ನವದೆಹಲಿ:ಕೊವಿಡ್​-19ರಿಂದಾದ ಬಿಕ್ಕಟ್ಟು ನಿರ್ವಹಣೆಗಾಗಿ ಪ್ರಧಾನಮಂತ್ರಿ ಮೋದಿಯವರು ನಿನ್ನೆ ಆತ್ಮ ನಿರ್ಭರ ಭಾರತ ಅಭಿಯಾನ ಹೆಸರಿನಲ್ಲಿ 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಿದ್ದಾರೆ.ಈ ಆರ್ಥಿಕ ಪ್ಯಾಕೇಜ್​ ದೇಶಾದ್ಯಂತ ಹೇಗೆ ಹಂಚಿಕೆಯಾಗುತ್ತದೆ? ಯಾವ್ಯಾವ ವರ್ಗಕ್ಕೆ ಎಷ್ಟು ಎಂಬಿತ್ಯಾದಿ ವಿಚಾರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ವಿವರಿಸಿದರು.
ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಒಂದು ಸಮಗ್ರ ದೃಷ್ಟಿಕೋನವನ್ನು ರೂಪಿಸಿದ್ದಾರೆ. ಸಮಾಜದ ಹಲವಾರು ವರ್ಗಗಳೊಂದಿಗೆ ವ್ಯಾಪಕ ಚರ್ಚೆ ನಡೆಸಿದ ನಂತರವೇ ಈ ಪ್ಯಾಕೇಜ್​ ಘೋಷಿಸಲಾಗಿದೆ.
ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಮತ್ತು ಆರ್ಥಿಕತೆಯ ಅತ್ಯಂತ ವೇಗದ ಬೆಳವಣಿಗೆಗೆ ಈ ಪ್ಯಾಕೇಜ್​ ಸಹಾಯಕವಾಗಲಿದೆ. ಸ್ವಾವಲಂಬಿ ಭಾರತ ಎಂದರೆ ನಮ್ಮ ರಾಷ್ಟ್ರ ಪ್ರತ್ಯೇಕವಾಗಿ ಇರುತ್ತದೆ ಎಂದೂ ಅಲ್ಲ. ನಾವು ನಮ್ಮ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಬ್ರ್ಯಾಂಡ್​ನ್ನಾಗಿ ಪರಿವರ್ತಿಸಬೇಕು. ಸ್ವಾವಲಂಬಿ ಭಾರತದ ಐದು ಆಧಾರ ಸ್ತಂಭಗಳಾದ ಆರ್ಥಿಕತೆ, ಮೂಲ ಸೌಕರ್ಯ, ವ್ಯವಸ್ಥೆ, ಜನಸಂಖ್ಯೆ, ಬೇಡಿಕೆ-ಪೂರೈಕೆಗಳನ್ನು ಉತ್ತೇಜನ ಮಾಡಲೆಂದೇ ಈ ಪ್ಯಾಕೇಜ್​ ಘೋಷಣೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದರು.
ಹಾಗೇ ಲಾಕ್​ಡೌನ್​ ಸಂದರ್ಭದಲ್ಲಿ ರೈತರಿಗೆ ಕಿಸಾನ್​ ಸಮ್ಮಾನ್​ ಯೋಜನೆಯ ಮೂಲಕ ನೆರವು ನೀಡಲಾಗಿದೆ. ಹಾಗೇ ಉಜ್ವಲಾ ಯೋಜನೆ ಮೂಲಕ ಬಡವರಿಗೆ ಉಚಿತ ಗ್ಯಾಸ್​ ವಿತರಣೆ ಮಾಡಲಾಗಿದೆ. ಈ ಯೋಜನೆ ಇಲ್ಲದಿದ್ದರೆ ಅವರಿಗೆ ಗ್ಯಾಸ್​ ಸಿಗುತ್ತಿರಲಿಲ್ಲ. 41 ಕೋಟಿ ಜನಧನ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಬಡವರಿಗೆ 71 ಸಾವಿರ ಟನ್ ಪಡಿತರ ವಿತರಿಸಲಾಗಿದೆ ಎಂದು ತಿಳಿಸಿದರು.
ಪ್ಯಾಕೇಜ್​ಗೆ ಸಂಬಂಧಪಟ್ಟಂತೆ ಇಂದು 15 ಹೊಸ ಕ್ರಮಗಳನ್ನು ಕೈಗೊಳ್ಳಲಾಗುವುದು. ಅದರಲ್ಲಿ 6 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಂಬಂಧಪಟ್ಟದ್ದಾಗಿವೆ. ಎರಡು ಇಪಿಎಫ್​ಗೆ, ಎರಡು ಎಚ್​ಎಫ್​ಸಿಎಸ್​ ಮತ್ತು ಎಂಎಫ್​ಐಎಸ್​ಗೆ ಹಾಗೂ ಒಂದು ಡಿಸ್ಕಾಮ್​ಗಳಿಗೆ, ಒಂದು ಗುತ್ತಿಗೆದಾರರು, ಒಂದು ರಿಯಲ್ ಎಸ್ಟೇಟ್​ ಮತ್ತು ಇತರರಿಗೆ ಸಂಬಂಧಪಟ್ಟದ್ದು ಎಂದು ತಿಳಿಸಿದರು. ಹಾಗೇ ಮೊದಲನೇದಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡುವುದಾಗಿ ತಿಳಿಸಿದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
