ವಿದ್ಯಾರ್ಥಿಗಳುಮತ್ತು ಶಿಕ್ಷಕರ ನಡುವಿನ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ಶಿಕ್ಷಕರು ತಮ್ಮ ಬೋಧನೆಯಿಂದ ವಿದ್ಯಾರ್ಥಿಗಳ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುತ್ತಾರೆ. ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪರಿಗಣಿಸಿ, ಒಳ್ಳೆಯದು ಮತ್ತು ಕೆಟ್ಟದ್ದನ್ನು ತಿಳಿ ಹೇಳಿ, ಸರಿದಾರಿಯಲ್ಲಿ ನಡೆಸುತ್ತಾರೆ. ಹೀಗಾಗಿಯೇ ವಿದ್ಯಾರ್ಥಿಗಳು ಸಹ ಇಂತಹ ಶಿಕ್ಷಕರ ಮೇಲೆ ಅಪಾರ ಪ್ರೀತಿಯನ್ನು ತೋರಿಸುತ್ತಾರೆ.
ಇತ್ತೀಚಿಗೆ ಕೆಲವು ವಿದ್ಯಾರ್ಥಿಗಳು ಮಾಡಿದ ಕೆಲಸವನ್ನು ನೋಡಿ ಶಿಕ್ಷಕಿಯೊಬ್ಬರು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದು ಸಾಮಾಜಿಕ ಜಾಲತಾಣಗಳ ಯುಗ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿಯೇ ಪ್ರತಿಯೊಂದು ಸುದ್ದಿಯೂ ದಿನನಿತ್ಯ ನಮ್ಮ ಕಣ್ಣ ಮುಂದೆ ಬಂದು ಹೋಗುತ್ತವೆ. ಆದರೆ ಕೆಲವೊಂದು ವಿಡಿಯೋಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ವೈರಲ್ ಆಗುತ್ತವೆ. ಈ ಸಾಲಿಗೆ ಶಾಲಾ-ಕಾಲೇಜುಗಳಲ್ಲಿ ನಡೆಯುವ ಘಟನೆಗಳೂ ಕೂಡ ಸೇರಿವೆ.
ವಿದ್ಯಾರ್ಥಿಗಳ ಡಾನ್ಸ್​ ರೀಲ್ಸ್​ ಸೇರಿದಂತೆ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳ ವಿಶೇಷ ಕ್ಷಣಗಳಿಗೆ ಸಂಬಂಧಿಸಿದ ವಿಡಿಯೋ ಆಗಾಗ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕಿಗೆ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ವಿದ್ಯಾರ್ಥಿಗಳು ನೀಡಿದ ಹಠಾತ್ ಸರ್ಪ್ರೈಸ್​ ನೋಡಿ ಶಿಕ್ಷಕಿ ಕಣ್ಣೀರು ಹಾಕಿದ ದೃಶ್ಯ ವೈರಲ್​ ಆಗಿರುವ ವಿಡಿಯೋದಲ್ಲಿದೆ.
ನೆಚ್ಚಿನ ಶಿಕ್ಷಕಿಗೆ ಉಡುಗೊರೆಯೊಂದನ್ನು ನೀಡಲು ತರಗತಿಗೆ ಆಹ್ವಾನಿಸಲಾಯಿತು. ಶಿಕ್ಷಕಿ ತರಗತಿಯನ್ನು ಪ್ರವೇಶಿಸಿದಾಗಿನಿಂದ ವಿಡಿಯೋ ತೆಗೆಯಲಾರಂಭಿಸಿದರು. ಕ್ಲಾಸ್​ರೂಮ್​ಗೆ ಎಂಟ್ರಿಯಾಗುತ್ತಿದ್ದಂತೆ ವಿಡಿಯೋ ರೆಕಾರ್ಡಿಂಗ್​ ಮಾಡುತ್ತಿರುವುದನ್ನು ನೋಡಿದ ಶಿಕ್ಷಕಿಗೆ ಮೊದಮೊದಲು ನಾಚಿಕೆಯಾಯಿತು. ಇದಾದ ಬಳಿಕ ಶಿಕ್ಷಕಿ ಒಳಗೆ ಬಂದು ಕುರ್ಚಿಯ ಮೇಲೆ ಕುಳಿತರು. ಈ ಕ್ರಮದಲ್ಲಿ ವಿದ್ಯಾರ್ಥಿಗಳು ತಾವು ತಂದಿದ್ದ ಉಡುಗೊರೆಯನ್ನು ಮೇಡಂಗೆ ನೀಡಿದರು. ಬಳಿಕ ಶಿಕ್ಷಕಿ ಉಡುಗೊರೆಯನ್ನು ತೆರೆದಾಗ ಅದರಲ್ಲಿದ್ದ ಫೋಟೋ ಫ್ರೇಮ್​ನಲ್ಲಿ ತಮ್ಮ ಫೋಟೋಗಳನ್ಗನು ನೋಡಿ ಭಾವುಕರಾದರು.
हमारे स्कूल या कॉलेज में एक ऐसी टीचर जरूरत होती है जो सबकी फेवरेट होती है।🥰🤩pic.twitter.com/beAtxjl6Hk
— ज़िन्दगी गुलज़ार है ! (@Gulzar_sahab)June 17, 2024

ವಿದ್ಯಾರ್ಥಿಗಳು ಮಾಡಿದ ಈ ಕೆಲಸಕ್ಕೆ ಮೇಡಂ ಕಣ್ಣೀರು ಹಾಕಿದರು. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಜೂನ್​ 17ರಂದು ಗುಲ್ಜರ್​ ಸಹಾಬ್​ (@Gulzar_sahab) ಹೆಸರಿನ ಎಕ್ಸ್​ ಪೇಜ್​ನಲ್ಲಿ ಅಪ್​ಲೋಡ್​ ಮಾಡಿದ್ದು, ಈವರೆಗೂ 6 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. 11 ಸಾವಿರ ಮಂದಿ ವಿಡಿಯೋವನ್ನು ಲೈಕ್ಸ್​ ಮಾಡಿದ್ದು, 1 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್​ ಮಾಡಿದ್ದಾರೆ.(ಏಜೆನ್ಸೀಸ್​)
ಒಂದು ಕಾಲದ ಕುಚಿಕು ಗೆಳೆಯನ ಪತ್ನಿಗೆ ಮಧ್ಯರಾತ್ರಿಯಲ್ಲಿ ವಾಯ್ಸ್​ ಮೆಸೇಜ್ ಕಳುಹಿಸಿದ್ದ! ದಚ್ಚು​ ವಿರುದ್ಧ ಗಂಭೀರ ಆರೋಪ

ಈ ಸಣ್ಣ ಬಟ್ಟಲಿನ ಬೆಲೆ ಬರೋಬ್ಬರಿ 248 ಕೋಟಿ ರೂಪಾಯಿ! ಇದರ ವಿಶೇಷತೆ ಕೇಳಿದ್ರೆ ಬೆರಗಾಗ್ತೀರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
