ಮುಂಬೈ:ವೀರ್ಯಾಣು ಅಥವಾ ಅಂಡಾಣು ದಾನಿಯು ಮಗುವಿನ ಮೇಲೆ ಕಾನೂನುಬದ್ಧ ಹಕ್ಕನ್ನು ಹೊಂದಿಲ್ಲ. ತಾನು ಆ ಮಕ್ಕಳ ತಂದೆ ಅಥವಾ ತಾಯಿ ಎಂದು ಹೇಳಿಕೊಳ್ಳುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದೆ. ಜತೆಗೆ 42 ವರ್ಷದ ಮಹಿಳೆಗೆ ತನ್ನ ಐದು ವರ್ಷದ ಅವಳಿ ಹೆಣ್ಣು ಮಕ್ಕಳನ್ನು ಭೇಟಿಯಾಗಲು ಅನುಮತಿ ನೀಡಿದೆ.
ಮಹಿಳೆಯು ಬಾಡಿಗೆ ತಾಯ್ತನದ ಮೂಲಕ ಅವಳಿ ಹೆಣ್ಣುಮಕ್ಕಳನ್ನು ಪಡೆದಿದ್ದಳು. ಆದರೆ ಈಗ ಆ ಮಕ್ಕಳು ತನ್ನ ಪತಿ ಮತ್ತು ತಂಗಿಯೊಂದಿಗೆ ವಾಸಿಸುತ್ತಿದ್ದಾರೆ. ತಂಗಿಯೇ ಅಂಡಾಣು ದಾನಿಯಾಗಿರುವ ಕಾರಣ ಆಕೆಗೆ ಮಕ್ಕಳ ಮೇಲೆ ಸಂಪೂರ್ಣ ಹಕ್ಕಿದೆ ಎಂದು ಪತಿ ಹೇಳಿದ್ದ. ಹೀಗಾಗಿ ತನ್ನನ್ನು ಆಕೆಯನ್ನು ಮಕ್ಕಳಿಂದ ದೂರ ಇಡಲಾಗಿದೆ. ಮಕ್ಕಳನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿ ಸಂತ್ರಸ್ತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಳು.
ತನ್ನ ಅತ್ತಿಗೆ ಅಂಡಾಣು ದಾನಿಯಾಗಿರುವುದರಿಂದ ಆಕೆಯನ್ನು ‘ಜೈವಿಕ ಪಾಲಕ’ ಎಂದು ಕರೆಯುವ ಕಾನೂನುಬದ್ಧ ಹಕ್ಕು ಇದೆ. ಪತ್ನಿಗೆ ಮಕ್ಕಳ ಮೇಲೆ ಯಾವುದೇ ಹಕ್ಕಿಲ್ಲ ಎಂದು ಪತಿ ಪ್ರತಿಪಾದಿಸಿದ್ದ. ಆದರೆ, ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರ ಏಕ ಸದಸ್ಯ ಪೀಠವು ಈ ವಾದವನ್ನು ನಿರಾಕರಿಸಿದೆ. ಸಹೋದರಿ ಅಂಡಾಣು ದಾನಿ ಮಾತ್ರ. ಇದು ಸ್ವಯಂಪ್ರೇರಿತ ಪ್ರಕ್ರಿಯೆ. ಹೆಚ್ಚೆಂದರೆ ಆಕೆ ಆನುವಂಶಿಕ ತಾಯಿಯಾಗಲು ಅರ್ಹತೆ ಪಡೆಯಬಹುದು. ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದು ಕೋರ್ಟ್ ಹೇಳಿದೆ.
ಕಾನೂನು ಏನು ಹೇಳುತ್ತದೆ?:ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ 2021ರಲ್ಲಿ ಜಾರಿಗೆ ಬಂದಿದೆ. ಆದರೆ ಈ ಪ್ರಕರಣ 2018ರಲ್ಲಿ ನಡೆದಿದೆ. ಆಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಕೋರ್ಟ್ ನೇಮಕ ಮಾಡಿಕೊಂಡಿದ್ದ ಅಮಿಕಸ್ ಕ್ಯೂರಿ ಅಭಿಪ್ರಾಯಪಟ್ಟರು. ದಾನಿ ಮತ್ತು ಬಾಡಿಗೆ ತಾಯಿಯು ಮಗುವಿನ ಪಾಲನೆ ಹಕ್ಕುಗಳನ್ನು ತ್ಯಜಿಸಬೇಕಾಗುತ್ತದೆ. ವೀರ್ಯಾಣು/ಅಂಡಾಣು ದಾನಿಯು ಮಗುವಿಗೆ ಸಂಬಂಧಿಸಿದಂತೆ ಯಾವುದೇ ಹಕ್ಕುಗಳು ಅಥವಾ ಕರ್ತವ್ಯಗಳನ್ನು ಹೊಂದಿರುವುದಿಲ್ಲ ಎಂದು ಅವರು ಕೋರ್ಟ್ ಗಮನಕ್ಕೆ ತಂದರು.
ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ಆಯ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 5 =
Remember me
