ನವದೆಹಲಿ:ಕೋವಿಡ್ ಸಾಂಕ್ರಾಮಿಕತೆಯ 3ನೇ ಅಲೆಯ ಭೀತಿ ಎದುರಿಸುತ್ತಿರುವ ಕೇರಳದಲ್ಲಿ ಕಟ್ಟುನಿಟ್ಟಿನ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯದ ಅಂತರ್ ಶಿಸ್ತೀಯ ತಂಡ ಸಲಹೆ ಮಾಡಿದೆ. ಪರೀಕ್ಷೆ, ಸಂರ್ಪತರ ಪತ್ತೆಯನ್ನು ಹೆಚ್ಚಿಸಬೇಕು. ನಿಯಂತ್ರಣ ನಿಯಮಗಳನ್ನು ಕಠಿಣವಾಗಿ ಜಾರಿ ಮಾಡಬೇಕು ಹಾಗೂ ಸಾಕಷ್ಟು ಆರೋಗ್ಯ ಮೂಲಸೌಕರ್ಯಗಳನ್ನು ಸ್ಥಾಪಿಸಬೇಕು ಎಂದು ತಂಡ ಶಿಫಾರಸು ಮಾಡಿದೆ.
ಆಸ್ಪತ್ರೆಗಳಲ್ಲಿ ಐಸಿಯು ಕೊರತೆ ನೀಗಿಸಬೇಕು, ವಿಶೇಷವಾಗಿ ಮಕ್ಕಳ ಐಸಿಯು ಬೆಡ್ ಸಂಖ್ಯೆ ಹೆಚ್ಚಳ ಮತ್ತು ವೆಂಟಿಲೇಟರ್ ಬೆಡ್ ಸೌಲಭ್ಯ ಹೆಚ್ಚಿಸುವುದು ಅಗತ್ಯ ಎಂದು ಹೇಳಿದೆ. ಕೇರಳದ 14 ಜಿಲ್ಲೆಗಳಲ್ಲಿ ಪ್ರಸ್ತುತ ದೈನಿಕ 20,000ಕ್ಕೂ ಅಧಿಕ ಕರೊನಾ ಕೇಸ್​ಗಳು ದಾಖಲಾಗುತ್ತಿವೆ. ರಾಜ್ಯದಲ್ಲಿ ಇದುವರೆಗೆ 13,325 ಕರೊನಾ ಸಾವು ಸಂಭವಿಸಿದೆ. ರಾಜ್ಯದ ಸರಾಸರಿ ಟೆಸ್ಟ್ ಪಾಸಿಟಿವಿಟಿ ದರ (ಟಿಪಿಆರ್) ಶೇಕಡ 12ರಕ್ಕೆ ಸನಿಹವಿದೆ. 1.74 ಲಕ್ಷ ಸಕ್ರಿಯ ಪ್ರಕರಣಗಳಿವೆ.
ತ್ರಿವಳಿ ಲಾಕ್​ಡೌನ್:ಸೋಂಕು ಹೆಚ್ಚಳದಿಂದ ಕಂಗೆಟ್ಟಿರುವ ಕೇರಳ ಸರ್ಕಾರ, 1,000 ಜನಸಂಖ್ಯೆಯಲ್ಲಿ 10ಕ್ಕಿಂತ ಹೆಚ್ಚು ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟ ಪ್ರದೇಶಗಳಲ್ಲಿ ತ್ರಿವಳಿ ಲಾಕ್​ಡೌನ್ ವಿಧಿಸಲು ನಿರ್ಧರಿಸಿದೆ. ವಾರಾಂತ್ಯದ ಎರಡು ದಿನಗಳ ಲಾಕ್​ಡೌನ್ ಬದಲು ಭಾನುವಾರ ಮಾತ್ರವೇ ಲಾಕ್​ಡೌನ್ ವಿಧಿಸಲು ಕೂಡ ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಬುಧವಾರ ವಿಧಾನಸಭೆಗೆ ತಿಳಿಸಿದ್ದಾರೆ.
3ನೇ ಅಲೆ ಘೋಷಣೆಗೆ ಸಕಾಲವಲ್ಲದೇಶದಲ್ಲಿ ಕರೊನಾ ಸೋಂಕಿನ ಆರ್ ಮೌಲ್ಯ ಕಳವಳಕಾರಿ ಮಟ್ಟದಲ್ಲಿದ್ದರೂ ಮೂರನೇ ಅಲೆ ಆರಂಭವಾಗಿದೆ ಎಂದು ಘೋಷಿಸಲು ಇದು ಸಕಾಲವಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಎರಡನೇ ಅಲೆಯೇ ಇನ್ನೂ ಅಂತ್ಯಗೊಂಡಿಲ್ಲ ಎನ್ನುವುದೂ ಕೆಲವು ವಿಜ್ಞಾನಿಗಳ ಅಭಿಮತವಾಗಿದೆ.
ದೇಶದಲ್ಲಿ ಮತ್ತೆ ಏರಿಕೆಭಾರತದಲ್ಲಿ ಕರೊನಾ ಪ್ರಕರಣಗಳು ಮತ್ತೆ ಏರಿಕೆಯಾಗಿದ್ದು ಬುಧವಾರ ಬೆಳಗಿನ ವರೆಗಿನ ಅವಧಿಯಲ್ಲಿ 42,625 ಹೊಸ ಕೇಸ್​ಗಳು ದೃಢಪಟ್ಟಿವೆ. 562 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 3,17,69,132ಕ್ಕೆ ಏರಿದೆ ಹಾಗೂ ಒಟ್ಟು 4,25,757 ಜನರು ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,10,353ಕ್ಕೆ ಏರಿದ್ದು ಅದು ಒಟ್ಟು ಸೋಂಕಿತರ ಶೇಕಡ 1.29 ಆಗಿದೆ. ಚೇತರಿಕೆ ಪ್ರಮಾಣ ಶೇಕಡ 97.37ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ದೈನಿಕ ಪಾಸಿಟಿವಿಟಿ ದರ ಶೇ. 2.31 ಹಾಗೂ ಸಾಪ್ತಾಹಿಕ ದರ ಶೇ. 2.36 ಆಗಿದೆ.
ಲಸಿಕೆ ಅಭಿಯಾನಕ್ಕೆ 200 ದಿನ
ಭಾರತದಲ್ಲಿ ಕರೊನಾ ತಡೆ ಲಸಿಕೆ ಅಭಿ ಯಾನ ಆರಂಭವಾಗಿ ಆಗಸ್ಟ್ 3ರಂದು 200 ದಿನ ತುಂಬಿದೆ. ಈ ಅವಧಿಯಲ್ಲಿ ಜನಸಂಖ್ಯೆಯ ಶೇಕಡ 7.87 ಜನರಿಗೆ 2 ಡೋಸ್ ಲಸಿಕೆ ಹಾಕಲಾಗಿದೆ. ಒಟ್ಟು 48,52,86,570 ಡೋಸ್ ಲಸಿಕೆಯನ್ನು ಫಲಾನುಭವಿಗಳು ಪಡೆದಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + eight =
Remember me
