ಚೆನ್ನೈ:ಕೂಲಿ ಕಾರ್ಮಿಕನೊಬ್ಬ ಒಂದೇ ದಿನಕ್ಕೆ ದಿಢೀರ್​ ಲಕ್ಷಾಧಿಪತಿಯಾದ ಘಟನೆ ತಮಿಳುನಾಡಿನ ರಾಣಿಪೇಟೆ ಜಿಲ್ಲೆಯ ಅರಕ್ಕೋಣಂ ಬಳಿಯ ಕೈನೂರಿನಲ್ಲಿ ನಡೆದಿದೆ. ಒಂದು ಚಿನ್ನದ ಗಟ್ಟಿಯ ಜತೆಗೆ 1,10,000 ಸಾವಿರ ರೂ. ನಗದು ಕಾರ್ಮಿಕನಿಗೆ ಸಿಕ್ಕಿತ್ತು. ಆದರೆ, ಮರು ಕ್ಷಣವೇ ಕಾರ್ಮಿಕ ಆಘಾತವೂ ಕಾದಿತ್ತು.
ಮುರುಗನ-ಗೌರಿ ದಂಪತಿ ಅರಕ್ಕೋಣಂನಲ್ಲಿ ವಾಸವಿದ್ದಾರೆ. ಮುರುಗನ್​ ದಿನಗೂಲಿ ನೌಕರನಾಗಿದ್ದು, ಸಾವಿರಾರು ರೂಪಾಯಿಗೂ ಪರದಾಡುತ್ತಿದ್ದ ಈತ ಇದ್ದಕ್ಕಿದ್ದಂತೆ ಸಾವಿರಾರು ರೂಪಾಯಿಯನ್ನು ಧಾರಾಳವಾಗಿ ಖರ್ಚು ಮಾಡುವುದನ್ನು ಕಂಡು ಅಕ್ಕಪಕ್ಕದ ಜನರು ಅಚ್ಚರಿಗೊಂಡಿದ್ದರು. ಅಲ್ಲದೆ, ಅನುಮಾನವು ಹುಟ್ಟಿಕೊಂಡಿತ್ತು.
ಕೆಲ ಯುವಕರು ಚಾಕುವಿನಿಂದ ಮುರುಗನ್​ಗೆ ಬೆದರಿಕೆ ಹಾಕಿದಾಗ ಹೆದರಿದ ಆತ ಊರಿನ ಪಂಚಾಯಿತಿ ಕೌನ್ಸಿಲ್​ ಅಧ್ಯಕ್ಷರಿಗೆ ಮಾಹಿತಿ ನೀಡುತ್ತಾನೆ. ಬಳಿಕ ಪಂಚಾಯಿತಿ ಅಧ್ಯಕ್ಷ ಪೊಲೀಸರಿಗೆ ಮಾಹಿತಿ ಮುಟ್ಟಿಸುತ್ತಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಮುರುಗನ್​ ಬಳಿ ಚಿನ್ನದ ಬಿಸ್ಕೆಟ್​ ಮತ್ತು 1 ಲಕ್ಷಕ್ಕೂ ಅಧಿಕ ಹಣವಿದ್ದಿದ್ದು ತಿಳಿಯುತ್ತದೆ. ನೆಲ ಅಗೆಯುವಾಗ ಸಿಕ್ಕ ಹಣ ಮತ್ತು ಚಿನ್ನವನ್ನು ಪೊಲೀಸರಿಗೆ ಮುರುಗನ್​ ನೀಡುತ್ತಾನೆ.
ಅಂದಹಾಗೆ ಮುರುಗನ್​ ಮತ್ತು ಆತನ ಪತ್ನಿ ಒಳಚರಂಡಿ ಕಾಲುವೆ ಮಣ್ಣು ತೆಗೆಯುವ ಕೆಲಸ ಮಾಡುತ್ತಾರೆ. ಅವರು ಕೆಲಸ ಮಾಡುತ್ತಿದ್ದ ಅರಕ್ಕೋಣಂನ ಏರಿಯಾದಲ್ಲೇ ಜ್ಯುವೆಲ್ಲರಿ ಶಾಪ್​ ಕೂಡ ಇದೆ. ಒಮ್ಮೆ ಚಿನ್ನದ ಬಿಸ್ಕೆಟ್ ಪ್ಯಾಕೆಟ್ ಸಿಕ್ಕಿದ್ದು, ಅದರಲ್ಲಿದ್ದ ಒಂದು ಭಾಗವನ್ನು ಮಾರಾಟ ಮಾಡಿ ಹಣ ಗಳಿಸಿದ್ದಾಗಿ ಅವರು ಹೇಳಿದ್ದಾರೆ.
ಈ ವೇಳೆ ಚಿನ್ನದ ಗಟ್ಟಿಗಳು ನಾಪತ್ತೆಯಾಗಿರುವ ಬಗ್ಗೆ ಯಾರೂ ದೂರು ನೀಡದ ಕಾರಣ ಪೊಲೀಸರು ಮುರುಗನ್ ಹಾಗೂ ಆತನ ಪತ್ನಿಯನ್ನು ಬಿಟ್ಟು ಕಳುಹಿಸಿದ್ದಾರೆ. ವಶಕ್ಕೆ ಪಡೆದ ಚಿನ್ನಾಭರಣ ಹಾಗೂ ನಗದನ್ನು ಪೊಲೀಸರು ಸರ್ಕಾರಿ ಖಜಾನೆಗೆ ಹಸ್ತಾಂತರ ಮಾಡಿದ್ದಾರೆ.(ಏಜೆನ್ಸೀಸ್​)
ನನಗೆ ಅದ್ರ ಅವಶ್ಯಕತೆ ಇಲ್ಲ, ಎಲ್ಲವನ್ನು ಅನುಭವಿಸಿದ್ದೇನೆ..’ಓ ಮಲ್ಲಿಗೆ’ ಬ್ಯೂಟಿ ಚಾರುಲತಾ ಓಪನ್​ ಟಾಕ್​

ಉದ್ಯಮಿ ಜತೆ ಅಫೇರ್​; ಪತಿಗೆ ಡಿವೋರ್ಸ್​ ಕೊಡಲು ಮುಂದಾದ ನಮಿತಾ!? ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
