ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಕೆಲವೊಂದು ವಿಡಿಯೋಗಳು ತುಂಬಾ ಫನ್ನಿಯಾಗಿರುತ್ತವೆ ಮತ್ತು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ. ಕೆಲ ಡಾನ್ಸ್​ ವಿಡಿಯೋಗಳು ನೋಡುಗರಿ ಖುಷಿ ನೀಡುವುದರ ಜತೆ ಜಾಲತಾಣದಲ್ಲಿ ಬಹಳ ಚರ್ಚೆಯನ್ನು ಹುಟ್ಟುಹಾಕುತ್ತದೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.
ಶಿಕ್ಷಕಿಯೊಬ್ಬರು ಕ್ಲಾಸ್​ರೂಮ್​ ಒಳಗೆ ವಿದ್ಯಾರ್ಥಿಗಳ ಮುಂದೆಯೇ ಐಶ್ವರ್ಯಾ ರೈ ನಟನೆಯ ಬಾಲಿವುಡ್​ ಸಿನಿಮಾದ ಐಟಂ ಹಾಡಿಗೆ ಮಾದಕವಾಗಿ ಸೊಂಟ ಬಳುಕಿಸಿದ್ದಾರೆ. ಬಂಟಿ ಔರ್​ ಬಬ್ಲಿ ಸಿನಿಮಾದ ಕಜರಾರೆ ಹಾಡಿಗೆ ಹಾಟ್​ ಆಗಿ ಡಾನ್ಸ್​ ಮಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.
ವಿಡಿಯೋದಲ್ಲಿ ಏನಿದೆ?ಕ್ಲಾಸ್​ರೂಮ್​ನ ಬೋರ್ಡ್​ ಮೇಲೆ ಹುಟ್ಟುಹಬ್ಬದ ಶುಭಾಶಯಗಳು ಮೇಡಂ ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿದೆ. ಬೋರ್ಡ್​ ಮುಂದೆ ವಿದ್ಯಾರ್ಥಿಗಳ ಎದುರೇ ಕಜರಾರೆ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಹಾಡಿನ ಮಧ್ಯೆ ವಿದ್ಯಾರ್ಥಿ, ಶಿಕ್ಷಕಿ ಮೇಲೆ ದುಪ್ಪಟ್ಟ ಹೊದಿಸುತ್ತಾರೆ. ದುಪ್ಪಟ್ಟವನ್ನು ಹಿಡಿದು ಇನ್ನೂ ಮಾದಕವಾಗಿ ಶಿಕ್ಷಕಿ ಹೆಜ್ಜೆ ಹಾಕುತ್ತಾರೆ. ಕೊನೆಯಲ್ಲಿ ಶಿಕ್ಷಕಿ ಜೊತೆ ವಿದ್ಯಾರ್ಥಿನಿಯೊಬ್ಬಳು ಸಹ ಸೊಂಟ ಬಳುಕಿಸುತ್ತಾರೆ.
Never imagined we’d see a day where teachers are dancing literally on an item song inside a classroom.pic.twitter.com/4mKUl05RHY
— Jeetas posting their L”s (SWAGGY ERA) (@yeazlas)March 16, 2024

ವಿಡಿಯೋವನ್ನು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಲ್ಲದೆ, ಪರ-ವಿರೋಧ ಚರ್ಚೆಯನ್ನು ಹುಟ್ಟು ಹಾಕಿದೆ. ಸಂಪ್ರದಾಯಗಳು ಮತ್ತು ಮೌಲ್ಯಗಳಿಗೆ ಆದ್ಯತೆ ನೀಡುವ ನಮ್ಮ ದೇಶದಲ್ಲಿ, ಶಿಕ್ಷಕರು ತರಗತಿಯಲ್ಲಿ ಐಟಂ ಸಾಂಗ್‌ಗೆ ಈ ರೀತಿ ನೃತ್ಯ ಮಾಡುವುದು ಸೂಕ್ತವಲ್ಲ ಎಂದು ಕೆಲ ನೆಟ್ಟಿಗರು ಖಂಡಿಸಿದ್ದಾರೆ. ಇನ್ನು ಕೆಲವರು ಶಿಕ್ಷಕಿ ಪರ ಬ್ಯಾಟ್​ ಬೀಸಿದ್ದಾರೆ. ಶಿಕ್ಷಕಿ ಎಂಬ ಕಾರಣಕ್ಕೆ ಆಕೆಗೆ ನೃತ್ಯ ಮಾಡುವ ಅರ್ಹತೆ ಇಲ್ಲವೇ? ಸಂತೋಷದಿಂದ ಡಾನ್ಸ್​ ಮಾಡುವುದು ತಪ್ಪೇ? ಹುಡುಗಿಯರು ಮಾಡುವ ಪ್ರತಿಯೊಂದು ಕೆಲಸಕ್ಕೂ ತೀರ್ಪು ನೀಡುವುದು ನಮ್ಮ ಕೆಲಸವಲ್ಲ ಎಂದು ಹೇಳಿದ್ದಾರೆ.
2023ರ ಡಿಸೆಂಬರ್ ತಿಂಗಳಲ್ಲಿ ಜನಪ್ರಿಯ ಗಜಲ್ ಹಾಡು ರೂಸಾ ಶರಾರಾಗೆ ಶಿಕ್ಷಕಿ ಕಾಜಲ್ ಅಸುದಾನಿ ಎಂಬುವರು ತಮ್ಮ ವಿದ್ಯಾರ್ಥಿಗಳೊಂದಿಗೆ ಡಾನ್ಸ್​ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಕುರಿತು ನೆಟಿಜನ್‌ಗಳು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಬಳಿಕ ಈ ವಿಡಿಯೋವನ್ನು ತರಗತಿಯಲ್ಲಿ ಚಿತ್ರೀಕರಿಸಲಾಗಿಲ್ಲ ಬದಲಾಗಿ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳ ಭಾಗವಾಗಿ ವಿದ್ಯಾರ್ಥಿಗಳೊಂದಿಗೆ ಅಭ್ಯಾಸ ಮಾಡಲಾಗಿದೆ ಎಂದು ವಿವರಿಸಲಾಯಿತು.(ಏಜೆನ್ಸೀಸ್​)
ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ: ಬಿಗ್​ಬಾಸ್ ಒಟಿಟಿ​ ವಿನ್ನರ್ ಎಲ್ವಿಸ್ ಯಾದವ್​​ ಅರೆಸ್ಟ್​​!

‘ಕರಿಮಣಿ ಮಾಲೀಕ’ ಖ್ಯಾತಿಯ ಶಮಿಕಾ ತಾಯಿ ಕಣ್ಣೀರ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
