ಭೋಪಾಲ್​:ಮಧ್ಯ ಪ್ರದೇಶದ ಶಾಸಕ ಹಾಗೂ ಮಾಜಿ ಸಚಿವರೊಬ್ಬರು ಟೀ ಮಾರಾಟಗಾರನಿಂದ ಮುಜುಗರ ಅನುಭವಿಸಿದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿ ಶಾಸಕ ಕರಣ್​ ಸಿಂಗ್​ ವರ್ಮಾ ಅವರು ಸಿಹೋರ್​ ಜಿಲ್ಲೆಯ ಇಚವಾರ್​ ಪ್ರದೇಶದಲ್ಲಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿ, ಕಾರು ತಡೆದ ಟೀ ಮಾರಾಟಗಾರ 2018ರಿಂದ ಬಾಕಿ ಉಳಿಸಿಕೊಂಡಿದ್ದ ಟೀ ಕುಡಿದ ಹಣವನ್ನು ತಕ್ಷಣ ಪಾವತಿಸುವಂತೆ ಪಟ್ಟು ಹಿಡಿದನು.
ಚುನಾವಣೆ ಸಮೀಪಿಸುತ್ತಿದ್ದಂತೆ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದು, ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಶಾಸಕ ಕರಣ್ ಸಿಂಗ್ ವರ್ಮಾ ಕೂಡ ತಮ್ಮ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಈ ವೇಳೆ ಟೀ ವ್ಯಾಪಾರಿಯೊಬ್ಬರು ಶಾಸಕರನ್ನು ತಡೆದರು. ಬಾಕಿ ಮೊತ್ತವನ್ನು ಕೊಡುವಂತೆ ಒತ್ತಾಯಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2018ರ ವಿಧಾನಸಭಾ ಚುನಾವಣೆಯ ನಂತರ ಕರಣ್ ಸಿಂಗ್ ವರ್ಮಾ ಟೀ ಮಾರಾಟಗಾರನಿಗೆ ನೀಡಬೇಕಾದ ಹಣ ಇದುವರೆಗೂ ಪಾವತಿಯಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ. ಮಾಜಿ ಸಚಿವರೂ ಇಷ್ಟು ಸಾಲ ಮಾಡಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಅಂದಹಾಗೆ ಸೆಹೋರ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ತವರು ಜಿಲ್ಲೆಯ ಹೌದು ಎಂಬುದು ಗಮನಾರ್ಹ. ಮತ್ತೊಂದೆಡೆ, ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 11 ತಿಂಗಳುಗಳು ಮಾತ್ರ ಉಳಿದಿವೆ.(ಏಜೆನ್ಸೀಸ್​)
'चुनाव में कार्यकर्ताओं को चाय पिलाई थी, 30 हजार रुपये दे दो विधायक जी', काफिला रोक मांग लिया बकाया#MPNews#Sehore#SehoreNews#MadhyaPradesh@ChouhanShivraj@BJP4MP@INCMPhttps://t.co/W8xvLPsqLQpic.twitter.com/G85uiVX6ir
— Amar Ujala Madhya Pradesh (@AU_MPNews)November 19, 2022

ಮದುವೆಗೆ ಆಹ್ವಾನಿಸಿದ ಕೇರಳ ಜೋಡಿಯ ವೆಡ್ಡಿಂಗ್​ ಕಾರ್ಡ್ ಶೇರ್​ ಮಾಡಿ ಶುಭ ಕೋರಿದ ಇಂಡಿಯನ್​ ಆರ್ಮಿ!

ಬರೋಬ್ಬರಿ 140 ವರ್ಷದ ಬಳಿಕ ಅಪರೂಪದ ಪಕ್ಷಿಯ ಮರುಶೋಧನೆ! ವಿಜ್ಞಾನಿಗಳ ನಿರಂತರ ಪ್ರಯತ್ನದ ಫಲವಿದು

ಕೃಷಿ ಇಲಾಖೆ ಜತೆ ರೇಷ್ಮೆ ಇಲಾಖೆ ವಿಲೀನ ಇಲ್ಲ: ಸಚಿವ ನಾರಾಯಣ ಗೌಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 10 =
Remember me
