನ್​ಜೀತ್ ಸಿಂಗ್(8) ಕಳೆದ ಸುಮಾರು 10 ದಿನಗಳಿಂದ ಗಾಡಿಯಲ್ಲಿ ರುಚಿಕರವಾದ ಖಾದ್ಯಗಳನ್ನು ಮಾರುತ್ತಿದ್ದಾರೆ. ಅಂಗಡಿಗೆ ಗುರು ಕೃಪಾ ಫುಡ್ ಸ್ಟಾಲ್ ಎಂದು ಹೆಸರಿಡಲಾಗಿದೆ. ಆರ್ಥಿಕ ಸಂಕಷ್ಟ ಇವರನ್ನು ಈ ಪರಿಸ್ಥಿತಿಗೆ ದೂಡಿದೆ. ತಮ್ಮ ಕುಟುಂಬಕ್ಕೆ ಹೊರೆಯಾಗದೇ, ಸಹಾಯ ಮಾಡಲು ಈ ಪೋರರು ಕೆಲಸಕ್ಕಿಳಿದಿದ್ದಾರೆ.
Let's Start The Day With Story Of Two Brothers From Sri Amritsar Sahib, 16Yrs & 8yr Old Started Food Cart Since 10 Days For Survival.
They After Their School Start Their Cart From 4pm To 11pm
If In Or Around Sri Amritsar Sahib, Do Visit And Support ThemAddress In The Video🙏pic.twitter.com/kAgW6cW4tn
— ਹਤਿੰਦਰ ਸਿੰਘ (@Rajput131313)September 12, 2023

ಇವರ ಗಾಡಿ ಅಂಗಡಿಯಲ್ಲಿ ಪಿಜಾ ಕುಲ್ಚಾ, ಕಡಿ ಚಾವಲ್, ಮೋಮೋಸ್ ಸೇರಿದಂತೆ ಹಲವು ಪದಾರ್ಥಗಳು ದೊರೆಯುತ್ತವೆಯಂತೆ. ಶಾಲೆ ಮುಗಿಸಿ ಸಂಜೆ 4ರಿಂದ 11 ಗಂಟೆ ವರೆಗೆ ಕಷ್ಟಪಟ್ಟು ದುಡಿಯುತ್ತಾರೆ. ನಿತ್ಯ ಬಂದು ಎಲ್ಲವನ್ನೂ ಸ್ವತಃ ಜೋಡಿಸಿಟ್ಟು, ಗ್ರಾಹಕರಿಗೆ ಉಣಬಡಿಸುತ್ತಿದ್ದಾರೆ.
ಹಟಿಂಡರ್​ ಸಿಂಗ್ ಎನ್ನುವವರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಟ್ವಿಟರ್​ನಲ್ಲಿ 20 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಕಂಡು ವಿಡಿಯೋ ವೈರಲ್ ಆಗುತ್ತಿದೆ. ಹಲವು ನೆಟ್ಟಿಗರು ಸಹೋದರರ ಪರಿಸ್ಥಿತಿಗೆ ಮರುಗಿದ್ದಾರೆ. ಇನ್ನು ಕೆಲವರು ಆರ್ಥಿಕ ಸಹಾಯ ನೀಡುವುದಾಗಿ ಕಮೆಂಟ್ ಮಾಡುತ್ತಿದ್ದಾರೆ.
ಅಮೀರ್ ಪುತ್ರಿ ಐರಾಳ ಮದುವೆಗೆ ಭರ್ಜರಿ ತಯಾರಿ ಶುರು; ವಿಜೃಂಭಣೆಯಿಂದ ಈ ದಿನ ನಡೆಯಲಿದೆ ಮದುವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
